- Tuesday
- March 11th, 2025

ಅರಂತೋಡು: ತೊಡಿಕಾನ ಸಮೀಪದ ಕೊಡಗು ಭಾಗಮಂಡಲ ರೇಂಜ್ ಮೀಸಲು ಅರಣ್ಯ ಪ್ರದೇಶದ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಅಕ್ರಮವಾಗಿ ಪ್ರವೇಶಿಸಿ ಹೊಸ ವರ್ಷ ಆಚರಣೆಗೆ ಸಿದ್ಧತೆ ಮಾಡುತ್ತಿದ್ದ ಆರೋಪದಲ್ಲಿ 30 ಮಂದಿ ಯುವಕರನ್ನು ಅರಣ್ಯ ಇಲಾಖೆಯವರು ವಶಕ್ಕೆ ಪಡೆದು ಮುಚ್ಚಳಿಕೆ ಬರೆಸಿ, ಎಚ್ಚರಿಕೆ ನೀಡಿ ಕಳುಹಿಸಿದ್ದಾರೆ. ಡಿ.31 ರಂದು ಸಂಜೆ ಕೋಳಿಕಲ್ಲು ಮಲೆ ಬೆಟ್ಟಕ್ಕೆ ಯುವಕರು ತೆರಳುತ್ತಿದ್ದಂತೆ...

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ವತಿಯಿಂದ ಸಂಪಾಜೆ ವಲಯ ತೊಡಿಕಾನ ಕಾರ್ಯಕ್ಷೇತ್ರದ ಆದಿಶಕ್ತಿ ಸಂಘದ ಸದಸ್ಯ ರಾದ ವಸಂತಿ ರವರ ಅತ್ತೆ ರಾಮಕ್ಕರವರಿಗೆ ವಾಟರ್ ಬೆಡ್ ನೀಡಲಾಯಿತು. ರಾಮಕ್ಕರವರು ಅನಾರೋಗ್ಯದಿಂದಿದ್ದು ಜನ ಮಂಗಳ ಕಾರ್ಯಕ್ರಮದಡಿಯಲ್ಲಿ ವಾಟರ್ ಬೆಡ್ ನ್ನು ವಲಯ ಜನಜಾಗ್ರತಿ ಅಧ್ಯಕ್ಷರಾದ ಸೋಮಶೇಖರ ಪೈಕ ರವರು ವಿತರಿಸಿದರು. ವಲಯ ಮೇಲ್ವಿಚಾರಕರು ಹಾಗೂ ಸೇವಾ ಪ್ರತಿನಿಧಿ ಉಪಸ್ಥಿತರಿದ್ದರು.

ಪೆರುವಾಜೆ ಶ್ರೀ ಜಲದುರ್ಗಾದೇವಿ ದೇವಾಲಯದ ವಾರ್ಷಿಕ ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀ ಉಳ್ಳಾಲ್ತಿ ಭಕ್ತವೃಂದ ಮುಕ್ಕೂರು ಹಾಗೂ ಶ್ರೀ ಕ್ಷೇತ್ರ ಪೆರುವಾಜೆ ಭಕ್ತವೃಂದದಿಂದ ಜ.1 ರಂದು ರಾತ್ರಿ ಕರಸೇವೆ ನಡೆಯಿತು. ಶ್ರೀ ಕ್ಷೇತ್ರದಲ್ಲಿ ದಿನಾಂಕ 16-01-2025 ರಿಂದ 21-01-2025 ರವರೆಗೆ ವಾರ್ಷಿಕ ಜಾತ್ರೆ ಮತ್ತು ಬ್ರಹ್ಮ ರಥೋತ್ಸವ ನಡೆಯಲಿದೆ.

ಶ್ರೀ ಕ್ಷೇತ್ರ ಬ್ರಹ್ಮರಗಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ 47ನೇ ವರ್ಷದ ಅಯ್ಯಪ್ಪ ದೀಪೋತ್ಸವ ಮತ್ತು ರಂಗಪೂಜೆ ಮಹೋತ್ಸವ ಜ 01ರಂದು ವಿಜೃಂಭಣೆಯಿಂದ ನಡೆಯಿತು.ಹಳೆಗೇಟು ನಿಂದ ಕೇರಳದ ಚೆಂಡೆ ವಾದನದೊಂದಿಗೆ, ಶ್ರೀ ದುರ್ಗಾಶಕ್ತಿ ಸೇವಾ ಬಳಗ ಹೊಸಗದ್ದೆ, ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ, ಶ್ರೀ ಗಜಾನನ ಭಜನಾ ಮಂದಿರ...