ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಜ.19 ರಂದು ನಡೆದಿದ್ದು ಬಿಜೆಪಿ ಭರ್ಜರಿ ಜಯಬೇರಿ ಬಾರಿಸಿದೆ. ಕಳೆದ ಅವಧಿಯಲ್ಲಿ ನಡೆದ ಭ್ರಷ್ಟಾಚಾರಕ್ಕೆ ಕಾಂಗ್ರೆಸ್ ಹಿನಾಯು ಸೋಲು ಅನುಭವಿಸಿದೆ. 38 ವರ್ಷಗಳ ನಂತರ ಕಾಂಗ್ರೆಸ್ ಭದ್ರ ಕೋಟೆಯನ್ನು ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಛಿದ್ರಗೊಳಿಸಿದೆ.
ಈ ಭಾರಿ ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ಬಳಗ, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ವಿನುಪ್ ಮಲ್ಲಾರ ಮತ್ತು ಪ್ರದೀಪ್.ಕೆ.ಯಲ್ ನೇತೃತ್ವದ ಸಮಾನ ಮನಸ್ಕ ಸ್ವಾಭಿಮಾನಿ ಸಹಕಾರಿ ಬಳಗದಿಂದ ಒಟ್ಟು 35 ಮಂದಿ ಆಕಾಂಕ್ಷಿಗಳು ಚುನಾವಣಾ ಕಣಕ್ಕಿಳಿದಿದ್ದರು.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸಾಮಾನ್ಯ ಸ್ಥಾನದಿಂದ ಸ್ಪರ್ಧಿಸಿದ್ದ ಹಿಮ್ಮತ್.ಕೆ.ಸಿ, ಶೇಷಪ್ಪ ಗೌಡ ಕಿರಿಭಾಗ, ಡಾ| ಸೋಮಶೇಖರ್ ಕಟ್ಟೆಮನೆ, ಡ್ಯಾನಿ ಯಳದಾಳು, ರೇಗನ್ ಶೆಟ್ಯಡ್ಕ, ಗಣೇಶ್ ಭಟ್ ಇಡ್ಯಡ್ಕ, ಮಹಿಳಾ ಸ್ಥಾನದಿಂದ ಮೇನಕ.ಹೆಚ್.ವಿ, ವೇದಾವತಿ.ಎಂ.ಎಸ್, ಹಿಂದುಳಿದ ವರ್ಗ ‘ಬಿ’ ಸ್ಥಾನದಿಂದ ಕಮಲಾಕ್ಷ ಮುಳ್ಳುಬಾಗಿಲು, ಹಿಂದುಳಿದ ವರ್ಗ ‘ಎ’ ಸ್ಥಾನದಿಂದ ಗೋಪಾಲಕೃಷ್ಣ.ಎ, ಪರಿಶಿಷ್ಟ ಪಂಗಡ ಸ್ಥಾನದಿಂದ ಮಹಾಲಿಂಗ ನಾಯ್ಕ್ ಹಾಗೂ ಪರಿಶಿಷ್ಟ ಜಾತಿ ಸ್ಥಾನದಿಂದ ಬೊಳಿಯ ಅಜಿಲ ಗೆಲುವು ಸಾಧಿಸಿದ್ದಾರೆ.