ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿತ್ತು. ಜ.08 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆದಿದೆ. ನೂತನ ಅಧ್ಯಕ್ಷರಾಗಿ ದಯಾನಂದ ಪುರ ಹಾಗೂ ಉಪಾಧ್ಯಕ್ಷರಾಗಿ ಚೆನ್ನಕೇಶವ ದೋಳ ಅವಿರೋಧವಾಗಿ ಆಯ್ಕೆಯಾದರು
ಈ ಸಂದರ್ಭದಲ್ಲಿ ನಿರ್ದೆಶಕರಾದ ಮೋನಪ್ಪ ಪೂಜಾರಿ ಹೈದಂಗೂರು, ವೆಂಕಟ್ರಮಣ ಗೌಡ ಕೆ, ನವೀನ. ಕೆ., ಅಕ್ಷತಾ.ಕೆ.ಸಿ, ಲತಾ ಹೆಚ್., ಸರಸ್ವತಿ ಕಕ್ಕಾಡು, ಮಹಾಬಲ ಕಟ್ಟಕೋಡಿ, ಅಚ್ಚುತ ಪಿ., ಅಣ್ಣು ಅಂಗಡಿಮಜಲು, ಲಿಂಗಪ್ಪ ನಾಯ್ಕ ಉಪಸ್ಥಿತರಿದ್ದರು.