Ad Widget

ಸುಳ್ಯ ಪಿ.ಎಲ್‌.ಡಿ. ಬ್ಯಾಂಕಿನ ಚುನಾವಣೆ – ಮತ್ತೆ ಅಧಿಕಾರಕ್ಕೇರಿದ ಬಿಜೆಪಿ – 14 ರಲ್ಲಿ 12 ಬಿಜೆಪಿಗೆ , ಬಂಡಾಯಕ್ಕೆ 1 ಹಾಗೂ ಕಾಂಗ್ರೆಸ್ ಗೆ 1 ಸ್ಥಾನ

ಸುಳ್ಯ ಭೂ ಅಭಿವೃದ್ಧಿ ಬ್ಯಾಂಕಿನ ಆಡಳಿತ ಮಂಡಳಿಗೆ 7 ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ 5 ಮಂದಿ ಅಭ್ಯರ್ಥಿಗಳು ಆಯ್ಕೆಯಾಗಿದ್ದು ಉಳಿದ ಎರಡರಲ್ಲಿ ಒಂದು ಸ್ಥಾನ ಕಾಂಗ್ರೆಸ್‌ ಹಾಗೂ ಬಿಜೆಪಿ ಬಂಡಾಯ ಅಭ್ಯರ್ಥಿ ಒಬ್ಬರು ಗೆಲುವು ಸಾಧಿಸಿದ್ದು,ಬಿಜೆಪಿ ಮತ್ತೆ ಆಡಳಿತಕ್ಕೇರಿದೆ. ಒಟ್ಟು 14 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು 7 ಸ್ಥಾನ ಅವಿರೋಧ ಆಯ್ಕೆ, ಹಾಗೂ 5 ಸ್ಥಾನ ಚುನಾವಣೆಯಲ್ಲಿ ಗೆಲ್ಲುವ ಮೂಲಕ 12 ಸ್ಥಾನ ಪಡೆದು ಮತ್ತೆ ಅಧಿಕಾರಕ್ಕೇರಿದ್ದಾರೆ.

. . . . . . . . .

ತಾಲೂಕಿನ ಒಟ್ಟು 14 ವಲಯ ಸೇರಿ ಒಟ್ಟು 23 ನಾಮಪತ್ರ ಸಲ್ಲಿಕೆಯಾಗಿತ್ತು. ಇದರಲ್ಲಿ 7 ಕ್ಷೇತ್ರಗಳಲ್ಲಿ ಅವಿರೋಧ ಆಯ್ಕೆ ನಡೆದಿದ್ದು ಉಳಿದ 7 ಸ್ಥಾನಗಳಿಗೆ 16 ಮಂದಿ ಚುನಾವಣಾ ಕಣದಲ್ಲಿದ್ದರು.

. . . . . . .

ಬೆಳ್ಳಾರೆ ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಶಾಲಾಕ್ಷಿ, ಎಣ್ಣೂರು ಪ.ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಭಾಗೀರಥಿ ಮುರುಳ್ಯ, ಕೊಲ್ಲಮೊಗ್ರ ಮಹಿಳಾ ಮೀಸಲು ಕ್ಷೇತ್ರಕ್ಕೆ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸವಿತಾ ಕೆ.ಜೆ, ಮಡಪ್ಪಾಡಿ ಸಾಮಾನ್ಯ ಕ್ಷೇತ್ರದಿಂದ q ಬೆಂಬಲಿತ ರಮೇಶ್ ಪಿ, ಕಳಂಜ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಈಶ್ವರಚಂದ್ರ ಎಂ, ಪಂಬೆತ್ತಾಡಿ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಸುಬ್ರಹ್ಮಣ್ಯ ಭಟ್, ಸುಬ್ರಹ್ಮಣ್ಯ ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಅಚ್ಚುತ ಕೆ ಯವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ಉಳಿದ 7 ಸ್ಥಾನಗಳಿಗೆ ಜ.12 ರಂದು ನಡೆದ ಚುನಾವಣೆಯಲ್ಲಿ ಜಾಲ್ಸೂರು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಜಯರಾಮ ರೈ ಕೆ ಯವರು 17 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಬಂಡಾಯ ಅಭ್ಯರ್ಥಿ ಸುರೇಶ್ ಕೆ ಯವರು 12 ಮತ ಪಡೆದು ಪರಾಭವಗೊಂಡಿದ್ದಾರೆ.

ನೆಲ್ಲೂರು ಕೆಮ್ರಾಜೆ ಹಿಂದುಳಿದ ವರ್ಗ ಬಿ” ಬಿಜೆಪಿ ಬೆಂಬಲಿತ ಅಭ್ಯರ್ಥಿ ಮಹಾವೀರ ಜಿ ಯವರು 19 ಮತ ಪಡೆದು ವಿಜಯಿಯಾದರು. ಬಿಜೆಪಿ ಬಂಡಾಯ ಅಭ್ಯರ್ಥಿ ದೇವಿಪ್ರಸಾದ್ ಎಸ್ 15 ಮತ ಪಡೆದು ಸೋಲು ಕಂಡರು. ಸುಳ್ಯ ಹಿಂದುಳಿದ ವರ್ಗ ಎ” ಸ್ಥಾನಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿ ಜ್ಞಾನೇಶ್ವರ ಶೇಟ್ 24 ಮತ ಪಡೆದು ಜಯಗಳಿಸಿದರು. ಬಿಜೆಪಿ ಬೆಂಬಲಿತ ಅಭ್ಯರ್ಥಿ ಸೋಮನಾಥ ಪೂಜಾರಿ ಪರಾಭವ ಹೊಂದಿದರು.

ಆಲೆಟ್ಟಿ ಸಾಮಾನ್ಯ ಕ್ಷೇತ್ರದಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಧರ್ಮಪಾಲ ಕೆ ಯವರು 19 ಮತ ಪಡೆದು ವಿಜಯಿಯಾಗಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ವಿಜಯ ಪಡ್ಡಂಬೈಲು 11 ಮತ ಪಡೆದು ಸೋಲುಂಡರು. ಐವರ್ನಾಡು ಸಾಮಾನ್ಯ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿ ಗಣಪಯ್ಯ ಪಿ 12 ಮತ ಪಡೆದರೆ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಮಂಜುನಾಥ ಪಿ ಯವರು 12 ಮತ ಪಡೆದು ಸಮಾನತೆಯನ್ನು ಕಾಯ್ದುಕೊಂಡರು. ಟಾಸ್ ಆಯ್ಕೆ ಮೂಲಕ ಗಣಪಯ್ಯ ರವರು ಅದೃಷ್ಟದ ಗೆಲುವು ಸಾಧಿಸಿಕೊಂಡರು.

ಗುತ್ತಿಗಾರು ಕ್ಷೇತ್ರದಲ್ಲಿ ಪ.ಪಂ.ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಕಾವೇರಿ ಕೆ 7 ಮತ ಪಡೆದು ವಿಜಯಿಯಾಗಿದ್ದಾರೆ. ಕಾಂಗ್ರೆಸ್‌ ಬೆಂಬಲಿತ ಅಭ್ಯರ್ಥಿ ಬಾಲಕೃಷ್ಣ ಬಿ ಪರಾಭವ ಹೊಂದಿದರು. ಸಾಲಗಾರರಲ್ಲದ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಅವಿನಾಶ್ ಡಿ.ಕೆ 222 ಮತ ಪಡೆದು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಂಡಾಯ ಅಭ್ಯರ್ಥಿ ಶೈಲೇಶ್ ಅಂಬೆಕಲ್ಲು ರವರು 135 ಮತ ಪಡೆದು ಪರಾಭವಗೊಂಡರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading