Ad Widget

ಪಂಜ : ಸೊಸೈಟಿ ಎಲೆಕ್ಷನ್ – ಎಲ್ಲಾ 12 ಸ್ಥಾನಗಳನ್ನು ಗೆದ್ದ ಬಿಜೆಪಿ – ವಿಜಯೋತ್ಸವ

ಪಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ಜ.16 ರಂದು ಚುನಾವಣೆ ನಡೆದು ಎಲ್ಲಾ 12 ನಿರ್ದೇಶಕರ ಸ್ಥಾನಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ . ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 12 ಅಭ್ಯರ್ಥಿಗಳ ಜಯಗಳಿಸಿದ್ದು, ಕಾಂಗ್ರೆಸ್‌ ಬೆಂಬಲಿತ ನಾಗರಿಕ ಸಮಿತಿಯ 12 ಅಭ್ಯರ್ಥಿಗಳು, 2 ಪಕ್ಷೇತರ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ...

ಬಿಜೆಪಿ ಪಕ್ಷದ ಸಂಘಟನಾ ಪರ್ವ ಸಭೆ – ಸುಳ್ಯ ಮಂಡಲದ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಪುನರಾಯ್ಕೆ

ಪಕ್ಷದ ಸಂಘಟನಾ ಪರ್ವ ಸಭೆ ಸುಳ್ಯದ ಕಛೇರಿಯಲ್ಲಿ ನಡೆಯಿತು. ಸುಳ್ಯ ಮಂಡಲದ ಮುಂದಿನ ಅವಧಿಗೆ ನೂತನ ಅಧ್ಯಕ್ಷರಾಗಿ ವೆಂಕಟ್ ವಳಲಂಬೆ ಅವರನ್ನು ಆಯ್ಕೆಮಾಡಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ಸತೀಶ್ ಕುಂಪಲ, ಮಾನ್ಯ ಸಂಸದರಾದ ಬ್ರಿಜೇಶ್ ಚೌಟ, ಮಾಜಿ ಸಚಿವರಾದ ಎಸ್ ಅಂಗಾರ,ಹಾಗೂ ಜಿಲ್ಲಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪಕ್ಷದ ಹಿರಿಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
Ad Widget

ಕಾಂಕ್ರೀಟೀಕರಣಗೊಂಡ ಎಲಿಮಲೆ – ಅಂಬೆಕಲ್ಲು ತರವಾಡುಮನೆ ರಸ್ತೆಯ ಉದ್ಘಾಟನೆ

ಎಲಿಮಲೆ - ಅಂಬೆಕಲ್ಲು ತರವಾಡು ಮನೆ ರಸ್ತೆಯ ಐದು ಪಟ್ಟೆ ಎಂಬಲ್ಲಿ ದೇವಚಳ್ಳ ಗ್ರಾಮ ಪಂಚಾಯತ್ ನ ವಿಶೇಷ ಅನುದಾನದಿಂದ ನೂತನವಾಗಿ ನಿರ್ಮಾಣಗೊಂಡ ಕಾಂಕ್ರೀಟ್ ರಸ್ತೆಯ ಉದ್ಘಾಟನಾ ಕಾರ್ಯಕ್ರಮ ಜ.16 ರಂದು ನಡೆಯಿತು. ಹಿರಿಯ ಫಲಾನುಭವಿಗಳಾದ ಶ್ರೀ ವಿಷ್ಣು ಗೌಡ ಅಂಬೆಕಲ್ಲು ಹಾಗೂ ಬಾಲಕೃಷ್ಣ ಗೌಡ ಅಂಬೆಕಲ್ಲು ರವರು ದೀಪ ಪ್ರಜ್ವಲಿಸಿ, ಜಯಪ್ರಕಾಶ್ ಅಂಬೆಕಲ್ಲು (ಮೊಗ್ರ...

ಅಡ್ಡನಪಾರೆ : ನೂತನವಾಗಿ ನಿರ್ಮಾಣವಾಗುತ್ತಿರುವ ಶಂಖಪಾಲ ಸ್ಪೋಟ್ಸ್ ಕ್ಲಬ್ ಕಟ್ಟಡಕ್ಕೆ ಧನ ಸಹಾಯ

ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಅಡ್ಡನಪಾರೆ ಶಂಖಪಾಲ ಸ್ಪೋರ್ಟ್ಸ್ ಕ್ಲಬ್ ನ  ನೂತನ ಕಟ್ಟಡ ನಿರ್ಮಾಣಕ್ಕೆ ಶಂಖಶ್ರೀ ನವೋದಯ ಸಂಘ ಅಡ್ಡನಪಾರೆ ಇವರ ವತಿಯಿಂದ ರೂ. 4,000 ಹಾಗೂ ಸ್ಫೂರ್ತಿ ಸಂಜೀವಿನಿ ಸಂಘ ಅಡ್ಡನಪಾರೆ ಇವರ ವತಿಯಿಂದ ರೂ. 5,000 ಧನಸಹಾಯ ನೀಡಿದ್ದಾರೆ.‌ ಈ ಸಂದರ್ಭದಲ್ಲಿ ಶಂಖಶ್ರೀ ನವೋದಯ ಸಂಘ, ಸ್ಫೂರ್ತಿ ಸಂಜೀವಿನಿ ಸಂಘ ಹಾಗೂ ಶಂಖಪಾಲ ಸ್ಪೋರ್ಟ್ಸ್...

ಜಿಲ್ಲಾ ಕೃಷಿಕ ಸಮಾಜದ ಉಪಾಧ್ಯಕ್ಷರಾಗಿ ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ, ಖಜಾಂಜಿಯಾಗಿ ಎ.ಟಿ.ಕುಸುಮಾಧರ ಆಯ್ಕೆ

ದ.ಕ.ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾಗಿ ವಿಜಯ ಕುಮಾರ್ ರೈ, ಉಪಾಧ್ಯಕ್ಷರಾಗಿ ಸುಳ್ಯದ ಚಂದ್ರಾ ಕೋಲ್ಚಾರ್, ಪ್ರಧಾನ ಕಾರ್ಯದರ್ಶಿಯಾಗಿ ರಾಕೇಶ್ ರೈ ಕೆಡೆಂಜಿ, ಖಜಾಂಜಿಯಾಗಿ ಸುಳ್ಯದ ಎ.ಟಿ.ಕುಸುಮಾಧರ. ಹಾಗೂ ರಾಜ್ಯ ಪ್ರತಿನಿಧಿಯಾಗಿ ಪದ್ಮನಾಭ ರೈ ಆಯ್ಕೆಯಾಗಿದ್ದಾರೆ. ಇಂದು ನಡೆದ ಚುನಾವಣೆಯಲ್ಲಿ ಈ ಆಯ್ಕೆ ನಡೆಯಿತು.

ಯೇನೆಕಲ್ಲು ಸೊಸೈಟಿ ಚುನಾವಣೆ – ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

‌ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘ ಯೇನೆಕಲ್ಲು ಇದರ ಆಡಳಿತ ಮಂಡಳಿಗೆ ಜ.27 ರಂದು ಚುನಾವಣೆ ನಡೆಯಲಿದೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ ಅಭ್ಯರ್ಥಿಗಳು ಜ.16 ರಂದು ನಾಮಪತ್ರ ಸಲ್ಲಿಸಿದರು. ಸಾಮಾನ್ಯ ಕ್ಷೇತ್ರಕ್ಕೆ ಭವಾನಿಶಂಕರ ಪೂಂಬಾಡಿ, ಭರತ್ ನೆಕ್ರಾಜೆ, ದುರ್ಗಪ್ರಸಾದ್ ಪರಮಲೆ, ಶಿವಪ್ರಸಾದ್ ಮಾದನಮನೆ, ಗೋಪಾಲ ಗೌಡ ಮಾಣಿಬೈಲು, ರಮೇಶ್ ಹೊಸೊಳಿಕೆ, ಮಹಿಳಾ ಕ್ಷೇತ್ರಕ್ಕೆ ಶ್ರೀಮತಿ ವಿಶಾಲಾಕ್ಷಿ...

ಜಿ. ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ವಜ್ರಾಭರಣಗಳ ಉತ್ಸವ ಜ.26 ವರೆಗೆ

ಜಿ ಎಲ್ ಆಚಾರ್ಯ ಜ್ಯುವೆಲ್ಲರಿ ಮಳಿಗೆಯಲ್ಲಿ ಗ್ಲೋ ಫೆಸ್ಟ್ ಡಿ.23 ರಿಂದ ಪ್ರಾರಂಭವಾಗಿದ್ದು ಜ.26 ರವರೆಗೆ ನಡೆಯಲಿದೆ. ವಜ್ರಾಭರಣ ಗಳು ರೂ.3,500 ರಿಂದ ಪ್ರಾರಂಭ ಗೊಂಡಿರುತ್ತದೆ. ವಜ್ರಾಭರಣಗಳ ಮೇಲೆ ರೂ.8,000 ವರೆಗೆ ( ಪ್ರತೀ ಕ್ಯಾರೆಟ್ ಮೇಲೆ ರಿಯಾಯಿತಿ) ಹಾಗೂ ರೂ.25,000 ಕ್ಕಿಂತ ಮೇಲ್ಪಟ್ಟ ಖರೀದಿಗೆ ವಿಶೇಷ ಮತ್ತು ಆಕರ್ಷಕ ಉಡುಗೊರೆಯನ್ನು ನೀಡಲಾಗುವುದು. ಗ್ರಾಹಕರು ಈ...

ಕುಲ್ಕುಂದ : ಸ್ಕೂಟಿ – ಕಾರು ಅಪಘಾತ – ಸವಾರನಿಗೆ ಗಂಭೀರ ಗಾಯ

ಸುಬ್ರಹ್ಮಣ್ಯದ ಕುಲ್ಕುಂದ ಬಳಿ ಕಾರು-ದ್ವಿಚಕ್ರ ನಡುವೆ ಅಪಘಾತ ಸಂಭವಿಸಿ ಉಪನ್ಯಾಸಕರೊಬ್ಬರು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಜ.15 ಸಂಜೆ ನಡೆದಿದೆ.ಈ ಅಪಘಾತದಲ್ಲಿ ದ್ವಿಚಕ್ರ ವಾಹನ ಸವಾರ ಎಸ್.ಎಸ್.ಪಿ.ಯು ಕಾಲೇಜಿನ ಉಪನ್ಯಾಸಕ ಶ್ರೀಧರ ಪುತ್ರನ್ ಗಂಭೀರ ಗಾಯಗೊಂಡು ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಸಹ ಸವಾರೆ ಭವ್ಯ ಎಂಬವರು ಸಣ್ಣ ಪ್ರಮಾಣದ ಗಾಯವಾಗಿದ್ದು ಅಪಾಯದಿಂದ ಪಾರಾಗಿದ್ದಾರೆ.‌ಅಪಘಾತದ...
error: Content is protected !!