ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ(ರಿ.) ದೇವ ಒಕ್ಕೂಟ ಹಾಗೂ ಗೆಳೆಯರ ಬಳಗ(ರಿ.) ದೇವ ಇವುಗಳ ಸಹಭಾಗಿತ್ವದಲ್ಲಿ ಜ.12 ರಂದು ಶ್ರೀ ಉಳ್ಳಾಕುಲು ಮತ್ತು ಸಪರಿವಾರ ದೈವಸ್ಥಾನ ದೇವ, ಸರಳಾಡಿ ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.
ಸ್ವಚ್ಛತಾ ಕಾರ್ಯಕ್ರಮಕ್ಕೆ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರು ಹಾಗೂ ಗೆಳೆಯರ ಬಳಗದ ಸದಸ್ಯರು ಕಳೆ ಕೊಚ್ಚುವ ಯಂತ್ರಗಳನ್ನು ನೀಡಿ ಸಹಕರಿಸಿದರು.
ಶ್ರಮದಾನದಲ್ಲಿ ಉಳ್ಳಾಕುಲು ಮತ್ತು ಸಪರಿವಾರ ದೈವಸ್ಥಾನ ಅನುವಂಶೀಯ ಮೊಕ್ತೇಸರರಾದ ಬಾಲಕೃಷ್ಣ ಗೌಡ ದೇವ, ದೈವಸ್ಥಾನದ ಟ್ರಸ್ಟ್ ನ ಅಧ್ಯಕ್ಷರಾದ ಶೀನಪ್ಪ ಗೌಡ ಪಡ್ಪು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಅಧ್ಯಕ್ಷರಾದ ಯೋಗೀಶ್ ದೇವ, ಗೆಳೆಯರ ಬಳಗದ ಅಧ್ಯಕ್ಷರಾದ ಮುಕುಂದ ಹಿರಿಯಡ್ಕ, ಸೇವಾ ಪ್ರತಿನಿಧಿ ತಿಮ್ಮಪ್ಪ ಕಡ್ಯ, ನೇಮೋತ್ಸವ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು, ಊರಿನ ಹಿರಿಯರು, ಗ್ರಾಮಾಭಿವೃದ್ಧಿ ಯೋಜನೆಯ ಪದಾಧಿಕಾರಿಗಳು ಹಾಗೂ ಸದಸ್ಯರು, ಗೆಳೆಯರ ಬಳಗದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
- Sunday
- February 2nd, 2025