ಸುಳ್ಯ ಸರ್ಕಾರಿ ಆಸ್ಪತ್ರೆ ಯಲ್ಲಿ ಇಂದು ತಾಲೂಕಿನ ವಿಶೇಷ ಚೇತನರಿಗೆ ಗುರುತಿನ ಚೀಟಿ ನೀಡುವ ಮತ್ತು ರಿನೀವಲ್ ಮಾಡುವ ಕ್ಯಾಂಪ್ ನಡೆಯಿತು. ತಾಲ್ಲೂಕು ಪಂಚಾಯತ್ ನ ವಿಕಲಚೇತನರ ಇಲಾಖೆಯ ಎಂ ಆರ್ ಡಬ್ಲ್ಯೂ ಚಂದ್ರಶೇಖರ್ ನಗರ ಪಂಚಾಯತ್ ನ ವಿಕಲ ಚೇತನರ ಇಲಾಖೆಯ ಯು ಆರ್ ಡಬ್ಲ್ಯೂ ಪ್ರವೀಣ್ ನಾಯಕ್, ಗ್ರಾಮ ಪಂಚಾಯತ್ ಗಳ ವಿ ಆರ್ ಡಬ್ಲ್ಯೂ ರವರಾದ, ಉಮಾವತಿ, ಪುಷ್ಪ, ಹರಿಣಿ, ಕಾವೇರಿ, ಹರ್ಷಿತ್, ವೆಂಕಟ್ರಮಣ, ಸದಾನಂದ, ಕೃಷ್ಣ ಪ್ರಸಾದ್, ಷಣ್ಮುಖ, ಉಮ್ಮರ್, ರಂಜಿನಿ, ಲಿಖಿತ, ಶರಣ್ಯ, ಭವ್ಯ ಹಾಗೂ ದಾದಿ ನಯನ ಉಪಸ್ಥಿತರಿದ್ದರು. ವೈದ್ಯಧಿಕಾರಿ ಡಾ. ಕರುಣಾಕರ್ ಅವರ ನೇತೃತ್ವದಲ್ಲಿ ಎಲ್ಲಾ ತಜ್ಞ ವೈದ್ಯರು ಉಪಸ್ಥಿತರಿದ್ದು, ಈ ಸಂದರ್ಭದಲ್ಲಿ ಹಲವಾರು ಜನ ವಿಶೇಷ ಚೇತನರು ಇದರ ಪ್ರಯೋಜನ ಪಡೆದುಕೊಂಡರು
- Thursday
- January 30th, 2025