ಯುವವಾಹಿನಿ(ರಿ) ಸುಳ್ಯ ಘಟಕದ 2025-26 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಐವರ್ನಾಡು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಜ. 12 ರಂದು ಯುವವಾಹಿನಿ (ರಿ) ಸುಳ್ಯ ಘಟಕದ ಅಧ್ಯಕ್ಷ ರಾದ ಸುನೀಲ್ ಪಟ್ಟೆ ಇವರ ಅಧ್ಯಕ್ಷತೆಯಲ್ಲಿ ನಡೆಯಿತು,2025-26 ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಯು. ಕೆ ಬೆಳ್ಳಾರೆ ಕಾರ್ಯದರ್ಶಿ ಯಾಗಿ ನವೀನ್ ರಾಮ ಕುಮೇರಿ,ಪ್ರಥಮ ಉಪಾಧ್ಯಕ್ಷರಾಗಿ ಮಹೇಶ್ ಕಲ್ಲಪಣೆ, ದ್ವಿತೀಯ ಉಪಾಧ್ಯಕ್ಷರಾಗಿ ಬಾಲಕ್ರಷ್ಣ ಪೂಜಾರಿ ತಡಗಜೆ,ಕೋಶಾಧಿಕಾರಿಯಾಗಿ ಅಶೋಕ ಸುವರ್ಣ ಬಿ, ಜೊತೆ ಕಾರ್ಯದರ್ಶಿ ಯಾಗಿ ಚಂದ್ರಾವತಿ ಸುಳ್ಯ, ಉದ್ಯೋಗ ಹಾಗೂ ಭವಿಷ್ಯ ನಿರ್ಮಾಣ ನಿರ್ದೇಶಕರಾಗಿ ನೂತನ ಪ್ರವೀಣ್ ನೆಟ್ಟಾರು,ವ್ಯಕ್ತಿತ್ವ ವಿಕಸನ ನಿರ್ದೇಶಕ ರಾಗಿ ಉಮೇಶ್ ಮಣಿಕ್ಕಾರ, ಸಾಂಸ್ಕೃತಿಕ ನಿರ್ದೇಶಕರಾಗಿ ಶ್ರೀಪಾ, ಕಲೆ ಮತ್ತು ಸಾಹಿತ್ಯ ನಿರ್ದೇಶಕರಾಗಿ ಪ್ರದೀಪ್ ನೆಟ್ಟಾರು, ನಾರಾಯಣ ಗುರು ತತ್ವಾದರ್ಶಗಳ ಹಾಗು ಅನುಷ್ಠಾನ ನಿರ್ದೇಶಕ ರಾಗಿ ರಮೇಶ್ ಜಯನಗರ, ಆರೋಗ್ಯ ನಿರ್ದೇಶಕ ರಾಗಿ ಶ್ರೀಮತಿ ಜೀವಿತ ಸುಳ್ಯ, ಸಮಾಜ ಸೇವೆ ನಿರ್ದೇಶಕ ರಾಗಿ ಸುಂದರ ಪೂಜಾರಿ ಸುಳ್ಯ,ವಿದ್ಯಾ ನಿಧಿ ನಿರ್ದೇಶಕ ರಾಗಿ ಶೇಖರ ಪೂಜಾರಿ ಸುಳ್ಯ ,ಕ್ರೀಡಾ ನಿರ್ದೇಶಕ ರಾಗಿ ಲವೀನ್ ಸುಳ್ಯ, ಸಂಘಟನಾ ಕಾರ್ಯದರ್ಶಿ ಗಳಾಗಿ ಶ್ರೀಮತಿ ಪ್ರೇಮಾ ಕೆ ವಿ, ರಂಜಿತ್ ದರ್ಖಾಸ್ತು, ಕುಮಾರಿ, ಮಹಿಳಾ ನಿರ್ದೇಶಕ ರಾಗಿ ಶ್ರೀಮತಿ ಅಕ್ಷತಾ ಅನಿಲ್, ಆಂತರಿಕ ಲೆಕ್ಕ ಪತ್ರ ನಿರ್ದೇಶಕ ರಾಗಿ ಯತೀನ್ ಬಾಜಿನಡ್ಕ ರನ್ನು ಆಯ್ಕೆ ಮಾಡಲಾಯಿತು.
ಧೈವರದಾಕರಾದ ಶ್ರೀ ಕೃಷ್ಣಪ್ಪ ಪೂಜಾರಿ ಬೇಲ್ಯ ಇವರು ದೀಪ ಪ್ರಜ್ವಲನೆ ಗೊಳಿಸಿ,ಕಾರ್ಯಕ್ರಮಕ್ಕೆ ಶುಭಹಾರೈಸಿದರು, ಕೇಂದ್ರ ಸಮಿತಿ ಅಧ್ಯ ಕ್ಷರಾದ ಶ್ರೀ ಲೊಕೇಶ್ ಕೋಟ್ಯಾನ್ ಕೂಳುರು ಇವರ ಪ್ರತಿಜ್ಞೆ ವಿಧಿ ಭೋದನೆಯೊಂದಿಗೆ, ಯುವವಾಹಿನಿ (ರಿ) ನ ಉದ್ದೇಶ ಧ್ಯೇಯ ಮುಂದಿನ ಕಾರ್ಯ ಯೋಜನೆಗಳ ಕುರಿತು ಮಾತನಾಡಿದರು, ಪೆರುವಾಜೆ ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಜಗ್ಗನಾಥ ಪೂಜಾರಿ ಮುಕ್ಕುರು, ಜ್ನಾನ ದೀಪ ಶಿಕ್ಷಣ ಸಂಸ್ಥೆಯ ನಿರ್ಧೇಶಕರಾದ ಉಮೇಶ್ ಮಣಿಕ್ಕರ, ಸಿವಿಲ್ ಗುತ್ತಿಗೆದಾರಾದ ವಿಶ್ವನಾಥ ಪೂಜಾರಿ ಕೊಂಳಂಬಲ ಇವರಿಗೆ ಗೌರವ ಅಭಿನಂದನ ನೆಲೆಯಲ್ಲಿ ಸನ್ಮಾನ ಮಾಡಲಾಯಿತು, ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಬಾಬು ಪೂಜಾರಿ, ಕೋಶಾಧಿಕಾರಿ ಶ್ರೀ ಸುನೀಲ್ ಅಂಚನ್ ,ಐವರ್ನಾಡು ಗ್ರಾಮ ಪಂಚಾಯತ್ ನ ಅಧ್ಯಕ್ಷರಾದ ಶ್ರೀ ಮತಿ ಲೀಲಾವತಿ ಕುತ್ಯಾಡಿ, ಬಿಲ್ಲವ ಸಂಘ (ರಿ) ಸುಳ್ಯದ ಪ್ರಧಾನ ಕಾರ್ಯದರ್ಶಿ ಶ್ರೀ ನವೀನ್ ಕುಮಾರ್ ಸಾರಕರೆ, ಯುವವಾಹಿನಿ (ರಿ) ಸುಳ್ಯ ಘಟಕದ ಸ್ಥಾಪಕಧ್ಯಕ್ಷರಾದ ಶ್ರೀ ಶಿವಪ್ರಸಾದ್ ಸುಳ್ಯ,ಕಾರ್ಯದರ್ಶಿ ಬಾಲಕ್ರಷ್ಣ ತಡಗಜೆ ಯುವವಾಹಿನಿ ಘಟಕದ ಹಾಗೂ ಬಿಲ್ಲವ ಸಂಘದ ಪೂರ್ವಾಧ್ಯಕ್ಷರುಗಳು ,ಎಲ್ಲಾ ಹಿರಿಯ ಕಿರಿಯ ಯುವವಾಹಿನಿ ಬಂಧುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು, ಕಾರ್ಯಕ್ರಮ ನ್ನು ಚಂದ್ರಶೇಖರ ಹೈದಂಗೂರು ನಿರೂಪಿಸಿ, ಶ್ರೀಮತಿ ನೂತನ ನೆಟ್ಟಾರು ವಂದಿಸಿದರು,
- Wednesday
- January 22nd, 2025