ಮಂಥನ ವೇದಿಕೆ ಮತ್ತು ಅಧಿವಕ್ತಾ ಪರಿಷತ್ ಸುಳ್ಯ ಇದರ ಸಹಯೋಗದೊಂದಿಗೆ ಜ.27 ರಂದು ಬೆಳಿಗ್ಗೆ 10.30 ಕ್ಕೆ ಸುಳ್ಯದ ಲಯನ್ಸ್ ಕ್ಲಬ್ ನಲ್ಲಿ “ಸಂವಿಧಾನ ಬದಲಾಯಿಸಿದ್ದು ಯಾರು?” ಪುಸ್ತಕದ ಕುರಿತು ಗೋಷ್ಠಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಮಾಜಿ ಸಚಿವರಾದ ಎನ್ ಮಹೇಶ್ ಆಗಮಿಸಲಿದ್ದಾರೆ. ಪುಸ್ತಕದ ಲೇಖಕರಾದ ವಿಕಾಸ್ ಕುಮಾರ್ ಪಿ ವಿಚಾರ ಮಂಡನೆ ಮಾಡಲಿದ್ದಾರೆ. ಸುಳ್ಯ ಲಯನ್ಸ್ ಕ್ಲಬ್ ಅಧ್ಯಕ್ಷ ರಾಮಕೃಷ್ಣ ರೈ
ದೀಪ ಪ್ರಜ್ವಲನೆ ಮಾಡಲಿದ್ದಾರೆ ಎಂದು ಸಂಘಕರು ತಿಳಿಸಿದ್ದಾರೆ.