Ad Widget

ರಸ್ತೆ ದಾಟುತ್ತಿದ್ದ ವ್ಯಕ್ತಿಗೆ ಬೈಕ್ ಡಿಕ್ಕಿಯಾಗಿ ಮೃತ್ಯು – ಆರೋಪಿ ಬೈಕ್ ಸವಾರ ದೋಷಮುಕ್ತ


ಕಳೆದ ವರ್ಷ ಜಾಲ್ಸುರು ಎಂಬಲ್ಲಿ ಬೈಕ್ ಡಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಮೃತಪಟ್ಟ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಬೈಕ್ ಚಾಲಕ ರಾಜಶೇಖರ ಎಂಬತನನ್ನು ದೋಷ ಮುಕ್ತ ಗೊಳಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಆದೇಶಿಸಿದೆ.
ದಿನಾಂಕ : 28-12-2023ರಂದು ಬೆಳಿಗ್ಗೆ ಮಾಣಿ – ಮೈಸೂರು ಹೆದ್ದಾರಿ ರಸ್ತೆಯ ಸುಳ್ಯದ ಜಾಲ್ಸೂರು ಪೇಟೆಯ ಫಾರೆಸ್ಟು ಚೆಕ್ ಪೋಸ್ಟ್  ಎದುರು  ರಸ್ತೆ ದಾಟಲು ನಿಂತಿದ್ದ ಪುರುಷೋತ್ತಮ ರವರಿಗೆ ಪುತ್ತೂರು ಕಡೆಯಿಂದ ಸುಳ್ಯ ಕಡೆಗೆ ರಾಜಶೇಖರ ಎಂಬಾತ ಚಲಾಯಿಸಿ ಕೊಂಡು ಬರುತ್ತಿದ್ದ ಬೈಕ್ ಡಿಕ್ಕಿಯಾಗಿತ್ತು. ಪರಿಣಾಮ ಗಂಭೀರ ಗಾಯಗೊಂಡ ಪುರುಷೋತ್ತಮ ರವರನ್ನು ಅಲ್ಲಿದ್ದ ಜನರು ಉಪಚರಿಸಿ ಆಟೋ ರಿಕ್ಷಾದಲ್ಲಿ ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ನೀಡಿ ವೈದ್ಯರು ಸೂಚಿಸಿದಂತೆ ಹೆಚ್ಚಿನ ಚಿಕಿತ್ಸೆಗೆ ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿರುವಾಗ ಮಾಣಿ ಎಂಬಲ್ಲಿಗೆ ತಲುಪಿದಾಗ ಪುರುಷೋತ್ತಮ ರವರು ಯಾವುದೇ ಪ್ರತಿಕ್ರಿಯೆ ನೀಡದಾಗ ವಾಪಸು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು ಪುರುಷೋತ್ತಮ ರವರು ಮೃತ ಪಟ್ಟಿದ್ದಾರೆ ಎಂದು ದೃಢ ಪಡಿಸಿದ್ದರು.
ಈ ಹಿನ್ನಲೆಯಲ್ಲಿ ಆರೋಪಿ ರಾಜಶೇಖರರ ಮೇಲೆ ಸುಳ್ಯ ಪೋಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ ಕಲಂ 279,304(A) ಯಂತೆ ಪ್ರಕರಣ ದಾಖಲಿಸಿ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯಕ್ಕೆ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ನಡೆಸಿದ ಸುಳ್ಯ ಹಿರಿಯ ಸಿವಿಲ್ ನ್ಯಾಯಲಯ ಇದರ ನ್ಯಾಯಾಧೀಶರು ಮತ್ತು ನ್ಯಾಯಿಕ ದಂಡಾಧಿಕಾರಿಯಾದ ಶ್ರೀ ಬಿ.ಮೋಹನ್ ಬಾಬು ರವರು ಪ್ರಕರಣವನ್ನು ಸಾಭಿತು ಪಡಿಸಲು ಅಭಿಯೋಜನೆಯು ವಿಫಲ ಗೊಂಡಿದೆ ಎಂದು ಅಭಿಪ್ರಾಯಿಸಿ ಆರೋಪಿಯನ್ನು ನಿರ್ದೋಶಿ ಎಂದು ದಿನಾಂಕ : 30/12/2024 ರಂದು ತೀರ್ಪು ನೀಡಿ ಬಿಡುಗಡೆಗೆ ಆದೇಶಿಸಿದ್ದಾರೆ . ಆರೋಪಿ ಪರವಾಗಿ ಸುಳ್ಯದ ವಕೀಲರಾದ ಎಂ.ವೆಂಕಪ್ಪ ಗೌಡ, ಚಂಪಾ ವಿ ಗೌಡ, ರಾಜೇಶ್ ಬಿ.ಜಿ ,ಶ್ಯಾಮ್ ಪ್ರಸಾದ್ ಎನ್.ಕೆ ಹಾಗೂ ಸಂಜನ್ ಕೋಲ್ಚಾರ್ ವಾದಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading