Ad Widget

ಕಜ್ಜೋಡಿ, ಮುಳ್ಳುಬಾಗಿಲು, ಕರಂಗಲ್ಲು ಹಾಗೂ ಕಟ್ಟ-ಗೋವಿಂದನಗರ ಭಾಗದಲ್ಲಿ ಬಿ.ಎಸ್.ಎನ್.ಎಲ್ ನೆಟ್ವರ್ಕ್ ಅವ್ಯವಸ್ಥೆ

ಪ್ರಯೋಜನಕ್ಕೆ ಬಾರದಂತಾಯಿತೇ ಮುಳ್ಳುಬಾಗಿಲು ಎಂಬಲ್ಲಿ ನೂತನವಾಗಿ ನಿರ್ಮಾಣಗೊಂಡ ಟವರ್..!?

. . . . . . . . .

ಸಂಬಧಪಟ್ಟ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಜನತೆ

. . . . . . .


ದೇಶದ ಅಭಿವೃದ್ಧಿ ಆಗಬೇಕಾದರೆ ಹಳ್ಳಿಗಳು ಅಭಿವೃದ್ಧಿ ಆಗಬೇಕು. ಹಳ್ಳಿ-ಹಳ್ಳಿಗಳನ್ನು ಸೇರಿಸುವ ನಿಟ್ಟಿನಲ್ಲಿ ಬಿ.ಎಸ್.ಎನ್.ಎಲ್ ದೇಶದ ಅನೇಕ ಪ್ರದೇಶಗಳಲ್ಲಿ ಹೊಸ ಟವರ್ ಗಳನ್ನು ನಿರ್ಮಿಸಿ 4ಜಿ ಸೇವೆಯನ್ನು ನೀಡುತ್ತಿದೆ. ಅದರಲ್ಲಿ ಸುಳ್ಯ ತಾಲೂಕಿನ ಅನೇಕ ಗ್ರಾಮಗಳೂ ಕೂಡ ಸೇರಿವೆ ಎಂಬುವುದು ಖುಷಿಯ ವಿಚಾರ.
ಆದರೆ ಇಂದು ನಾವು ಹೇಳಲು ಹೊರಟಿರುವುದು ಸುಳ್ಯ ತಾಲೂಕಿನ ಒಂದು ಊರಿನಲ್ಲಿ ಇತ್ತೀಚೆಗೆ ನಿರ್ಮಾಣಗೊಂಡ ನೂತನ ಬಿ.ಎಸ್.ಎನ್.ಎಲ್ ಟವರ್ ನ ಅವ್ಯವಸ್ಥೆಯ ಬಗ್ಗೆ…. ಹೌದು, ಸುಳ್ಯ ತಾಲೂಕಿನ ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ಹಾಗೂ ಕೊಲ್ಲಮೊಗ್ರು ಸಮೀಪದ ಮುಳ್ಳುಬಾಗಿಲು, ಕರಂಗಲ್ಲು ಹಾಗೂ ಕಟ್ಟ-ಗೋವಿಂದನಗರ ಭಾಗಗಳಲ್ಲಿ ಕಾಡುತ್ತಿದ್ದ ಬಹುಕಾಲದ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇತ್ತೀಚೆಗೆ ಮುಳ್ಳುಬಾಗಿಲು ಎಂಬಲ್ಲಿ ನೂತನ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣಗೊಂಡಿತ್ತು. ಆದರೆ ಟವರ್ ನಿರ್ಮಾಣಗೊಂಡು ಕಾರ್ಯಾರಂಭ ಮಾಡಲು ಪ್ರಾರಂಭಿಸಿ ತಿಂಗಳುಗಳೇ ಕಳೆದರೂ ಈ ಭಾಗದ ನೆಟ್ವರ್ಕ್ ಸಮಸ್ಯೆ ಇನ್ನೂ ಬಗೆಹರಿದಿಲ್ಲ. ಕಾರಣ ಈ ಟವರ್ ನಿಂದ ಸುತ್ತಲಿನ ಯಾವ ಊರುಗಳಿಗೂ ಕೂಡ ಸರಿಯಾದ ರೀತಿಯಲ್ಲಿ ನೆಟ್ವರ್ಕ್ ತಲುಪುತ್ತಲೇ ಇಲ್ಲ.
ಕೊರೋನಾ ಕಾಲಘಟ್ಟದಲ್ಲಿ ಸರ್ಕಾರ ಕಂಪೆನಿಗಳಿಗೆ ವರ್ಕ್ ಫ್ರಮ್ ಹೋಮ್ ಹಾಗೂ ಶಾಲಾ ವಿದ್ಯಾರ್ಥಿಗಳಿಗೆ ಆನ್ಲೈನ್ ಕ್ಲಾಸ್ ನಡೆಸುವಂತೆ ಆದೇಶ ಹೊರಡಿಸಿತ್ತು. ಆ ಸಂದರ್ಭದಲ್ಲಿ ಈ ಭಾಗದ ಜನರು ನೆಟ್ವರ್ಕ್ ಹುಡುಕಲು ಅನುಭವಿಸಿದ ಕಷ್ಟ ಅಷ್ಟಿಷ್ಟಲ್ಲ. ಕೆಲವರು ಮನೆಗೆ ಇಂಟರ್ನೆಟ್ ಕೇಬಲ್ ಕನೆಕ್ಷನ್ ತೆಗೆದುಕೊಂಡರೂ ಕೂಡ ಹೆಚ್ಚಿನವರು ತಮ್ಮ ಆಫೀಸ್ ಕೆಲಸಗಳನ್ನು ನಿರ್ವಹಿಸಲು ಹಾಗೂ ಆನ್ಲೈನ್ ಕ್ಲಾಸ್ ಗಳಿಗಾಗಿ ಕಾಡು-ಗುಡ್ಡ ಹತ್ತಿ ನೆಟ್ವರ್ಕ್ ಹುಡುಕಿ ಕಷ್ಟಪಟ್ಟು ತಮ್ಮ ಕೆಲಸಗಳನ್ನು ನಿರ್ವಹಿಸುತ್ತಿದ್ದರು. ಈ ರೀತಿ ಆಗಿನ ಸಂದರ್ಭದಲ್ಲಿ ಈ ಭಾಗದ ಜನರು ತಮ್ಮೂರಿನ ನೆಟ್ವರ್ಕ್ ಸಮಸ್ಯೆಗೆ ತಾತ್ಕಾಲಿಕವಾದ ಪರಿಹಾರವನ್ನು ಕಂಡುಕೊಂಡರೂ ಕೂಡ ಬಹುಕಾಲದ ನೆಟ್ವರ್ಕ್ ಸಮಸ್ಯೆ ಮಾತ್ರ ಹಾಗೆಯೇ ಉಳಿದಿತ್ತು. ಆದರೆ ಇದೀಗ ಈ ಸಮಸ್ಯೆಗೆ ಪರಿಹಾರ ಎಂಬಂತೆ ಮುಳ್ಳುಬಾಗಿಲಿನಲ್ಲಿ ನೂತನ ಬಿ.ಎಸ್.ಎನ್.ಎಲ್ ಟವರ್ ನಿರ್ಮಾಣಗೊಂಡು ಕಾರ್ಯಾರಂಭ ಪ್ರಾರಂಭಿಸಿದರೂ ಕೂಡ ಸುತ್ತಲಿನ ಕಜ್ಜೋಡಿ, ಕರಂಗಲ್ಲು, ಮುಳ್ಳುಬಾಗಿಲು ಹಾಗೂ ಕಟ್ಟ-ಗೋವಿಂದನಗರ ಸೇರಿದಂತೆ ಈ ಟವರ್ ನ ವ್ಯಾಪ್ತಿಯ ಯಾವ ಊರುಗಳಿಗೂ ಕೂಡ ಈ ಟವರ್ ನ ನೆಟ್ವರ್ಕ್ ತಲುಪದೇ ಇರುವುದು ವಿಪರ್ಯಾಸ. ಆದ್ದರಿಂದ ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತು ಇತ್ತ ಗಮನ ಹರಿಸಿ ಈ ನೂತನ ಟವರ್ ಅನ್ನು ಸರಿಪಡಿಸಿ ಈ ಭಾಗದ ನೆಟ್ವರ್ಕ್ ಸಮಸ್ಯೆಯನ್ನು ಪರಿಹರಿಸುವರೇ ಕಾದು ನೋಡಬೇಕಾಗಿದೆ.✍️ಉಲ್ಲಾಸ್ ಕಜ್ಜೋಡಿ


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading