ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸುಳ್ಯ ತಾಲೂಕು ಕಲ್ಮಕಾರು ಗ್ರಾಮದಿಂದ ವರದಿಯಾಗಿದ್ದು, ಬಾಳೆಬೈಲು ನಿವಾಸಿ ಶ್ರೀಮತಿ ಭಾಗೀರಥಿ ಪಾಂಡಿಗದ್ದೆ ಎಂಬುವವರು ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ.
ಮಹಿಳೆ ವಿಷ ಸೇವಿಸಿದ್ದು ಗೊತ್ತಾದ ತಕ್ಷಣ ಹರಿಹರ ಪಳ್ಳತ್ತಡ್ಕದ ವೈದ್ಯರಾದ ಡಾ| ಗಿರೀಶ್ ರವರಲ್ಲಿಗೆ ತರಲಾಗಿದ್ದು, ಮಹಿಳೆ ಆದಾಗಲೇ ಮೃತಪಟ್ಟಿದ್ದರು ಎಂದು ತಿಳಿದುಬಂದಿದೆ. ಬಳಿಕ ಸುಳ್ಯ ಸರಕಾರಿ ಆಸ್ಪತ್ರೆಗೆ ತರಲಾಗಿದೆ.
ಮೃತರಿಗೆ 42 ವರ್ಷ ವಯಸ್ಸಾಗಿದ್ದು, ಮೃತರು ಪತಿ ಉಮೇಶ್, ಪುತ್ರ ಉದಯ ಹಾಗೂ ಪುತ್ರಿ ಶ್ರೀಮತಿ ವಿದ್ಯಾ ರನ್ನು ಅಗಲಿದ್ದಾರೆ.
- Saturday
- April 19th, 2025