ಕಲ್ಮಡ್ಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅವಿರೋಧ ಆಯ್ಕೆ ಜ.30 ರಂದು ನಡೆಯಿತು. .
ಅಧ್ಯಕ್ಷರಾಗಿ ಹಿರಿಯ ಸಹಕಾರಿ ಮಾಜಿ ಅಧ್ಯಕ್ಷ ಉದಯಕುಮಾರ್ ಬೆಟ್ಟ, ಉಪಾಧ್ಯಕ್ಷರಾಗಿ ರಾಮ ನಾಯ್ಕ ಉಡುವೆಕೋಡಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಅಶೋಕ ಜಿ. ಗೋಳ್ತಾಜೆ, ತೃಪ್ತಿ ಯು., ರವಿಕಿರಣ ಎ., ಹರೀಶ್ ಎಂ. ಮಾಳಪ್ಪಮಕ್ಕಿ, ಮೀನಾಕ್ಷಿ ಬಿ. ಬೊಮ್ಮೆಟ್ಟಿ, ಸುಧಾ ಎಸ್. ಭಟ್ ಮೇಲಿನಮನೆ, ಮಹೇಶ ಎ. ಆಕ್ರಿಕಟ್ಟೆ, ವಿಶ್ವನಾಥ, ಯು. ಬೊಳಿಯೂರು, ಯಂ. ಬಾಲಕೃಷ್ಣ ಮೂಲೆಮನೆ ಹಾಗೂ ಗೋಪಾಲ ಪಿ. ಪೆರಿಯಪ್ಪು ಉಪಸ್ಥಿತರಿದ್ದರು.
ಇಲ್ಲಿ ಉದಯ ಕುಮಾರ್ ಬೆಟ್ಟ ನೇತೃತ್ವದ ಸಮನ್ವಯ ರಂಗದ 10 ಮತ್ತು ಸಹಕಾರ ರಂಗದ ಇಬ್ಬರು ನಿರ್ದೆಶಕರುಗಳಿದ್ದಾರೆ.