- Thursday
- January 9th, 2025
ಸಾರ್ವಜನಿಕರಿಗೆ ತುರ್ತು ಸಂದರ್ಭಗಳಲ್ಲಿ ಉಪಯೋಗವಾಗಬೇಕೆಂಬ ಸದುದ್ದೇಶದಿಂದ ಸಚಿನ್ ಕ್ರೀಡಾ ಸಂಘ ಹರಿಹರ ಪಳ್ಳತ್ತಡ್ಕ ಹಾಗೂ ದಾನಿಗಳ ಸಹಕಾರದೊಂದಿಗೆ ಇತ್ತೀಚೆಗೆ ನೂತನ ಆಂಬ್ಯುಲೆನ್ಸ್ ಲೋಕಾರ್ಪಣೆಗೊಂಡಿದ್ದು, ಈ ಆಂಬ್ಯುಲೆನ್ಸ್ 24×7 ಸೇವೆ ನೀಡಲಿದೆ.ತುರ್ತು ಸಂದರ್ಭಗಳಲ್ಲಿ ಆಂಬ್ಯುಲೆನ್ಸ್ ಸೇವೆಗಾಗಿ ಸಂಪರ್ಕಿಸಬಹುದಾದ ದೂರವಾಣಿ ಸಂಖ್ಯೆಗಳು ಈ ಕೆಳಗಿನಂತಿವೆ.ಪ್ರಸಾದ್ ಕೋಡಿಯಡ್ಕ : 9353074152ಮಧು ಗೋಳ್ಯಾಡಿ : 7483827962ಪ್ರಿಯಾ ಕಲ್ಲೇಮಠ : 9481384986
ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿತ್ತು. ಜ.08 ರಂದು ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಅವಿರೋಧ ಆಯ್ಕೆ ನಡೆದಿದೆ. ನೂತನ ಅಧ್ಯಕ್ಷರಾಗಿ ದಯಾನಂದ ಪುರ ಹಾಗೂ ಉಪಾಧ್ಯಕ್ಷರಾಗಿ ಚೆನ್ನಕೇಶವ ದೋಳ ಅವಿರೋಧವಾಗಿ ಆಯ್ಕೆಯಾದರು ಈ ಸಂದರ್ಭದಲ್ಲಿ ನಿರ್ದೆಶಕರಾದ ಮೋನಪ್ಪ ಪೂಜಾರಿ ಹೈದಂಗೂರು, ವೆಂಕಟ್ರಮಣ ಗೌಡ...
ಮಡಿಕೇರಿ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತ ಮಡಿಕೇರಿ (PLD bank)ಇದರ ಪೆರಾಜೆ ಮತ್ತು ಕರಿಕೆ ವ್ಯಾಪ್ತಿಗೊಳಪಟ್ಟ ನಿರ್ದೇಶಕ ಸ್ಥಾನಕ್ಕೆ ಭುವನೇಶ್ವರ ನಿಡ್ಯಮಲೆ ಇವರು ಮೂರನೇ ಅವಧಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸುಳ್ಯ ವಲಯ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ವತಿಯಿಂದ ನೂತನ ಬ್ರಹ್ಮರಥ ಹಾಗೂ ಸುಳ್ಯ ಜಾತ್ರಾ ವೈಭವದ ಕುರಿತ ಶಾರ್ಟ್ ವಿಡಿಯೋ ಕಾಂಪಿಟೇಷನ್ ಅಯೋಜಿಸಿದೆ. ಸುಳ್ಯ ಜಾತ್ರೆ ಹಾಗೂ ಬ್ರಹ್ಮರಥದ ಪರಿಕಲ್ಪನೆ ವಿಡಿಯೋ 90 ಸೆಕೆಂಡ್ ಮೀರಿರಬಾರದು. ವಿಡಿಯೋ ಸ್ಪಷ್ಟವಾಗಿರಬೇಕು. ವಿಡಿಯೋದಲ್ಲಿ ವಾಟರ್ ಮಾರ್ಕ್ ಇರಬಾರದು. ಜ.12 ಕೊನೆಯ ದಿನಾಂಕವಾಗಿದೆ. ಪ್ರವೇಶ ಶುಲ್ಕ ರೂ.200, ಸಂಘಟಕರ...
ವಲಯ ಅರಣ್ಯಾಧಿಕಾರಿಗಳ ಕಚೇರಿ ಸುಬ್ರಹ್ಮಣ್ಯದಲ್ಲಿ, ಮಲೆನಾಡು ಜನಹಿತರಕ್ಷಣಾ ವೇದಿಕೆಯ ವತಿಯಿಂದ ಗಡಿಗುರುತು ಹಾಗೂ ಜಂಟಿಸರ್ವೆ ಗೆ ಆಗ್ರಹಿಸಿ ರೈತರಿಂದ ಪ್ರತಿಭಟನೆ ನಡೆಯಿತು.ಮೀರಾ ಸಾಹೇಬ್, ಚಂದ್ರಶೇಖರ ಬಾಳುಗೋಡು ಸೇರಿದಂತೆ ಮ.ಜ.ಹಿ.ರ ವೇದಿಕೆಯ ಸಂಚಾಲಕರಾದ ಕಿಶೋರ್ ಶಿರಾಡಿಯವರು ಈ ಬಗ್ಗೆ ಮಾತನಾಡಿದರು.ರೈತರ ಭೂಮಿ ಉಳಿಯಬೇಕು,ಕೃಷಿ ಉಳಿಯಬೇಕು ಎಂದರೆ ಕಂದಾಯ ಇಲಾಖೆ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಸರ್ವೇ ನಡೆಸಿ...
ಗುತ್ತಿಗಾರು ಗ್ರಾಮದ ಮೊಗ್ರ, ಮಲ್ಕಜೆ, ಕಿನ್ನಿಕುಮೇರಿ ಭಾಗದ ಸುಮಾರು 60 ಮನೆಗಳ ಸದಸ್ಯರು ಒಟ್ಟು ಸೇರಿ ರಕ್ಷಾ ನಾಗರಿಕ ಬಳಗ ಎಂಬ ಸಮಾಜಸೇವಾ ಸಂಘಟನೆಯನ್ನು ರಚಿಸಿರುತ್ತಾರೆ.ಸಂಘಟನೆಯ ಅಧ್ಯಕ್ಷರಾಗಿ ಲ| ನಾಗೇಶ್ ಕಿನ್ನಿಕುಮೇರಿ, ಪ್ರಧಾನ ಕಾರ್ಯದರ್ಶಿಯಾಗಿ ಜೇಸಿ ಜೀವನ್ ಮಲ್ಕಜೆ, ಖಜಾಂಚಿಯಾಗಿ ದಯಾನಂದ ಕಿನ್ನಿಕುಮೇರಿಯವರನ್ನು ಆಯ್ಕೆ ಮಾಡಲಾಯಿತು.ಸಂಚಾಲಕರಾಗಿ ಲಯನ್ ಕರುಣಾಕರ ಎಣ್ಣೆಮಜಲು, ಸುಧಾಕರ ಮಲ್ಕಜೆ, ಉಮೇಶ ಮಕ್ಕಿ,...
ಬೆಳ್ಳಾರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ರಾಮಕೃಷ್ಣ ಭಟ್ ಕುರುಂಬುಡೇಲು ಮತ್ತು ಉಪಾಧ್ಯಕ್ಷರಾಗಿ ಪದ್ಮನಾಭ ಶೆಟ್ಟಿ ಪೆರುವಾಜೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ 11 ಮಂದಿ ಅಭ್ಯರ್ಥಿಗಳು ಚುನಾವಣೆಯಲ್ಲಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಇಂದು ನಡೆದ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಸಂದರ್ಭದಲ್ಲಿ ರಾಮಕೃಷ್ಣ ಭಟ್ ಕುರುಂಬುಡೇಲು ಅಧ್ಯಕ್ಷತೆಗೆ ಮತ್ತು...
ಅರಂತೋಡು - ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಎರಡುವರೆ ವರ್ಷದ ಅವಧಿಗೆ ಸಂತೋಷ್ ಕುತ್ತಮೊಟ್ಟೆ ಹಾಗೂ ಉಪಾಧ್ಯಕ್ಷರಾಗಿ ವೈದ್ಯ ಡಾ.ಲಕ್ಷ್ಮೀಶ ಕಲ್ಲುಮುಟ್ಟು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೆಶಕರಾದ ದಯಾನಂದ ಕುರುಂಜಿ, ಚಂದ್ರಶೇಖರ ಚೋಡಿಪಣೆ, ಶಿವಾನಂದ ಕುಕ್ಕುಂಬಳ, ಉದಯಕುಮಾರ್ ಉಳುವಾರು ಪ್ರಶಾಂತ್ ಕಾಪಿಲ, ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ,...
ಶ್ರೀ ಅಯ್ಯಪ್ಪ ಭಜನಾ ಮಂದಿರ ಶಕ್ತಿನಗರ ಕಲ್ಮಕಾರು ಇದರ ಉಪ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ಜ.07 ರಂದು ಅನುದಾನವನ್ನು ವಿತರಿಸಲಾಯಿತು.ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿಗಳಾದ ಮಾಧವ ಗೌಡ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಬ್ರಹ್ಮಣ್ಯ ವಲಯ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ, ಕಲ್ಮಕಾರು ಒಕ್ಕೂಟದ...