ಐವರ್ನಾಡು ಮಾಡತಕ್ಕಾನ ಸ್ಪೋರ್ಟ್ಸ್ ಕ್ಲಬ್ ಇದರ ಮಹಾಸಭೆಯು ಜ. 5ರಂದು ಕ್ಲಬ್ಬಿನ ಕಚೇರಿಯಲ್ಲಿ ನಡೆಯಿತು. ಅಧ್ಯಕ್ಷರಾದ ಚೇತನ್ ಪರ್ಲಿಕಜೆ ಸಭೆಯ ಅಧ್ಯಕ್ಷತೆಯಲ್ಲಿ ವಹಿಸಿದ್ದರು. ಕಾರ್ಯದರ್ಶಿ ರಾಘವೇಂದ್ರ ಪಾತಿಕಲ್ಲು ಲೆಕ್ಕಪತ್ರ ಮಂಡಿಸಿದರು. 2025ನೇ ಸಾಲಿನ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ನೂತನ ಅಧ್ಯಕ್ಷರಾಗಿ ವಿ.ಕೆ ಕಲಂದರ್ ಷರೀಫ್ ಹಾಗೂ ಕಾರ್ಯದರ್ಶಿಯಾಗಿ ಚರಣ್ ಪರ್ಲಿಕಜೆ ಇವರನ್ನು ಆಯ್ಕೆ ಮಾಡಲಾಯಿತು. ಕಾರ್ಯಕಾರಿಣಿ ಸಮಿತಿ ಸದಸ್ಯರುಗಳನ್ನಾಗಿ ಇಲ್ಯಾಸ್ ಪರ್ಲಿಕಜೆ, ನವೀನ್ ಬಾಂಜಿಕೋಡಿ, ಕುಶಾಂತ್ ನಾಟಿಕೇರಿ ಇವರನ್ನು ಆಯ್ಕೆ ಮಾಡಲಾಯಿತು.
- Wednesday
- January 8th, 2025