ದೇವರಕೊಲ್ಲಿಯಲ್ಲಿ ಎಸ್ಟೇಟ್ ನಲ್ಲಿ ರಾತ್ರಿ ವಾಚ್ ಮನ್ ಕೆಲಸ ಮುಗಿಸಿ ಬೆಳಗ್ಗೆ ಸ್ಕೂಟಿಯಲ್ಲಿ ಮನೆಗೆ ತೆರಳುವ ಸಂದರ್ಭದಲ್ಲಿ ಕಾಡಾನೆ ದಾಳಿ ನಡೆಸಿ ವಾಹನ ಜಖಂ ಗೊಳಿಸಿದ ಘಟನೆ ಇಂದು ವರದಿಯಾಗಿದೆ. ಸವಾರ ಮುತ್ತು ಎಂಬುವವರು ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಸ್ಕೂಟಿಯನ್ನು ಆನೆ ದಂತದಿಂದ ತಿವಿದು ರಸ್ತೆಗೆ ಹಾಕಿ ತುಳಿದಿದೆ. ಮುತ್ತುರವರ ಮಗ ರಾಜಕುಮಾರ್ ಗಡಿಯಲ್ಲಿ ಯೋಧನಾಗಿ ಕತ೯ವ್ಯದಲ್ಲಿದ್ದು ಕೂಡಲೇ ಅರಣ್ಯ ಇಲಾಖೆ,ಪೊಲೀಸ್ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸಂಪಾಜೆ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಮಾಜಿ ಗ್ರಾಮ ಪಂಚಾಯತ್ ಸದಸ್ಯ ಶಿವಪೆರುಮಾಳ್,ಜಾಜ್೯,ಕಿರಣ ತೆರಳಿದ್ದಾರೆ.
- Tuesday
- January 7th, 2025