Ad Widget

ಗುತ್ತಿಗಾರು : ಕಳ್ಳತನ ಪ್ರಕರಣ – ಪಿಕ್ಸ್ ಮಾಡಲಾಗಿದೆ ಊರವರ ಆರೋಪ – ಠಾಣಾಧಿಕಾರಿಯಿಂದ ನಿರಾಕರಣೆ

ಇತ್ತೀಚೆಗೆ ಗುತ್ತಿಗಾರಿನಲ್ಲಿ ನಡೆದ ಕಳ್ಳತನ ಪ್ರಕರಣದಲ್ಲಿ ಕೊಲ್ಲಮೊಗ್ರದ ವ್ಯಕ್ತಿಯನ್ನು ಸುಬ್ರಹ್ಮಣ್ಯ ಪೋಲೀಸರು ಸಿಸಿಟಿವಿ ಪೂಟೇಜ್ ಆಧಾರದಲ್ಲಿ ಬಂಧಿಸಿದ್ದರು. ಇದೀಗ ಈ ಘಟನೆಗೆ ಸಂಬಂಧಿಸಿದಂತೆ ಗ್ರಾಮಸ್ಥರಲ್ಲಿ ಸಂಶಯ ಮನೆ ಮಾಡಿದ್ದು, ಆತನನ್ನು ಪಿಕ್ಸ್ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದ್ದು, ಪೋಲೀಸರ ತನಿಖೆಯ ಬಳಿಕವೇ ನಿಜಾಂಶ ಬಯಲಾಗಬೇಕಿದೆ.

. . . . . . . . .

ಆತ ಕಳ್ಳತನ ಮಾಡುವಂತಹ ವ್ಯಕ್ತಿ ಅಲ್ಲ, ಸಿಸಿಟಿವಿ ಯಲ್ಲಿ ಕಾಣುವ ವ್ಯಕ್ತಿ ಅವರಲ್ಲ, ಗುತ್ತಿಗಾರಿನಲ್ಲಿ ಕಳ್ಳತನ ನಡೆದ ದಿನ ಕರುಣಾಕರ ಅವರು ಕೊಲ್ಲಮೊಗ್ರುವಿನ ಅವರ ಮನೆಯಲ್ಲೇ ಇದ್ದರು, ಹಾಗಾಗಿ ಈ ಪ್ರಕರಣಕ್ಕೂ ಕರುಣಾಕರ ಅವರಿಗೂ ಯಾವುದೇ ರೀತಿಯ ಸಂಬಂಧ ಇಲ್ಲ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ.
ಈ ಬಗ್ಗೆ ಅವರ ಮನೆಯವರು ಹಾಗೂ ಊರವರು ಸೇರಿ ದೈವಸ್ಥಾನದಲ್ಲಿ ಪ್ರಾರ್ಥನೆ ಮಾಡಿದ್ದು, ತಪ್ಪು ಮಾಡದವರಿಗೆ ಶಿಕ್ಷೆಯಾಗದೇ ಅಪರಾಧಿಗೆ ಶಿಕ್ಷೆಯಾಗಬೇಕು ಎಂದು ದೈವದ ಎದುರು ಪ್ರಾರ್ಥಿಸಿದ್ದು, ಮುಂದೆ ಗುತ್ತಿಗಾರಿನ ಮುತ್ತಪ್ಪ ದೈವಸ್ಥಾನದ ಎದುರು ಕೂಡ ಪ್ರಾರ್ಥನೆ ನಡೆಸಲು ತೀರ್ಮಾನಿಸಿದ್ದೇವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

. . . . . . .

ಈ ಬಗ್ಗೆ ಠಾಣಾಧಿಕಾರಿಯವರನ್ನು ಸಂಪರ್ಕಿಸಿದಾಗ “ಕಳ್ಳತನ ಪ್ರಕರಣದಲ್ಲಿ ಬಂಧಿಸಲಾದ ವ್ಯಕ್ತಿಯ ತನಿಖೆಯ ವೇಳೆಯಲ್ಲಿ ಕಳ್ಳತನದ ಸಂಪೂರ್ಣ ಮಾಹಿತಿ ನೀಡಿದ್ದಾರೆ.‌ ಅಲ್ಲದೇ ಪೋಲಿಸ್ ಅಧಿಕಾರಿಗಳು ಕೇವಲ ಎರಡು ದಿನಗಳಲ್ಲಿ ಪತ್ತೆಹಚ್ಚಿದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅಭಿನಂದನೆಗಳನ್ನು ಸಲ್ಲಿಸಿದರ ಹಿನ್ನಲೆಯಲ್ಲಿ ಇದೀಗ ಕೆಲವರು ಪೋಲಿಸ್ ಇಲಾಖೆಯ ಮೇಲೆ ಸುಳ್ಳು ಆರೋಪ ಹೊರಿಸುತ್ತಿದ್ದಾರೆ.‌ ಅಷ್ಟೇ ಅಲ್ಲದೇ ಆರೋಪಿಯ ಪರವಾಗಿ ಕೆಲ ನಾಯಕರು ಕರೆ ಮಾಡಿ ಬಿಡುವಂತೆ ವಿನಂತಿಸಿದಾಗ ತಪ್ಪು ಮಾಡಿದವರಿಗೆ ಕಾನೂನು ಪ್ರಕಾರ ಶಿಕ್ಷೆಯಾಗಬೇಕು ಎಂದು ಹೇಳಿದ್ದೇವೆ. ತಪ್ಪನ್ನು ಮುಚ್ಚಿಹಾಕುವ ಕೆಲಸವನ್ನು ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದು ನಾವು ಕಾನೂನು ಪ್ರಕಾರವೇ ನ್ಯಾಯಲಯಕ್ಕೆ ಹಾಜರು ಪಡಿಸಿದ್ದು ನ್ಯಾಯಲಯವು ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಿದೆ” ಎಂದು ಸ್ಪಷ್ಟಪಡಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading