Ad Widget

ಮಾವಿನಕಟ್ಟೆ ದೇವ ರಸ್ತೆ ಬದಿ ಬೆಳೆದಿರುವ ಗಿಡಗಂಟಿ – ಸಂಚಾರಕ್ಕೆ ತೊಂದರೆ

ಮಾವಿನಕಟ್ಟೆ ದೇವ ರಸ್ರೆಯುದ್ದಕ್ಕೂ ಗಿಡಗಂಟಿ ಬೆಳೆದು ರಸ್ತೆ ಇಕ್ಕಟ್ಟಾಗಿದ್ದು ಸಂಚಾರಕ್ಕೆ ತೊಂದರೆಯಾಗುತ್ತಿದೆ.‌ ದೇವ ಕಂದ್ರಪ್ಪಾಡಿ ರಸ್ತೆ ಸಂಚಾರ ಬ್ಲಾಕ್ ಆಗಿರುವುದರಿಂದ ದೇವ ಮಾವಿನಕಟ್ಟೆ ರಸ್ತೆಯಲ್ಲಿ ಹೆಚ್ಚು ವಾಹನಗಳು ಸಂಚರಿಸುತ್ತಿದೆ. ಯಾವುದೇ ಅಪಘಾತಗಳು ಸಂಭವಿಸುವ ಮೊದಲು  ಜಿ.ಪಂ.ರಸ್ತೆಯನ್ನು ಸಂಬಂಧಪಟ್ಟವರು ಗಮನ‌ ಹರಿಸಿ ಕ್ರಮ ಕೈಗೊಳ್ಳುವಂತೆ ನಾಗರಿಕರು ಒತ್ತಾಯಿಸಿದ್ದಾರೆ.‌

ಸೈಕ್ಲಿಂಗ್‍ನಿಂದ ಆರೋಗ್ಯ ಭಾಗ್ಯ

ಒಬ್ಬ ವ್ಯಕ್ತಿ ಜೀವನ ಪರ್ಯಂತ ಆರೋಗ್ಯವಂತನಾಗಿರಬೇಕಾದಲ್ಲಿ ಆತನು ದೈಹಿಕ ಮತ್ತು ಮಾನಸಿಕವಾಗಿ ಯಾವತ್ತೂ ಉಲ್ಲಸಿತನಾಗಿರುವುದು ಅತೀ ಅಗತ್ಯ. ನಿರಂತರ ದೈಹಿಕ ಕಸರತ್ತು ಅಥವಾ ವ್ಯಾಯಾಮದಿಂದ ಅಪಾಯಕಾರಿ ರೋಗಗಳಾದ ಹೃದಯಾಘಾತ, ಕ್ಯಾನ್ಸರ್, ಸ್ಥೂಲಕಾಯ, ಮಧುಮೇಹ, ಅಧಿಕರಕ್ತದೊತ್ತಡ, ಗಂಟು ನೋವು, ಮಾನಸಿಕ ಖಿನ್ನತೆ ಮುಂತಾದವುಗಳನ್ನು ಬಹಳ ಸುಲಭವಾಗಿ ತಡೆಗಟ್ಟಬಹುದು. ಅತೀ ಕಡಿಮೆ ಖರ್ಚಿನಲ್ಲಿ ದೊರಕಬಹುದಾದ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮ...
Ad Widget

ಪಂಜ : ರಿಕ್ಷಾ ಚಾಲಕ ಮನೋಜ್ ಕುಮಾರ್ ಅನಾರೋಗ್ಯದಿಂದ ಮೃತ್ಯು

ಪಂಜ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯ, ಬಳ್ಪ ಗ್ರಾಮದ ಕಾಂಜಿ ವಾಸುದೇವ ಗೌಡ ಮತ್ತು ಶ್ರೀಮತಿ ದೇವಕಿ ದಂಪತಿಗಳ ಪುತ್ರ ಮನೋಜ್ ಕುಮಾರ್ (32) ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಆಸ್ಪತ್ರೆಯಲ್ಲಿ ಡಿ.25 ರಾತ್ರಿ ನಿಧನರಾದರು.. ಪಂಜದಲ್ಲಿ ಅನೇಕ ವರ್ಷಗಳಿಂದ ಆಟೋ ರಿಕ್ಷಾ ಬಾಡಿಗೆ ನಡೆಸುತ್ತಿದ್ದ ಅವರು ಕೆಲವು ವರ್ಷಗಳಿಂದ ಪಂಜದಲ್ಲಿ ಗೂಡ್ಸ್ ರಿಕ್ಷಾ...

ಮರ್ಕಂಜ : ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು – ವಿಜಯೋತ್ಸವ

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದ ಹಿನ್ನೆಲೆಯಲ್ಲಿ ವಿಜಯೋತ್ಸವ ನಡೆಯಿತು. ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಹರೀಶ್ ಕಂಜಿಪಿಲಿ, ನೂತನ ನಿರ್ದೆಶಕರಾಗಿ ಆಯ್ಕೆಯಾದ ಚೆನ್ನಕೇಶವ. ಡಿ, ದಯಾನಂದ ಪಿ, ಮೋನಪ್ಪ ಪೂಜಾರಿ.ಡಿ, ವೆಂಕಟ್ರಮಣ ಗೌಡ ಕೆ, ನವೀನ. ಕೆ., ಅಕ್ಷತಾ.ಕೆ.ಸಿ, ಲತಾ ಹೆಚ್.,...

ಸುಳ್ಯ ಪುರ ಪ್ರವೇಶ ಪಡೆದ ಚೆನ್ನಕೇಶವ ದೇವರ ಬ್ರಹ್ಮರಥ – ಡಿ.31 ರಂದು ಡಾ. ಕೆ ವಿ ಚಿದಾನಂದ ಮತ್ತು ಕುಟುಂಬಸ್ಥರಿಂದ ಚೆನ್ನಕೇಶವ ದೇವರಿಗೆ ಸಮರ್ಪಣೆ .

ಸುಳ್ಯ: ಸುಳ್ಯವನ್ನು ಶಿಕ್ಷಣ ಕಾಶಿಯಾಗಿ ಕಟ್ಟಿ ಸುಳ್ಯದ ಬೆಳಕಾಗಿ ಕಂಗೊಳಿಸಿದ ಕೆ ವಿ ಜಿ ಯವರ ಹಿರಿಯ ಪುತ್ರ ಚೆನ್ನಕೇಶವ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ ವಿ ಚಿದಾನಂದ ಮತ್ತು ಮನೆಯವರು ಸುಮಾರು 1.10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ನೂತನ ಭ್ರಹ್ಮರಥವು ದಿ. 24 ರಂದು ಹೊರಟು ಇಂದು ಚೆನ್ನಕೇಶವನ ಪುಣ್ಯ ಭೂಮಿಯಾದ...

ಬೆಳ್ಳಾರೆ : ಸಹಕಾರಿ ಸಂಘದ ಆಡಳಿತ ಬಿಜೆಪಿ ತೆಕ್ಕೆಗೆ –  ಪೇಟೆಯಲ್ಲಿ ಮೆರವಣಿಗೆ, ವಿಜಯೋತ್ಸವ

ಕೆಲ ವರ್ಷಗಳ ಬಳಿಕ ಬಿಜೆಪಿ ಮತ್ತೆ ಬಹುಮತದೊಂದಿಗೆ ಬೆಳ್ಳಾರೆ ಸಹಕಾರಿ ಸಂಘದ ಆಡಳಿತ ಚುಕ್ಕಾಣಿ ಹಿಡಿದ ಹಿನ್ನೆಲೆಯಲ್ಲಿ ಭರ್ಜರಿ ವಿಜಯೋತ್ಸವ ನಡೆಯಿತು.  ಪೇಟೆಯ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಸಾಗಿ ಬಸ್ ನಿಲ್ದಾಣದ ಬಳಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಪಕ್ಷದ ಪ್ರಮುಖರಾದ ಜಿಲ್ಲಾ ಬಿಜೆಪಿ ಪ್ರ.ಕಾರ್ಯದರ್ಶಿ ಯತೀಶ್ ಆರ್ವಾರ್,  ಮಂಡಲಾಧ್ಯಕ್ಷ ವೆಂಕಟ್ ವಳಲಂಬೆ ,...

ಮರ್ಕಂಜ : ಮತ್ತೆ ಪಾರಮ್ಯ ಮೆರೆದ ಬಿಜೆಪಿ ಬೆಂಬಲಿತ ಸಹಕಾರ ಭಾರತಿ – ಬಿಜೆಪಿ 11, ಸ್ವತಂತ್ರ 1

ಮರ್ಕಂಜ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 12 ನಿರ್ದೇಶಕ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ 11 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಹಾಗೂ ಒಬ್ಬರು ಸ್ವತಂತ್ರ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ. ಹಿಂದುಳಿದ ವರ್ಗ ಎ ಸ್ಥಾನದಿಂದ ಬಿಜೆಪಿಯ ಸರಸ್ವತಿ ಕಕ್ಕಾಡು ಅವಿರೋಧವಾಗಿ ಆಯ್ಕೆಯಾಗಿದ್ದರು. ಉಳಿದ 11...

ಬೆಳ್ಳಾರೆ : ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು – 11ಬಿಜೆಪಿ, 1 ಕಾಂಗ್ರೆಸ್ ಗೆಲುವು

ಬೆಳ್ಳಾರೆ: ಬೆಳ್ಳಾರೆ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. 12 ಸ್ಥಾನಗಳ ಪೈಕಿ ಸಹಕಾರ ಭಾರತಿ ಅಭ್ಯರ್ಥಿಗಳು 11 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಮೂಲಕ ಆಡಳಿತಕ್ಕೇರಿದೆ. ಕಾಂಗ್ರೆಸ್ ಬೆಂಬಲಿತ ಒಬ್ಬರು ಅಭ್ಯರ್ಥಿ ಮಾತ್ರ ಗೆದ್ದು ಬಿಜೆಪಿಗೆ ಆಡಳಿತ ಬಿಟ್ಡುಕೊಟ್ಟಿದೆ. ಸಾಮಾನ್ಯ ಕ್ಷೇತ್ರದಿಂದ ಬಿಜೆಪಿ...

ಗುತ್ತಿಗಾರು ಸೊಸೈಟಿಯ ನಿವೃತ್ತ ಸಿಇಓ ಕೆ ಶಂಕರನಾರಾಯಣ ಶರ್ಮ ನಿಧನ

ಗುತ್ತಿಗಾರು ಪ್ರಾ.ಕೃ.ಪ.ಸ.ಸಂಘದ ನಿವೃತ್ತ ಸಿಇಓ ಕೆ ಶಂಕರನಾರಾಯಣ ಶರ್ಮ ರವರು ವಳಲಂಬೆಯ ಸ್ವ ಗೃಹದಲ್ಲಿ ಇಂದು ಸಂಜೆ ನಿಧನರಾದರು. ಅವರಿಗೆ 71 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ನಿವೃತ್ತ ಶಿಕ್ಷಕಿ ರಾಜೇಶ್ವರಿ ಹಾಗೂ ಪುತ್ರರಾದ ಎಲಿಮಲೆಯಲ್ಲಿ ಆಯುರ್ವೇದ ಕ್ಲಿನಿಕ್ ನಡೆಸುತ್ತಿರುವ ಡಾ.ಮಹೇಶ್ ಶರ್ಮ ಮತ್ತು ರವೀಶ್ ಶರ್ಮ ರನ್ನು ಅಗಲಿದ್ದಾರೆ.

ಸುಳ್ಯಕ್ಕೆ ಆಗಮಿಸಿದ ಬ್ರಹ್ಮರಥ – ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣಿಗೆಯಲ್ಲಿ ಸಾಗಿ ಬರಲಿದೆ ಬ್ರಹ್ಮರಥ

ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಮತ್ತು ಮನೆಯವರಿಂದ ಸಮರ್ಪಣೆಯಾಗಲಿರುವ ನೂತನ ಬ್ರಹ್ಮರಥ ಇದೀಗ ಸುಳ್ಯದ ಜ್ಯೋತಿ ಸರ್ಕಲ್ ಗೆ ಆಗಮಿಸಿದ್ದು, ಜ್ಯೋತಿ ಸರ್ಕಲ್ ಬಳಿಯಿಂದ ಮೆರವಣೆಗೆ ಮುಖಾಂತರ ದೇವಸ್ಥಾನದ ಮುಂಭಾಗಕ್ಕೆ ಬರಲಿದೆ. ಡಿ.24ರಂದು ಕೋಟೇಶ್ವರದಿಂದ ಹೊರಟ ರಥ ಕನಕಮಜಲು ತಲುಪುತ್ತಿದ್ದಂತೆ ಶ್ರೀ ಆತ್ಮಾರಾಮ ದೇವರಿಗೆ...
Loading posts...

All posts loaded

No more posts

error: Content is protected !!