
ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ 9 ಮಂದಿ ಸದಸ್ಯರನ್ನು ಸರಕಾರ ನೇಮಕ ಮಾಡಿದ್ದು, ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಜ.13 ರಂದು ನಡೆಯಿತು.
ಅಧ್ಯಕ್ಷತೆಗೆ ರಾಜೇಶ್ ಭಟ್ ಬಾಂಜಿಕೋಡಿ ಮತ್ತು ಶಿವರಾಮ ನೆಕ್ರಪ್ಪಾಡಿ ಅಕಾಂಕ್ಷಿಗಳಿದ್ದರಿಂದ ಮತದಾನದ ಮೂಲಕ ಆಯ್ಕೆ ನಡೆಸಲಾಯಿತು. ಅಧ್ಯಕ್ಷರಾಗಿ ರಾಜೇಶ್ ಭಟ್ ಬಾಂಜಿಕೋಡಿ ಆಯ್ಕೆಯಾದರು.
ಸದಸ್ಯರಾಗಿ ದೇವಸ್ಥಾನದ ಪ್ರದಾನ ಅರ್ಚಕ ರಾಮಚಂದ್ರ ಪಿ.ಜಿ ಕರುಣಾಕರ ಉದ್ದಂಪಾಡಿ, ಶಿವರಾಮ ನೆಕ್ರೆಪ್ಪಾಡಿ, ಶ್ರೀಮತಿ ಶೀಲಾವತಿ ಕುಳ್ಳಂಪಾಡಿ, ಶ್ರೀಮತಿ ಆಶಾ ಮಡ್ತಿಲ, ರಾಧಾಕೃಷ್ಣ ಚಾಕೋಟೆ, ಬಾಲಕೃಷ್ಣ ಮಡ್ತಿಲ ಬಿಎಸ್ಸೆನ್ನೆಲ್, ಮುರಳೀಧರ ಕೊಚ್ಚಿ ಆಯ್ಕೆಯಾದರು.
