ಶ್ರೀ ಭಾರತೀ ಸೇವಾ ಸಮಿತಿ ಕಳಂಜ (ರಿ.) ವತಿಯಿಂದ ಕಳಂಜ ವಿದ್ಯಾನಿಕೇತನ ಶಿಶುಮಂದಿರದಲ್ಲಿ ಚಿಣ್ಣರ ಹಬ್ಬ ಜ.13ರಂದು ನಡೆಯಿತು. ಕಾರ್ಯಕ್ರಮದ ಅಂಗವಾಗಿ ಸಂಜೆ ಮಾತೆಯರಿಂದ ದೀಪ ಬೆಳಗುವಿಕೆ ನಡೆಯಿತು. ನಂತರ ಶಿಶುಮಂದಿರದ ಪುಟಾಣಿಗಳಿಂದ ಚಿಣ್ಣರ ಪ್ರತಿಭಾ ದರ್ಶನ ನಡೆಯಿತು. ಬಳಿಕ ಸಭಾ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತೀ ಸೇವಾ ಸಮಿತಿ ಕಳಂಜ (ರಿ.) ಇದರ ಅಧ್ಯಕ್ಷರಾದ ರವಿಪ್ರಸಾದ್ ರೈ ಕಳಂಜ ವಹಿಸಿದ್ದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಸಹಾಯಕ ಕಾರ್ಯನಿರ್ವಹಣಾ ಅಧಿಕಾರಿಗಳಾದ ವೆಂಕಟ್ರಮಣ ರಾವ್ ಮಂಕುಡೆ ದಿಕ್ಸೂಚಿ ಭಾಷಣಗೈದರು. ಕೊಡಗು ಕರಿಕೆಯ ಸರಕಾರಿ ಆಯುರ್ವೇದ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ.ಪಲ್ಲವಿ ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ್ದರು. ವೇದಿಕೆಯಲ್ಲಿ ವಿದ್ಯಾನಿಕೇತನ ಶಿಶುಮಂದಿರದ ವ್ಯವಸ್ಥಾಪಿಕಾ ಶ್ರೀಮತಿ ಮಾಲಿನಿ ಪ್ರಸಾದ್ ಹಾಗೂ ಶ್ರೀ ಭಾರತೀ ಸೇವಾ ಸಮಿತಿ ಕಳಂಜ (ರಿ.) ಇದರ ಪ್ರಧಾನ ಕಾರ್ಯದರ್ಶಿ ಅಜಯ್ ಆದಾಳ ಉಪಸ್ಥಿತರಿದ್ದರು. ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು. ಸೀತಾರಾಮ ಕಂಚಿಕಾರಮೂಲೆ ವಂದಿಸಿದರು. ಬಳಿಕ ಬಾಲಗೋಕುಲದ ಮಕ್ಕಳು ಮತ್ತು ಮಾತೃ ಮಂಡಳಿಯವರಿಂದ ಸಾಂಸ್ಕೃತಿಕ ವೈಭವ ಜರುಗಿತು. ಶಿಶುಮಂದಿರದ ಹಿರಿಯ ವಿದ್ಯಾರ್ಥಿಗಳಾದ ಕು| ಶಾಂಭವಿ ದಡ್ಡಾಲಡ್ಕ, ಕು| ಅಭಿಜ್ಞಾ ನಾಟಿಕೇರಿ ಹಾಗೂ ತಂಡದಿಂದ ಯಕ್ಷ-ಗಾನ ಕಾರ್ಯಕ್ರಮ ನಡೆಯಿತು. ಬಳಿಕ ಮಹಾಪೂಜೆ, ಪ್ರಸಾದ ವಿತರಣೆ, ಸಂತಸದ ಸವಿಯೂಟ ನಡೆಯಿತು.
- Wednesday
- January 22nd, 2025