ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಮಂದಿ ನಿರ್ದೇಶಕರ ಸ್ಥಾನಕ್ಕೆ ಜ.19 ರಂದು ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ಬಳಗ, ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಹಾಗೂ ವಿನುಪ್ ಮಲ್ಲಾರ ಮತ್ತು ಪ್ರದೀಪ್.ಕೆ.ಯಲ್. ನೇತೃತ್ವದ ತಂಡ ಸೇರಿದಂತೆ ಒಟ್ಟು 35 ಮಂದಿ ಆಕಾಂಕ್ಷಿಗಳು ಚುನಾವಣಾ ಕಣದಲ್ಲಿದ್ದಾರೆ.
ಒಟ್ಟು 39 ಮಂದಿ ನಾಮಪತ್ರ ಸಲ್ಲಿಕೆ ಮಾಡಿದ್ದು, ಜ.13 ರಂದು ಸಮಾನ ಮನಸ್ಕ ಸ್ವಾಭಿಮಾನಿ ಸಹಕಾರಿ ಬಳಗದ ಗದಾಧರ ಮಲ್ಲಾರ, ಬೆಳ್ಯಪ್ಪ ಖಂಡಿಗೆ, ಸಹಕಾರಿ ಅಭಿವೃದ್ಧಿ ಬಳಗದ ರಾಧಾಕೃಷ್ಣ ಗುರ್ಜನಕುಮೇರಿ ಹಾಗೂ ಸಹಕಾರ ಭಾರತಿಯಿಂದ ರಾಜೇಶ್ ಪರಮಲೆ ನಾಮಪತ್ರ ಹಿಂಪಡೆದಿದ್ದಾರೆ.
ಕಾಂಗ್ರೆಸ್ ಬೆಂಬಲಿತ ಸಹಕಾರಿ ಅಭಿವೃದ್ಧಿ ಬಳಗದಿಂದ ಸಾಮಾನ್ಯ ಸ್ಥಾನದಿಂದ ಹರ್ಷಕುಮಾರ್ ದೇವಜನ, ಶೇಖರ್ ಅಂಬೆಕಲ್ಲು, ಗಿರೀಶ್.ಕೆ.ಎಸ್, ಗುರುಚರಣ್ ಕೊಪ್ಪಡ್ಕ, ತಾರಾನಾಥ ಮುಂಡಾಜೆ, ರವಿಕುಮಾರ್ ಕಿರಿಭಾಗ, ಮಹಿಳಾ ಸ್ಥಾನದಿಂದ ವಿಜಯ.ಕೆ.ಜೆ ಮತ್ತು ತೇಜಾವತಿ, ಹಿಂದುಳಿದ ವರ್ಗ ‘ಎ’ ಸ್ಥಾನದಿಂದ ಮಣಿಕಂಠ ಕೊಳಗೆ, ಹಿಂದುಳಿದ ವರ್ಗ ‘ಬಿ’ ಸ್ಥಾನದಿಂದ ವಿನೋದ್ ಕುಮಾರ್.ಎ.ಎಸ್, ಪರಿಶಿಷ್ಟ ಪಂಗಡ ಸ್ಥಾನದಿಂದ ಮೋನಪ್ಪ ಕೊಳಗೆ, ಪುರುಷೋತ್ತಮ.ಎನ್ ಕಣದಲ್ಲಿದ್ದಾರೆ.
ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ಸಾಮಾನ್ಯ ಸ್ಥಾನದಿಂದ ಹಿಮ್ಮತ್.ಕೆ.ಸಿ, ಶೇಷಪ್ಪ ಗೌಡ ಕಿರಿಭಾಗ, ಡಾ| ಸೋಮಶೇಖರ್ ಕಟ್ಟೆಮನೆ, ಡ್ಯಾನಿ ಯಳದಾಳು, ರೇಗನ್ ಶೆಟ್ಯಡ್ಕ, ಗಣೇಶ್ ಭಟ್ ಇಡ್ಯಡ್ಕ, ಮಹಿಳಾ ಸ್ಥಾನದಿಂದ ಮೇನಕ.ಹೆಚ್.ವಿ, ವೇದಾವತಿ.ಎಂ.ಎಸ್, ಹಿಂದುಳಿದ ವರ್ಗ ‘ಬಿ’ ಸ್ಥಾನದಿಂದ ಕಮಲಾಕ್ಷ ಮುಳ್ಳುಬಾಗಿಲು, ಹಿಂದುಳಿದ ವರ್ಗ ‘ಎ’ ಸ್ಥಾನದಿಂದ ಗೋಪಾಲಕೃಷ್ಣ.ಎ, ಪರಿಶಿಷ್ಟ ಪಂಗಡ ಸ್ಥಾನದಿಂದ ಮಹಾಲಿಂಗ ನಾಯ್ಕ್ ಹಾಗೂ ಪರಿಶಿಷ್ಟ ಜಾತಿ ಸ್ಥಾನದಿಂದ ಬೊಳಿಯ ಅಜಿಲ ಕಣದಲ್ಲಿದ್ದಾರೆ.
ಸಮಾನ ಮನಸ್ಕ ಸ್ವಾಭಿಮಾನಿ ಸಹಕಾರ ಬಳಗದಿಂದ ಸಾಮಾನ್ಯ ಸ್ಥಾನದಿಂದ ವಿನುಪ್ ಮಲ್ಲಾರ, ಪ್ರದೀಪ್ ಕುಮಾರ್.ಕೆ.ಯಲ್, ತಿಶೋರ್ ಮುಚ್ಚಾರ, ದಯಾನಂದ ಕಟ್ಟೆಮನೆ, ರಘುರಾಮ್ ಕೂಜುಗೋಡು, ಕವಿರಾಜ್ ಕಜ್ಜೋಡಿ, ಹಿಂದುಳಿದ ವರ್ಗ ‘ಬಿ’ ಸ್ಥಾನದಿಂದ ಚಂದ್ರಶೇಖರ ಕೋನಡ್ಕ, ಮಹಿಳಾ ಸ್ಥಾನದಿಂದ ಪದ್ಮಿನಿ ಭಟ್, ವೀಣಾ ಕಿಣ್ಣನ ಮನೆ, ಪರಿಶಿಷ್ಟ ಜಾತಿ ಸ್ಥಾನದಿಂದ ಪ್ರತಾಪ್ ತಂಬಿನಡ್ಕ, ಪರಿಶಿಷ್ಟ ಪಂಗಡದಿಂದ ಗಿರೀಶ್.ಕೆ ಕಣದಲ್ಲಿದ್ದಾರೆ.
ಜ.19 ರಂದು ಚುನಾವಣೆ ನಡೆದು ಅಂದೇ ಫಲಿತಾಂಶ ಹೊರಬೀಳಲಿದ್ದು, ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- January 22nd, 2025