Ad Widget

ವಿದ್ಯಾರ್ಥಿಗಳ ಮೇಲೆ ಕಾಡುಹಂದಿ ದಾಳಿ – ಆಸ್ಪತ್ರೆಗೆ ಶಿಪ್ಟ್

ಗುತ್ತಿಗಾರು ಪೇಟೆಯಲ್ಲಿ ಕಾಡು ಹಂದಿಗಳು ಬಂದು ದಾಳಿ ನಡೆಸಿ ಗಾಯಗೊಳಿಸಿದ ಘಟನೆ ಜ.17ರ ಸಂಜೆ ವರದಿಯಾಗಿದೆ. ಸಂಜೆಯ ವೇಳೆಗೆ ಗುತ್ತಿಗಾರಿನಿಂದ ಮೊಗ್ರ ಕಡೆಗೆ ಹೋಗುವ ರಸ್ತೆಯ ಬದಿ ಕಾಡುಹಂದಿಗಳು ಏಕಾಏಕಿ ಬಂದು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವಿದ್ಯಾರ್ಥಿಗಳ ಮೇಲೆ ದಾಳಿ ನಡೆಸಿದ್ದು ಇಬ್ಬರು ವಿದ್ಯಾರ್ಥಿಗಳು ಸೇರಿದಂತೆ ಮೂವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ ಸದ್ಯ ಗಾಯಾಳುಗಳನ್ನು ಸುಳ್ಯ ಆಸ್ಪತ್ರೆಗೆ...

ಸುಳ್ಯ ಸೈಂಟ್ ಜೋಸೆಫ್ ಆಂಗ್ಲ ಮಾಧ್ಯಮ ಶಾಲಾ ರಜತ ಸಂಭ್ರಮ

ಪೋಷಕರ ಅಭಿಮಾನಕ್ಕೆ ಪಾತ್ರವಾಗಿ ಇಂತಹ ಶಿಕ್ಷಣ ಸಂಸ್ಥೆಗಳು ಬೆಳೆದು ಬೆಳಗುತ್ತಿದೆ - ರೆ.ಫಾ. ಡಾ. ಪೀಟ‌ರ್ ಪೌಲ್ ಸಲ್ದಾನಾ ಕೆಥೋಲಿಕ್‌ ಶಿಕ್ಷಣ ಸಂಸ್ಥೆಗಳಿಂದ ಮೌಲ್ಯ ಬಿತ್ತುವ ಕಾರ್ಯ: ರೆ.ಫಾ. ಡಾ. ಪೀಟ‌ರ್ ಪೌಲ್ ಸಲ್ದಾನ ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆಗಳಾಗಿ ಬೆಳೆಯಬೇಕು : ಭಾಗೀರಥಿ ಮುರುಳ್ಯ ಗುಣ ಮಟ್ಟದ ಶಿಕ್ಷಣದ ಜತೆಗೆ ಪ್ರೀತಿ, ಸಹ ಬಾಳ್ವೆಯಂತಹ ಮಾನವೀಯ...
Ad Widget

ಜ.19 : ಏನೇಕಲ್ಲಿನಲ್ಲಿ ಉಚಿತ ನೇತ್ರ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ಸುಬ್ರಹ್ಮಣ್ಯ : ಸುಬ್ರಹ್ಮಣ್ಯ ರೋಟರಿ ಕ್ಲಬ್, ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ (ಅಂದತ್ವ ನಿವಾರಣ ವಿಭಾಗ)ಮಂಗಳೂರು ಹಾಗೂ ಹಲವು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಏನೇಕಲ್ಲಿನ ರೈತ ಯುವಕ ಮಂಡಲ ಸಭಾಂಗಣದಲ್ಲಿ ಉಚಿತ ಕಣ್ಣಿನ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರವನ್ನು ನಡೆಸಲಾಗುವುದು. ಇದರ ಪ್ರಯೋಜನವನ್ನು ಎಲ್ಲ ಸಾರ್ವಜನಿಕರು, ಸಂಘ ಸಂಸ್ಥೆಯವರು, ಪಡೆದುಕೊಳ್ಳಬೇಕಾಗಿ ಸುಬ್ರಹ್ಮಣ್ಯ ರೋಟರಿ...

ಸುಳ್ಯದಲ್ಲಿ ಇಂದು (ಜ.17) ವಿದ್ಯುತ್ ವ್ಯತ್ಯಯ

33ಕೆ.ವಿ ಕಾವು-ಸುಳ್ಯ ಏಕ ಪಥ ಮಾರ್ಗವನ್ನು ದ್ವಿ ಪಥ ಮಾರ್ಗವನ್ನಾಗಿ ಬದಲಾಯಿಸುವ ಕಾಮಗಾರಿ ಜ.17 ರಂದು ನಡೆಯಲಿರುವುದರಿಂದ ಫೀಡರುಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದ್ದು, ಸಂಬಂಧಪಟ್ಟ ಪ್ರದೇಶದ ವಿದ್ಯುತ್‌ ಬಳಕೆದಾರರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.

ಪೆರುವಾಜೆ ದೇವಸ್ಥಾನಕ್ಕೆ ಸಂಸದ ಬ್ರಿಜೇಶ್ ಚೌಟ ಭೇಟಿ‌

ಪೆರುವಾಜೆ : ವಾರ್ಷಿಕ ಜಾತ್ರೆಯ ಸಂಭ್ರಮದಲ್ಲಿರುವ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯಕ್ಕೆ ಜ.16 ರಂದು ರಾತ್ರಿ ದ.ಕ.ಸಂಸದ ಬ್ರಿಜೇಶ್ ಚೌಟ ಭೇಟಿ‌ ನೀಡಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆ : ಧ್ವಜಾರೋಹಣ

ಪೆರುವಾಜೆ : ಇತಿಹಾಸ ಪ್ರಸಿದ್ದ ಮಾಗಣೆ ಕ್ಷೇತ್ರ ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಹಾಗೂ ಬ್ರಹ್ಮರಥೋತ್ಸವದ ಪ್ರಯುಕ್ತ ಜ‌.16ರಂದು  ರಾತ್ರಿ ಧ್ವಜಾರೋಹಣಗೊಳ್ಳುವ ಮೂಲಕ ಮಾಗಣೆ ವ್ಯಾಪ್ತಿಯಲ್ಲಿ ಜಾತ್ರೆಯ ಸಂಭ್ರಮ ಕಳೆಗಟ್ಟಿದೆ‌. ಕ್ಷೇತ್ರದ ತಂತ್ರಿ ಕೆಮ್ಮಿಂಜೆ ನಾಗೇಶ ತಂತ್ರಿ ಅವರ ಮಾರ್ಗದರ್ಶನದಲ್ಲಿ ಕ್ಷೇತ್ರದ ಪ್ರಧಾನ ಅರ್ಚಕ ಶ್ರೀನಿವಾಸ ಹೆಬ್ಬಾರ್ ಉಪಸ್ಥಿತಿಯಲ್ಲಿ ರಾತ್ರಿ ದೇವತಾ ಪ್ರಾರ್ಥನೆ...
error: Content is protected !!