ಸುಬ್ರಹ್ಮಣ್ಯ ಜ.4: ಇನ್ನರ್ ವೀಲ್ ಕ್ಲಬ್ ಸುಬ್ರಹ್ಮಣ್ಯ ಇದರ ವತಿಯಿಂದ ಪಂಜ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಮಕ್ಕಳ ಬೋಧನೆ, ಸಮಯ ಪಾಲನೆ, ಸುತ್ತೋಲೆ ಹಾಗೂ ಪಠ್ಯೇತರ ಚಟುವಟಿಕೆಗಳ ಅನುಕೂಲಕ್ಕಾಗಿ ಸೂಚನಾ ಪಲಕವನ್ನು ಕೊಡುಗೆಯಾಗಿ ನೀಡಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ಸುಬ್ರಹ್ಮಣ್ಯ ಇನ್ನರ್ ವೀಲ್ ಕ್ಲಬ್ಬ್ ನ ಅಧ್ಯಕ್ಷರಾದ ಶ್ರುತಿ ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಅಧ್ಯಕ್ಷ ಲಿಗೋದರ ಆಚಾರ್ಯ, ಇನ್ನರ್ ವೀಲ್ ಕ್ಲಬ್ ನಿಕಟ ಪೂರ್ವಾಧ್ಯಕ್ಷರಾದ ವೇದ ಶಿವರಾಂ, ಕಾರ್ಯದರ್ಶಿ ಚಂದ್ರ ಹೊನ್ನಪ್ಪ, ಪೂರ್ವಾಧ್ಯಕ್ಷರಾದ ಸರೋಜಾ ಮಾಯಿಲಪ್ಪ , ಶಾಲಾ ಮುಖ್ಯ ಶಿಕ್ಷಕರು ಹಾಗೂ ಇನ್ನರ್ವೀಲ್ ಪೂರ್ವಾಧ್ಯಕ್ಷರಾದ ಲೀಲಾ ಕುಮಾರಿ ಟಿ, ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷರಾದ ಸೌಮ್ಯ, ನಿಕಟ ಪೂರ್ವಾಧ್ಯಕ್ಷರಾದ ಸೋಮಶೇಖರ ನೇರಳ ಹಾಗೂ ಸದಸ್ಯರುಗಳಾದ ಪುರುಷೋತ್ತಮ, ಗೋಪಾಲಕೃಷ್ಣ, ರಮೇಶ, ವೇದಾವತಿ, ಧನ್ಯ, ಯಕ್ಷಿತ, ಶಿಕ್ಷಕರುಗಳಾದ ನೇತ್ರಾವತಿ, ಮಂಜುಳ ,ಚೇತನ ಕುಮಾರಿ, ಮೋಹನ ಪ್ರಸಾದ್, ಹರೀಶ, ಉಷಾ ಹಾಗೂ ಪೋಷಕರು ಹಾಗೂ ವಿದ್ಯಾರ್ಥಿ ವೃಂದದವರು ಹಾಜರಿದ್ದರು.
- Tuesday
- January 7th, 2025