ಸುಳ್ಯ ಭೂ ಅಭಿವೃದ್ಧಿ (LD) ಬ್ಯಾಂಕ್ ಅಧ್ಯಕ್ಷರಾಗಿ ಜಯರಾಮ್ ರೈ ಜಾಲ್ಸೂರು ಹಾಗೂ ಉಪಾಧ್ಯಕ್ಷರಾಗಿ ಅವಿನಾಶ್ ಕುರುಂಜಿ ಮತ್ತು ಕೋಶಾಧಿಕಾರಿಯಾಗಿ ಸುಬ್ರಹ್ಮಣ್ಯ ಭಟ್ ಆಯ್ಕೆಯಾದರು. ಸಿ.ಎ. ಬ್ಯಾಂಕ್ ಸಭಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮುಖಂಡರುಗಳಾದ ವಿನಯಕುಮಾರ್ ಕಂದಡ್ಕ, ಕುಸಮಾಧರ ಎ.ಟಿ., ಸುವರ್ಣಿನಿ ಎಸ್., ಸೋಮನಾಥ ಪೂಜಾರಿ ಹಾಗೂ ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾದ ರಮೇಶ್ ಪಿ., ವಿಶಾಲಾಕ್ಷಿ, ಸವಿತಾ ಕೆ.ಜೆ, ರಮೇಶ್ ಪಿ, ಈಶ್ವರಚಂದ್ರ ಎಂ, ಅಚ್ಚುತ ಕೆ., ಮಹಾವೀರ ಜಿ., ಗಣಪಯ್ಯ ಪಿ., ಕಾವೇರಿ ಕೆ. ಉಪಸ್ಥಿತರಿದ್ದರು. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ 14 ರಲ್ಲಿ 12 ಸ್ಥಾನ ಬಿಜೆಪಿ ಬೆಂಬಲಿತರು ಪಡೆದಿದ್ದರು.