- Sunday
- April 20th, 2025

ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಆಮ್ಲೆಟ್ ವ್ಯಾಪಾರ ನಡೆಸುತ್ತಿರುವ ಕೇಶವ ಕಡೋಡಿ ಅವರ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ಬೀಗ ಒಡೆದು ನುಗ್ಗಿ ಜಾಲಾಡಿದ್ದಾರೆ. ಆದಿತ್ಯವಾರ ಸಂಜೆ ಅಂಗಡಿಗೆ ಬಂದಾಗ ವಿಷಯ ಗೊತ್ತಾಗಿದೆ. ಗೂಡಂಗಡಿಯ ಬಾಗಿಲು, ಬೀಗ ಒಡೆದು ಹಾನಿಯಾಗಿದ್ದು ಕಳ್ಳರು ಸ್ಥಳೀಯರೇ ಇರಬೇಕೆಂಬ ಅನುಮಾನ ಮೂಡುವಂತಾಗಿದೆ..

ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಸಮಾಜ ಸೇವಕರು, ಉದ್ಯಮಿಗಳು ಹಾಗೂ ಸೂರು ಇಲ್ಲದವರಿಗೆ ಸೂರು ನಿರ್ಮಾಣದ ರೂವಾರಿ ಮಹಮ್ಮದ್ ಕುಕ್ಕುವಳ್ಳಿ ಅವರು ಇಂದು ಅರಂತೋಡಿಗೆ ಬೇಟಿ ನೀಡಿದರು. ಈ ಸಂದರ್ಭದಲ್ಲಿ ಅವರನ್ನು ಅರಂತೋಡು ಜುಮಾ ಮಸೀದಿ ಅಧ್ಯಕ್ಷರಾದ ಅಶ್ರಫ್ ಗುಂಡಿ ಹಾಗೂ ಎಸ್.ಕೆ.ಎಸ್.ಎಸ್.ಎಫ್ ನ ವಿಖಾಯತಂಡದ ಸದಸ್ಯ ತಾಜುದ್ಧೀನ್ ಅರಂತೋಡು ಶಾಲು ಹೊದಿಸಿ,...

ದೇವಚಳ್ಳ ಗ್ರಾಮದ ಮುಂಡೋಡಿ ಪದ್ಮಯ್ಯ ಗೌಡ ರವರ ಹಿರಿಯ ಮಗನಾದ ಮುಂಡೋಡಿ ಶಿವಾನಂದ ಗೌಡ ರವರು ಜ.19 ರಂದು ಸ್ವಗೃಹದಲ್ಲಿ ನಿಧನರಾದರು.ಮೃತರಿಗೆ 76 ವರ್ಷ ವಯಸ್ಸಾಗಿತ್ತು. 1984 ರಲ್ಲಿ ಸಹಾಯಕ ಸರ್ಕಾರಿ ಅಭಿಯೋಜಕರಾಗಿ ತಮ್ಮ ವೃತ್ತಿಯನ್ನು ಆರಂಭಿಸಿದ ಇವರು ಮೈಸೂರು, ಕಾರ್ಕಳ ಹಾಗೂ ಮಂಗಳೂರು ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ಸಲ್ಲಿಸಿದ್ದು, ಇವರು ಕೆ.ಇ.ಬಿ ಯಲ್ಲಿ ಕಾನೂನು...

ಸುಳ್ಯ ಹಾಗೂ ಬೆಟ್ಟoಪಾಡಿ ನಡುವಿನ ರಸ್ತೆಯು ಹೊಂಡ ಕೊಂಡ ಗಳಿಂದ ಹದಗೆಟ್ಟಿದ್ದು ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿತ್ತು ಇದನ್ನು ಮನಗಂಡ ಸ್ಥಳೀಯ ಆಟೋ ಚಾಲಕರಾದ ಶೇರಾಜ್ ಕಲ್ಲುಗುಂಡಿ ಬೆಟ್ಟoಪಾಡಿ ಹಾಗೂ ಪಿಗ್ಮಿ ಕಲೆಕ್ಟರ್ ಮೂರ್ತಿ ಯವರು ಹೊಂಡಗಳನ್ನು ಮುಚ್ಚಿ ಸಂಚಾರಕ್ಕೆ ಸಹಕಾರ ನೀಡಿದರು

ಸುಬ್ರಹ್ಮಣ್ಯ ಜ.20: ಕರ್ನಾಟಕ ರಾಜ್ಯ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ಪತ್ನಿ ಹಾಗೂ ಮಗಳೊಂದಿಗೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಇಂದು ಸೋಮವಾರ ಭೇಟಿ ನೀಡಿದರು. ಶ್ರೀ ದೇವಳದಲ್ಲಿ ದೇವರ ದರ್ಶನ ಮಾಡಿದ ನಂತರ ಪುರೋಹಿತ ರಮೇಶ್ ಅಸ್ರಣ್ಣರವರು ದೇವರ ಪ್ರಸಾದ ನೀಡಿ ಶಾಲು ಹಾಕಿ ಗೌರವಿಸಿದರು. ಕ್ಷೇತ್ರದ ದೈವ...

ಸುಬ್ರಹ್ಮಣ್ಯ ಜ.19: “ನಮಗೆ ನಮ್ಮ ಜೀವನದಲ್ಲಿ ಎರಡು ಕಣ್ಣುಗಳು ಎಷ್ಟು ಮುಖ್ಯವೋ ಅಷ್ಟೇ ಅದನ್ನ ಕಾಪಾಡಿಕೊಂಡು ಬರುವುದು ಕೂಡ ಮುಖ್ಯ. ರೋಟರಿಯಂತಹ ಅಂತರಾಷ್ಟ್ರೀಯ ಸಂಸ್ಥೆ ಸಮಾಜದಲ್ಲಿ ಸಮಾಜಮುಖಿ ಸೇವಾ ಕಾರ್ಯಕ್ರಮಗಳನ್ನು ಮಾಡುವುದರೊಂದಿಗೆ ಆರೋಗ್ಯದ ಕಡೆ ಹೆಚ್ಚು ಗಮನವಿಟ್ಟು ಆರೋಗ್ಯ ತಪಾಸಣೆ ಶಿಬಿರ, ಕಣ್ಣಿನ ತಪಾಸಣಾ ಶಿಬಿರ ನಡೆಸುತ್ತಾ ಬಂದಿರುವುದು ಶ್ಲಾಘನೀಯ. ಸಾರ್ವಜನಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು”...

ದ.ಕ.ಸಹಕಾರಿ ನೌಕರರ ಸಹಕಾರ ಸಂಘದ ನಿರ್ದೇಶಕರಾಗಿ ಪುನರಾಯ್ಕೆಯಾದ ವೆಂಕಟರಮಣ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರವರಿಗೆ ಸೊಸೈಟಿ ವತಿಯಿಂದ ಗೌರವಾರ್ಪಣೆ ಮಾಡಲಾಯಿತು. ಸಂಘದ ಅಧ್ಯಕ್ಷರಾದ ಪಿ.ಸಿ.ಜಯರಾಮ್, ಉಪಾಧ್ಯಕ್ಷರಾದ ಮೋಹನ ರಾಮ್ ಸುಳ್ಳಿ ಸನ್ಮಾನಿಸಿದರು. ಆಡಳಿತ ಮಂಡಳಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು

ಪೆರುವಾಜೆ : ಇತಿಹಾಸ ಪ್ರಸಿದ್ಧ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದಲ್ಲಿ ರವಿವಾರ ರಾತ್ರಿ ಭಕ್ತರು ಶ್ರೀದೇವಿಯ ಶಯನೋತ್ಸವಕ್ಕೆ ಸಮರ್ಪಿಸಿದ ರಾಶಿ ರಾಶಿ ಮಲ್ಲಿಗೆ ಹೂವಿನಲ್ಲಿ ಮಹಾಮಾತೆ ಜಲದುರ್ಗಾದೇವಿ ಪವಡಿಸಿದಳು.! ಇಂತಹ ಅಪೂರ್ವ ಕ್ಷಣ ಶ್ರೀ ಕ್ಷೇತ್ರ ಸಾಕ್ಷಿಯಾಯಿತು. ಬ್ರಹ್ಮರಥೋತ್ಸವದ ಬಳಿಕ ಜಲದುರ್ಗಾದೇವಿ ಶಯನೋತ್ಸವ ನಡೆಯಲಿದ್ದ ಕಾರಣ ಮಲ್ಲಿಗೆ ಶಯನೋತ್ಸವ ಎಂಬ ವಿಶಿಷ್ಟ ಸೇವೆಗೆ...

All posts loaded
No more posts