ಶ್ರೀ ಕ್ಷೇತ್ರ ಬ್ರಹ್ಮರಗಯ ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಬ್ರಹ್ಮಶ್ರೀ ವೇದವ್ಯಾಸ ತಂತ್ರಿಯವರ ನೇತೃತ್ವದಲ್ಲಿ 47ನೇ ವರ್ಷದ ಅಯ್ಯಪ್ಪ ದೀಪೋತ್ಸವ ಮತ್ತು ರಂಗಪೂಜೆ ಮಹೋತ್ಸವ ಜ 01ರಂದು ವಿಜೃಂಭಣೆಯಿಂದ ನಡೆಯಿತು.
ಹಳೆಗೇಟು ನಿಂದ ಕೇರಳದ ಚೆಂಡೆ ವಾದನದೊಂದಿಗೆ, ಶ್ರೀ ದುರ್ಗಾಶಕ್ತಿ ಸೇವಾ ಬಳಗ ಹೊಸಗದ್ದೆ, ಶ್ರೀ ಮಂಜುನಾಥೇಶ್ವರ ಭಜನಾ ಮಂದಿರ ಬೆಟ್ಟಂಪಾಡಿ, ಶ್ರೀ ಗಜಾನನ ಭಜನಾ ಮಂದಿರ ಜಯನಗರ, ಶ್ರೀ ಮಹಾಗಣಪತಿ, ಮುತ್ತು ಮಾರಿಯಮ್ಮ ದೇವಸ್ಥಾನ ಮಿಲಿಟರಿ ಗ್ರೌಂಡ್ ಇವರ ಸಹಯೋಗದಲ್ಲಿ ಕುಣಿತ ಭಜನೆ ಮತ್ತು ದೀಪದಾನ ಸೇವೆ ಮೆರವಣಿಗೆ ಯ ಮೂಲಕ ಸಾಗಿ ಅಯ್ಯಪ್ಪ ಸನ್ನಿಧಾನ ತಲುಪಿತು. ರಾತ್ರಿ 8.30ಗಂಟೆಯಿಂದ ವಿಶೇಷ ರಂಗಪೂಜೆ ಬಳಿಕ ಕಲ್ಲಡ್ಕ ವಿಠಲ ನಾಯಕ್ ಮತ್ತು ಬಳಗದಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
- Thursday
- January 9th, 2025