ಪ್ರತಿ ವರ್ಷ ತನ್ನ ಉದ್ಯಮದಲ್ಲಿ ಗಳಿಸಿದ ಲಾಭದಲ್ಲಿ ಸ್ವಲ್ಪ ಹಣವನ್ನು ಕಷ್ಟದಲ್ಲಿರುವವರಿಗೆ ನೆರವು ನೀಡುವ ಮೂಲಕ ಗುತ್ತಿಗಾರಿನ ರಾಘವೆಂದ್ರ ಬೇಕರಿ ಮಾಲಕರಾದ ಅನಿಲ್ ಕುಮಾರ್ ರವರು ಮಾದರಿಯಾಗಿದ್ದಾರೆ.
ನಾಲ್ಕೂರು ಗ್ರಾಮದ ಚಾರ್ಮಾತ ಹರಿಶ್ಚಂದ್ರ ರವರ ಒಂದು ವರ್ಷ ಏಳು ತಿಂಗಳ ಮಗುವಿಗೆ ಆರೋಗ್ಯ ಸಮಸ್ಯೆ ಇದ್ದು ತಿಂಗಳಿಗೆ ಸುಮಾರು ಮೂರರಿಂದ ನಾಲ್ಕು ಸಾವಿರ ಚಿಕಿತ್ಸೆಗೆ ಬೇಕಾಗಿರುತ್ತದೆ. ಇದನ್ನು ಮನಗಂಡು ದಾನಿಗಳಾಗದ
ಗುತ್ತಿಗಾರು ರಾಘವೇಂದ್ರ ಬೇಕರಿಯ ಮಾಲಕರಾದ ಅನಿಲ್ ಕುಮಾರ್ ರವರು ಮಗುವಿನ ಮುಂದಿನ ಚಿಕಿತ್ಸೆಗಾಗಿ ರೂ 8,000 ವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.