- Wednesday
- January 22nd, 2025
ಕರ್ನಾಟಕದಾದ್ಯಂತ ಮತ್ತು ಕರಾವಳಿಯಲ್ಲಿ ಸುದ್ದಿ ಮತ್ತು ಮನೋರಂಜನಾ ಕ್ಷೇತ್ರದ ವಿಶೇಷ ಚಾಪನ್ನು ಮೂಡಿಸಿರುವ V4 ನ್ಯೂಸ್ ಮತ್ತು ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಮತ್ತು ಎಂಬಿ ಫೌಂಡೇಶನ್‌ನ ಎಂ.ಬಿ. ಸದಾಶಿವ ಸಹಯೋಗದಲ್ಲಿ 'ಅರೆಭಾಷೆ ಕಾಮಿಡಿ' ರಿಯಾಲಿಟಿ ಶೋ ನಡೆಯಲಿದ್ದು ರಿಯಾಲಿಟಿ ಶೋಗೆ ತಂಡಗಳ ಆಯ್ಕೆಗೆ ಫೆ.16ರಂದು ಸುಳ್ಯದ ಲಯನ್ಸ್ ಸಭಾಭವನದಲ್ಲಿ ಆಡಿಷನ್ ನಡೆಯಲಿದೆ...
ಕಳೆದೊಂದು ವಾರದಿಂದ ಬೆಳ್ಳಾರೆ - ನಿಂತಿಕಲ್ಲು ರಸ್ತೆಯ ಬೆಳ್ಳಾರೆ ಅಜಪಿಲ ದೇವಸ್ಥಾನದ ಬಳಿ ರಸ್ತೆ ಮಧ್ಯೆ ಜೆಸಿಬಿಯೊಂದು ನಿಂತಿದೆ. ಇದರಿಂದ ವಾಹನ ಸಂಚಾರಕ್ಕೆ ಅಡಚಣೆಯುಂಟಾಗಿದ್ದು, ಅನಾಹುತ ಸಂಭವಿಸುವ ಮೊದಲು ತೆರವು ಮಾಡಲು ಸಂಬಂಧಪಟ್ಟವರು ಗಮನಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಗುತ್ತಿಗಾರು ಪೇಟೆಯಲ್ಲಿ ಸರಣಿ ಕಳ್ಳತನಗಳನ್ನು ಮಾಡಿದ ವ್ಯಕ್ತಿಯನ್ನು ಸುಬ್ರಹ್ಮಣ್ಯ ಠಾಣಾ ಪೊಲೀಸರು ಬಂಧಿಸಿರುವುದಾಗಿ ತಿಳಿದುಬಂದಿದೆ.ಕೊಲ್ಲಮೊಗ್ರು ಗ್ರಾಮದ ನಿವಾಸಿ ಕರುಣಾಕರ ಈ ಸರಣಿ ಕೃತ್ಯಗಳನ್ನು ನಡೆಸಿದ್ದ ಎಂದು ತಿಳಿದುಬಂದಿದ್ದು, ಪೋಲೀಸರು ಮಹಜರು ಕಾರ್ಯ ಪ್ರಾರಂಭಿಸಿದ್ದಾರೆ.ಸಿಸಿಟಿವಿ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ಪೆರುವಾಜೆ ಶ್ರೀ ಜಲದುರ್ಗಾದೇವಿಗೆ ಅವಭೃತ ಸ್ನಾನದ ಮೆರವಣಿಗೆಯ ಸಂದರ್ಭದಲ್ಲಿ ಡಾ.ಕೆ. ಶಿವರಾಮ ಕಾರಂತ ಸರಕಾರಿ ಪ್ರಥಮದರ್ಜೆ ಕಾಲೇಜಿನ ಬಳಿ ಶ್ರೀ ದೇವರಿಗೆ ಪೂಜೆ ಸಲ್ಲಿಸಲಾಯಿತು. ಹಾಗೂ ಭಕ್ತಾದಿಗಳಿಗೆ ತಂಪುಪಾನೀಯ ವ್ಯವಸ್ಥೆ ಮಾಡಲಾಯಿತು.ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು ಬಾಲಸುಬ್ರಮಣ್ಯ ಪಿ ಎಸ್ ಹಾಗೂ ಉಪನ್ಯಾಸಕರಾದ ಯಶೋದ ಹಾಗೂ ಪೊನ್ನಪ್ಪ ಹಾಗೂ ಕಚೇರಿ ಸಿಬ್ಬಂದಿಗಳಾದ ಗೀತಾ ಮತ್ತು ಮೋಹನದಾಸ್ಹಾಗೂ...
ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವ ಪ್ರಯುಕ್ತ ಅವಭೃತವು ಗೌರಿ ಹೊಳೆಯ ಜಳಕದ ಗುಂಡಿಯಲ್ಲಿ ಸೋಮವಾರ ರಾತ್ರಿ ನೆರವೇರಿತು. ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ನೇತೃತ್ವದಲ್ಲಿ ರಾತ್ರಿ ಶ್ರೀ ದೇವರ ಬಲಿ ಹೊರಟು ಅಲ್ಲಲ್ಲಿ ಕಟ್ಟೆಪೂಜೆ ಸ್ವೀಕರಿಸುತ್ತಾ ಶ್ರೀದೇವಿ ಅವಭೃತಕ್ಕೆ ತೆರಳಿತು. ಹಿಂಭಾಗದಲ್ಲಿ ಸಾವಿರಕ್ಕೂ ಅಧಿಕ ಭಕ್ತರು ಹೆಜ್ಜೆ ಹಾಕಿದರು....
ಆದಿದ್ರಾವಿಡ ಯುವ ವೇದಿಕೆ(ರಿ)ದ. ಕ ಜಿಲ್ಲೆ ಇದರ ಜಿಲ್ಲಾ ಸಮಿತಿಯ ಪದಾಧಿಕಾರಿಗಳ ಆಯ್ಕೆ ಹಾಗೂ ಮಾಸಿಕ ಸಭೆ ಇಂದು ನಡೆಯಿತು. ನೂತನ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಶ್ರೀ ಸುಂದರ ಅಡ್ಪಂಗಾಯ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಹಾಗೂ ಉಪಧ್ಯಕ್ಷರಾಗಿ ಶ್ರೀ ಅಶ್ವಿನ್ ಅಜ್ಜಾವರ, ಕಾರ್ಯದರ್ಶಿಯಾಗಿ ಶ್ರೀ ಸತೀಶ್ ಬಿಳಿಯಾರು, ಜೊತೆ ಕಾಯ೯ದಶಿ೯ಯಾಗಿ ಶ್ರೀ ನಿತಿನ್ ಬಯಂಬು,...
ಶಿಕ್ಷಣಕ್ಕೆ ಮಹತ್ವ ನೀಡಬೇಕಾದುದು ನಮ್ಮೆಲ್ಲರ ಕರ್ತವ್ಯ. ಶಾಲೆಗಳಿಗೆ ಸರಕಾರವೇ ಅನುದಾನ ನೀಡಲು ದುಸ್ತರವಾಗಿರುವ ಸಂದರ್ಭ ಸುಳ್ಯದ ಶ್ರೀ ವೆಂಕಟರಮಣ ಸೊಸೈಟಿ ನೀಡಿದ ಕೊಡುಗೆ ಅಭಿನಂದನಾರ್ಹವಾದುದು. ಸುಳ್ಯಕ್ಕೆ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಕಳಶ ಪ್ರಾಯದಂತಿದೆ" ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದ್ದಾರೆ. ಅವರು ಸುಳ್ಯದ ಮಹತ್ಮಾಗಾಂಧಿ ಮಲ್ನಾಡು ವಿದ್ಯಾಸಂಸ್ಥೆಗೆ ಸುಳ್ಯದ...