ಸುಬ್ರಹ್ಮಣ್ಯ ಜ.15 : ಕರ್ನಾಟಕ ಸರ್ಕಾರದ ಲೋಕೋಪಯೋಗಿ ಇಲಾಖೆಯ ವಿಶೇಷ ಉಪ ವಿಭಾಗ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಒಳಪಟ್ಟ ಆದಿ ಸುಬ್ರಹ್ಮಣ್ಯದ ಅನಘ ವಸತಿ ಗೃಹದ ಕಟ್ಟಡದಲ್ಲಿ ಇಲ್ಲಿಯವರೆಗೆ ಕಾರ್ಯ ನಿರ್ವಹಿಸುತ್ತಿದ್ದು, ಇಂದು ಬುಧವಾರ ಕಾಶಿಕಟ್ಟೆ ಬಳಿಯ ಆಶ್ಲೇಷ ವಸತಿ ಗೃಹದ ನೆಲ ಅಂತಸ್ತಿನ ಕೊಠಡಿಯಲ್ಲಿ ಉದ್ಘಾಟನೆಗೊಂಡಿತು. ಬೆಳಿಗ್ಗೆ ಕುಲ್ಕುಂದ ಬಸವೇಶ್ವರ ದೇವಸ್ಥಾನದ ಅರ್ಚಕ ಗಣೇಶ್ ದೀಕ್ಷಿತ್ ರವರು ಗಣ ಹೋಮ ಹಾಗೂ ಧಾರ್ಮಿಕ ವಿಧಿ ವಿಧಾನಗಳನ್ನು ನಡೆಸಿಕೊಟ್ಟರು. ತದನಂತರ ಅಧಿಕೃತವಾಗಿ ಕಚೇರಿಗೆ ಪ್ರವೇಶ ಮಾಡಲಾಯಿತು. ಈ ಸಂದರ್ಭದಲ್ಲಿ ಪ್ರಭಾರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಮೋದ್ ಕುಮಾರ್ ಕೆ.ಕೆ, ಸಹಾಯಕ ಇಂಜಿನಿಯರ್ ಜನಾರ್ಧನ ಹಾಗೂ ಸಿಬ್ಬಂದಿಗಳಾದ ಸುಬ್ರಹ್ಮಣ್ಯ, ಶಿವರಾಮ.ಡಿ, ತಾರನಾಥ ದೇಗುಲ, ಜಗದೀಶ, ನಿತೀಶ್ ಹಾಗೂ ಭವ್ಯ ಉಪಸ್ಥಿತರಿದ್ದರು.
ನೂತನ ಕಚೇರಿಗೆ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ಇಂಜಿನಿಯರ್ ಉದಯ್ ಕುಮಾರ.ಕೆ, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ ಅಧ್ಯಕ್ಷ ವಿಶ್ವನಾಥ ನಡುತೋಟ, ಆರೋಗ್ಯ ನಿರೀಕ್ಷಕ ಯೋಗೀಶ್, ವಿದ್ಯುತ್ ಮೇಲ್ವಿಚಾರಕ ಚೇತನ್, ಮಾಸ್ಟರ್ ಪ್ಲಾನ್ ಸದಸ್ಯ ಲೋಲಾಕ್ಷ ಹಾಗೂ ಅಚ್ಚುತ ಗೌಡ ಆಲ್ಕಬೆ , ಶ್ರೀ ದೇವಳದ ಸುಬ್ಬಣ್ಣ, ಗುತ್ತಿಗೆದಾರರಾದ ಪ್ರಕಾಶ್ ಶೆಟ್ಟಿ, ಲಕ್ಷ್ಮಣ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಸದಸ್ಯರಾದ ರಾಜೇಶ್ ಎನ್.ಎಸ್, ಗಿರೀಶ್ ಆಚಾರ್ಯ, ದಿಲೀಪ್ ಉಪ್ಪಳಿಕೆ, ಸ್ಥಳೀಯರಾದ ಗಣೇಶ್ ಸಫಲ್ಯ ಸೇರಿದಂತೆ ಮುಂತಾದವರು ಆಗಮಿಸಿ ಶುಭ ಹಾರೈಸಿದರು.
- Wednesday
- January 22nd, 2025