ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ 12 ಜನ ನಿರ್ದೇಶಕರ ಸ್ಥಾನಕ್ಕೆ ಜ.19 ರಂದು ಚುನಾವಣೆ ನಡೆಯಲಿದ್ದು, ಜ.07 ಅಂದರೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಿದೆ.
ಸಾಮಾನ್ಯ ಕ್ಷೇತ್ರಕ್ಕೆ 06, ಹಿಂದುಳಿದ ವರ್ಗ ‘ಎ’ ಗೆ 01, ಹಿಂದುಳಿದ ವರ್ಗ ‘ಬಿ’ ಗೆ 01, ಪರಿಶಿಷ್ಟ ಜಾತಿ ಮೀಸಲು 01, ಪರಿಶಿಷ್ಟ ಪಂಗಡ ಮೀಸಲು 01, ಮಹಿಳಾ ಮೀಸಲು 02 ಈ ರೀತಿ ಒಟ್ಟು 12 ಸ್ಥಾನಗಳಿಗೆ ಚುನಾವಣೆಯ ಮೂಲಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಜ.07 ಅಂದರೆ ಇಂದಿನಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಪ್ರಾರಂಭವಾಗಿದ್ದು, ಜ.11 ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿರುತ್ತದೆ. ಜ.12 ರಂದು ನಾಮಪತ್ರ ಪರಿಶೀಲನೆ ಪ್ರಕ್ರಿಯೆ ನಡೆಯಲಿದ್ದು, ಜ.13 ರಂದು ನಾಮಪತ್ರ ಹಿಂತೆಗೆದುಕೊಳ್ಳಲು ಕೊನೆಯ ದಿನವಾಗಿರುತ್ತದೆ. ಅದೇ ದಿನದಂದು ಅಭ್ಯರ್ಥಿಗಳಿಗೆ ಚಿಹ್ನೆ ದೊರೆಯಲಿದ್ದು, ಜ.19 ರಂದು ಚುನಾವಣೆ ನಡೆದು ಅದೇ ದಿನ ಚುನಾವಣಾ ಫಲಿತಾಂಶ ಹೊರಬೀಳಲಿದೆ.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- January 8th, 2025