
ಸಂಪಾಜೆ:; ಸ್ವಾಮಿ ಕೊರಗಜ್ಜ ಸೇವಾ ಸಮಿತಿಯ ಆಶ್ರಯದಲ್ಲಿ ಮಾರ್ಚ್ 1 ಮತ್ತು 2 ರಂದು ನಡೆಯುವ ಸ್ವಾಮಿ ಚೌಕಾರು ಮಂತ್ರವಾದಿ ಗುಳಿಗ, ಕಲ್ಲುರ್ಟಿ, ಧರ್ಮ ದೈವ, ಸ್ವಾಮಿ ಕೊರಗಜ್ಜ ದೈವದ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮವು ಡಿ. 30ರಂದು ಕೊರಗಜ್ಜ ದೈವದ ಸನ್ನಿಧಿ ಚೆಡಾವಿನಲ್ಲಿ ನಡೆಯಿತು.
ಆಮಂತ್ರಣ ಪತ್ರಿಕೆಯನ್ನು ಸುರೇಶ್ ಪೆರುಮುಂಡ ಪೆರಾಜೆ ರವರು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಸುರೇಶ್ ಪಿ.ಎಲ್, ಬಲರಾಜು ಕೆ.ಎಸ್, ಶ್ರೀಮತಿ ರಾಜೇಶ್ವರಿ ಕೆ.ಕೆ, ಬಾಬು ಹೆಚ್.ಎಂ, ದೈವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷರಾದ ಸಚಿನ್ ಹಾಗೂ ಸಮಿತಿಯ ಸದಸ್ಯರು ಭಾಗವಹಿಸಿದ್ದರು.
