- Sunday
- April 20th, 2025

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯದಲ್ಲಿ ದಿನಾಂಕ 25.1.2025 ರಂದು ಭಾರತ ಸರಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ನಿ-ಕ್ಷಯ ಯೋಜನೆಯ ಅಡಿಯಲ್ಲಿ ಆಯುಷ್ ಇಲಾಖೆ ದಕ್ಷಿಣ ಕನ್ನಡದ ಮಾರ್ಗಸೂಚಿ ಪ್ರಕಾರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕ ನೇತೃತ್ವದಲ್ಲಿ ಕ್ಷಯ ರೋಗದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಸಲುವಾಗಿ ಬೀದಿ...

ಸುಳ್ಯ ತಾಲೂಕು ಆಡಳಿತ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ 76 ನೇ ಗಣರಾಜ್ಯೋತ್ಸವ ದಿನಾಚರಣೆ ಸುಳ್ಯ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಿತು. ಸುಳ್ಯ ತಹಶೀಲ್ದಾರ್ ಶ್ರೀಮತಿ ಮಂಜುಳಾ ರವರು ಧ್ವಜಾರೋಹಣ ನೆರವೇರಿಸಿ, ಪಥ ಸಂಚಲನ ಗೌರವ ವಂದನೆ ಸ್ವೀಕರಿಸಿದರು. ಸುಳ್ಯ ಪೊಲೀಸ್ ಇಲಾಖೆ, ನಿವೃತ್ತ ಸೈನಿಕರ ಸಂಘ,ಸುಳ್ಯ ಹೋಮ್ಹಾರ್ಡ್ಸ್, ಎನ್ ಸಿ ಸಿ,...

ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ 76ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ವಿವೇಕಾನಂದ ವೃತ್ತದ ಬಳಿ ಇರುವ ಬಿಸಿಎಂ ವಿದ್ಯಾರ್ಥಿನಿ ನಿಲಯದಲ್ಲಿ ಆಚರಿಸಲಾಯಿತು. ಜೇಸಿ ವಲಯ 15ರ ವಲಯಾಧಿಕಾರಿ ವಲಯ ಸಂಯೋಜಕರಾದ ಜೇಸಿ ಜೆಎಫ್ಎಂ ಗುರುಪ್ರಸಾದ್ ನಾಯಕ್ ಧ್ವಜಾರೋಹಣ ಗೈದು ಶುಭಹಾರೈಸಿದರು. ಕಾರ್ಯಕ್ರಮದಲ್ಲಿ ಜೇಸಿಐ ಪಯಸ್ವಿನಿಯ ಅಧ್ಯಕ್ಷರಾದ ಜೇಸಿ ಸುರೇಶ್ ಕಾಮತ್, ನಿಕಟಪೂರ್ವ ಅಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್...

ಕೆವಿಜಿ : ಸುಳ್ಯದ ಕೆ.ವಿ.ಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ 76ನೇ ವರ್ಷದ ಗಣರಾಜ್ಯ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕುರುಂಜಿಭಾಗ್, ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದರವರು ಧ್ವಜಾರೋಹಣವನ್ನು ನೆರವೇರಿಸಿ ಶುಭ ಹಾರೈಸಿದರು. ಈ ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.)ಸುಳ್ಯ ಇದರ ಅಧ್ಯಕ್ಷರ...

ಮಂಥನ ವೇದಿಕೆ ಮತ್ತು ಅಧಿವಕ್ತಾ ಪರಿಷತ್ ಸುಳ್ಯ ಇದರ ಸಹಯೋಗದೊಂದಿಗೆ ಜ.27 ರಂದು ಬೆಳಿಗ್ಗೆ 10.30 ಕ್ಕೆ ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ "ಸಂವಿಧಾನ ಬದಲಾಯಿಸಿದ್ದು ಯಾರು?" ಪುಸ್ತಕದ ಕುರಿತು ಗೋಷ್ಠಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾಜಿ ಸಚಿವರಾದ ಎನ್ ಮಹೇಶ್ ಆಗಮಿಸಲಿದ್ದಾರೆ. ಪುಸ್ತಕದ ಲೇಖಕರಾದ ವಿಕಾಸ್ ಕುಮಾರ್ ಪಿ...

ಕೆ ವಿ ಜಿ ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಸುಳ್ಯದಲ್ಲಿ ಜ 25ರಂದು ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಆಶ್ರಯದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು.ಭಾರತದ ಚುನಾವಣಾ ಆಯೋಗದ ಸಂಸ್ಥಾಪನಾ ದಿನವನ್ನು ಗುರುತಿಸಲು ಭಾರತದಲ್ಲಿ ವಾರ್ಷಿಕವಾಗಿ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಇದರ ಅಂಗವಾಗಿ ಎನ್ಎಸ್ಎಸ್ ಘಟಕದ ವಿದ್ಯಾರ್ಥಿಯಾದ...

ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದಿನ 05 ವರ್ಷಗಳ ಆಡಳಿತ ಮಂಡಳಿ ಅವಧಿಗೆ ಜ.19 ರಂದು ಚುನಾವಣೆ ನಡೆದು ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು, ಈ ನ್ಯಾಯಾಲಯದ ಮುಂದಿನ ಆದೇಶಕ್ಕೆ ಒಳಪಟ್ಟು ಫಲಿತಾಂಶವನ್ನು ಘೋಷಣೆ ಮಾಡಬೇಕಾಗಿರುವುದರಿಂದ ಪ್ರಸ್ತುತ ಆಡಳಿತ ಮಂಡಳಿಯ ಅವಧಿಯು ಮುಕ್ತಾಯವಾಗಿರುವುದರಿಂದ ಸಂಘದ ದೈನಂದಿನ ಚಟುವಟಿಕೆಗಳನ್ನು ನಡೆಸಲು ಅನುಕೂಲವಾಗುವ ದೃಷ್ಟಿಯಿಂದ ಆಡಳಿತ...

ಅರಂತೋಡಿನ ಆಟೋ ಚಾಲಕ, ತೊಡಿಕಾನ ಗ್ರಾಮದ ಅಡ್ಯಡ್ಕ ನಿವಾಸಿ ಕಂದಸ್ವಾಮಿ ಎಂಬವರು ಇಂದು ಬೆಳಿಗ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ವರದಿಯಾಗಿದೆ. ಕಂದಸ್ವಾಮಿಯವರು ನೇಣುಬಿಗಿದುಕೊಂಡ ವಿಷಯ ಗೊತ್ತಾಗಿ ಮನೆಯವರು ಅವರನ್ನು ಹಗ್ಗದಿಂದ ಇಳಿಸಿ, ಸಮೃದ್ಧಿ ಮಾರ್ಟಿನ ಅಂಬ್ಯುಲೆನ್ಸ್ ನಲ್ಲಿ ಸುಳ್ಯದ ಆಸ್ಪತ್ರೆಗೆ ತಂದರೂ, ಆ ವೇಳೆಗೆ ಅವರು ಕೊನೆಯುಸಿರೆಳೆದಿದ್ದರೆನ್ನಲಾಗಿದೆ. ಕಂದಸ್ವಾಮಿಯವರಿಗೆ 55 ವರ್ಷ ಪ್ರಾಯವಾಗಿತ್ತು. ಪತ್ನಿ...

ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಫೆ.1 ಮತ್ತು 2 ರಂದು ಜಾತ್ರೋತ್ಸವ ನಡೆಯಲಿದ್ದು ಇದರ ಅಂಗವಾಗಿ ಇಂದು ಗೊನೆ ಮುಹೂರ್ತ ನೆರವೇರಿತು. ಈ ಸಂದರ್ಭದಲ್ಲಿ ಅರ್ಚಕರಾದ ಮಹಾಬಲೇಶ್ವರ ಭಟ್, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರಾದ ಬಿ.ಕೆ.ಬೆಳ್ಯಪ್ಪ ಗೌಡ, ಗುತ್ತಿಗಾರು ಮುತ್ತಪ್ಪ ದೈವಸ್ಥಾನದ ಆಡಳಿತ ಮೊಕ್ತೇಸರರಾದ ವೆಂಕಟ್ ವಳಲಂಬೆ, ದೇವಚಳ್ಳ ಗ್ರಾ.ಪಂ.ಅಧ್ಯಕ್ಷ ಶೈಲೇಶ್ ಅಂಬೆಕಲ್ಲು, ವ್ಯವಸ್ಥಾಪನಾ...

ಪುತ್ತೂರು ಉಪ ವಿಭಾಗಾಧಿಕಾರಿ ಜುಬಿನ್ ಮಹಾ ಪಾತ್ರ ರವರು ರಾಯಚೂರಿಗೆ ವರ್ಗಾವಣೆ ಗೊಂಡಿರುತ್ತಾರೆ. ಮುಂದಿನ ಆದೇಶದ ವರೆಗೆ ರಾಯಚೂರು ನಗರ ಪಾಲಿಕೆಯ ಆಯುಕ್ತರಾಗಿ ಸರಕಾರ ಇವರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ. ಇವರು ಪುತ್ತೂರು ಉಪವಿಭಾಗದ ಸುಳ್ಯ ಬೆಳ್ತಂಗಡಿ ಕಡಬ ವ್ಯಾಪ್ತಿಯಲ್ಲಿ ಅಧಿಕಾರ ವಹಿಸಿಕೊಂಡ ಕೆಲವೇ ಸಮಯದಲ್ಲಿ ಜನಸ್ನೇಹಿಯಾಗಿ ಗುರುತಿಸಿಕೊಂಡಿದ್ದರು.ಕುಕ್ಕೆ ಸುಬ್ರಹ್ಮಣ ದೇವಸ್ಥಾನದ ಆಡಳಿತಾಧಿಕಾರಿಯಾಗಿದ್ದರು.

All posts loaded
No more posts