ಗುತ್ತಿಗಾರಿನ ಮುತ್ತಪ್ಪ ನಗರದಲ್ಲಿ ಆಮ್ಲೆಟ್ ವ್ಯಾಪಾರ ನಡೆಸುತ್ತಿರುವ ಕೇಶವ ಕಡೋಡಿ ಅವರ ಅಂಗಡಿಗೆ ಶನಿವಾರ ರಾತ್ರಿ ಕಳ್ಳರು ಬೀಗ ಒಡೆದು ನುಗ್ಗಿ ಜಾಲಾಡಿದ್ದಾರೆ. ಆದಿತ್ಯವಾರ ಸಂಜೆ ಅಂಗಡಿಗೆ ಬಂದಾಗ ವಿಷಯ ಗೊತ್ತಾಗಿದೆ. ಗೂಡಂಗಡಿಯ ಬಾಗಿಲು, ಬೀಗ ಒಡೆದು ಹಾನಿಯಾಗಿದ್ದು ಕಳ್ಳರು ಸ್ಥಳೀಯರೇ ಇರಬೇಕೆಂಬ ಅನುಮಾನ ಮೂಡುವಂತಾಗಿದೆ..