- Thursday
- April 3rd, 2025

ಸುಳ್ಯದಲ್ಲಿ ಕಳೆದ ನಾಲ್ಕು ತಿಂಗಳಿಂದ ಕೆ.ಎಂ. ವಿಕ್ರಮ್ ಎಂಬವರು ನೆಲೆಸಿ, ಕೂಲಿ ಮಾಡಿಕೊಂಡಿದ್ದು, ನ.7 ರಂದು ದಾವಣಗೆರೆ ಜಿಲ್ಲೆಯ ಚೆನ್ನಗಿರಿ ಮೂಲದ ಮಂಗಳ ಯಾನೆ ಕಾವ್ಯ ಎಂಬಾಕೆಯನ್ನು ವಿವಾಹವಾಗಿದ್ದರು. ನ.20 ರಂದು ಈಕೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುತ್ತೇನೆ ಎಂದು ಹೋದವರು ನಾಪತ್ತೆಯಾಗಿದ್ದಾಳೆ ಎಂದು ಸುಳ್ಯ ಪೋಲೀಸರಿಗೆ ಪತಿ ವಿಕ್ರಮ್ ದೂರಿನಲ್ಲಿ ತಿಳಿಸಿದ್ದಾರೆ. ಈಕೆ...

ಸುಳ್ಯದ ನಗರ ವ್ಯಾಪ್ತಿಯ ಅಂಗಡಿಗಳಲ್ಲಿ ಪ್ರತಿನಿತ್ಯ ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದು ಅದೇ ರೀತಿಯಲ್ಲಿ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ತರಕಾರಿ ಅಂಗಡಿಗೆ ಕಳ್ಳ ನುಗಿದ್ದು, ಚಿಲ್ಲರೆ ಹಣವನ್ನು ಎಗರಿಸಿ, ತಾನು ತಂದಿದ್ದ ಮದ್ಯದ ಪ್ಯಾಕೆಟ್ ಅಲ್ಲಿಯೇ ಬಿಟ್ಟು ಹಿಂತಿರುಗಿದ ಘಟನೆ ವರದಿಯಾಗಿದೆ. ಕಳೆದ ಒಂದು ವಾರದಲ್ಲಿ ಸುಳ್ಯ, ಪೈಚಾರು, ಅಡ್ಕಾರ್, ಬೆಳ್ಳಾರೆ ಮುಂತಾದ...

ರವಿವಾರ ಸಂಜೆ ಸುಬ್ರಹ್ಮಣ್ಯ ದೇವಸ್ಥಾನದ ಸಮೀಪದಲ್ಲಿ ಕಾಡಾನೆಯೊಂದು ಸಂಚರಿಸಿದ್ದು, ಇದರ ಮಾಹಿತಿ ಬೆನ್ನಲ್ಲೇ ಅರಣ್ಯ ಇಲಾಖೆ ಸ್ಥಳ ಪರಿಶೀಲನೆ ನಡೆಸಿದ್ದು, ಕಾಡಾನೆ ಅರಣ್ಯದೊಳಗೆ ಸೇರಿರುವ ಬಗ್ಗೆ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಕಾಡಾನೆ ಮೇಲೆ ನಿಗಾ ಇಡಲು ಅರಣ್ಯ ಇಲಾಖೆ ತಂಡ ರಚಿಸಿದೆ. ಕಾಡಾನೆ ಕಂಡುಬಂದಲ್ಲಿ ಸಾರ್ವಜನಿಕರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದು ಪುತ್ತೂರು ಸಹಾಯಕ ಆಯುಕ್ತ,...

ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಈ ಬಾರಿಯ ಚುನಾವಣೆಗೆ ನೂತನವಾಗಿ ರೂಪಿಸಲ್ಪಟ್ಟಿರುವ ಸಮನ್ವಯ ಸಹಕಾರಿ ಬಳಗದ ಸದಸ್ಯರುಗಳು ಸ್ಪರ್ಧೆ ಮಾಡಲಿದ್ದಾರೆ ಎಂದು ಸಂಪಾಜೆ ಸೊಸೈಟಿ ಮಾಜಿ ಅಧ್ಯಕ್ಷ ಜಗದೀಶ್ ಕೆ.ಪಿ. ತಿಳಿಸಿದ್ದಾರೆ. ನ.30 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು “ಸುಳ್ಯ ತಾಲೂಕಿನ ಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ...

ವಿದ್ಯಾಬೋಧಿನೀ ವಿದ್ಯಾಸಂಸ್ಥೆ ಬಾಳಿಲದಲ್ಲಿ ನವೆಂಬರ್ 29 ಮತ್ತು 30ರಂದು ಸಂಯುಕ್ತ ಕ್ರೀಡೋತ್ಸವ ನಡೆಯಿತು. ಗತಕಾಲದಲ್ಲಿ ಉತ್ತಮ ಕ್ರೀಡಾ ಪ್ರತಿಭೆ ರೂಪಿಸಿದ ಸಂಸ್ಥೆಯಿಂದ ಮುಂದಿನ ದಿನಗಳಲ್ಲಿ ಹೆಚ್ಚೆಚ್ಚು ಕ್ರೀಡಾಪಟುಗಳು ರೂಪುಗೊಳ್ಳಲಿ ಎಂದು ಸುಧಾಕರ ರೈ ಬಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ರಾಷ್ಟ್ರೀಯ ಕ್ರೀಡಾಪಟು, ಉದ್ಯಮಿ ಕ್ರೀಡೋತ್ಸವ 2024ನ್ನು ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಧಾಕೃಷ್ಣರಾವ್ ಯು...

https://youtu.be/o2QzORnofws?si=SQ6G5LEE6yrhzjoP ಎಲ್ಲಾ ಇಲಾಖೆಯ ಅಧಿಕಾರಿ ಬಂದಿಲ್ಲ ಹಾಗೂ ಗ್ರಾಮಸ್ಥರು ಕಡಿಮೆ ಸಂಖ್ಯೆಯಲ್ಲಿದ್ದಾರೆಂದು ಕೆಲ ಗ್ರಾಮಸ್ಥರು ಆಕ್ಷೇಪ ವ್ಯಕ್ತಪಡಿಸಿ, ಕಪ್ಪು ಪಟ್ಟಿ ಪ್ರದರ್ಶಿಸಿ, ಸಭಾತ್ಯಾಗ ಮಾಡಿದ ಘಟನೆ ನ.30 ರಂದು ನಡೆದ ಚೆಂಬು ಗ್ರಾಮಸಭೆಯಲ್ಲಿ ವರದಿಯಾಗಿದೆ. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಎಲ್ಲಾ ಇಲಾಖೆಯ ಅಧಿಕಾರಿಗಳು ಬಾರದೇ ಇದ್ದರೇ ಗ್ರಾಮ ಸಭೆ ಮಾಡುವುದು ಬೇಡ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಸಮಸ್ಯೆಗಳಿಗೆ...

ಹರಿಹರ ಪಳ್ಳತ್ತಡ್ಕ ಗ್ರಾಮದ ಕಜ್ಜೋಡಿ ಶರತ್ ಭಾಗವತ್ ಎಂಬುವವರ ತೋಟಕ್ಕೆ ನ.30 ರಂದು ರಾತ್ರಿ ಆನೆ ದಾಳಿ ನಡೆಸಿದ್ದು, ಅಡಿಕೆ, ತೆಂಗು, ಬಾಳೆ, ಸ್ಪ್ರಿಂಕ್ಲರ್ ಹಾಗೂ ತೋಟದ ರಕ್ಷಣೆಗಾಗಿ ಅಳವಡಿಸಿದ್ದ ಬೇಲಿಯನ್ನು ಹಾಳುಗೆಡವಿದೆ ಎಂದು ತಿಳಿದುಬಂದಿದೆ.(ವರದಿ : ಉಲ್ಲಾಸ್ ಕಜ್ಜೋಡಿ)

ಸುಳ್ಯದ ಸೈಂಟ್ ಜೋಸೆಫ್ ವಿದ್ಯಾಸಂಸ್ಥೆಯಲ್ಲಿ ಬೆಳ್ಳಿ ಹಬ್ಬದ ಕಾರ್ಯಕ್ರಮದ ಪ್ರಯುಕ್ತ ನ.30ರಂದು ವಿದ್ಯಾರ್ಥಿಗಳಿಗೆ ಆಹಾರ ಮೇಳವನ್ನು ಏರ್ಪಡಿಸಲಾಯಿತು. ಆಹಾರ ಮೇಳದ ಸಭಾ ಕಾರ್ಯಕ್ರಮದ ಸಭಾಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ ' ಸೋಜ ವಹಿಸಿದ್ದರು. ವೇದಿಕೆಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷರಾದ ಶಶಿಧರ ಎಂ .ಜೆ, ಪೂರ್ವ ಪ್ರಾಥಮಿಕ ಶಾಲಾ...

ಹಳಗೇಟು ರಂಗಮನೆ ಸಾಂಸ್ಕೃತಿಕ ಕಲಾ ಕೇಂದ್ರ ದಲ್ಲಿ ಡಿಸೆಂಬರ್ 8 ರಂದು ಭಾನುವಾರ ಸಂಜೆ ಗಂಟೆ 5:45 ರಿಂದ ರಾತ್ರಿ 8:15ರ ವರೆಗೆ ರಂಗಮನೆ ಸಾಂಸ್ಕೃತಿಕ ಕಲಾಕೇಂದ್ರ ಸುಳ್ಯ ಮತ್ತು ಮಹಾಬಲ ಲಲಿತಕಲಾ ಸಭಾ ಪುತ್ತೂರು ಇದರ ಸಹಯೋಗದಲ್ಲಿ ಶಾಸ್ತ್ರೀಯ ಸಂಗೀತ ಸಂಭ್ರಮ ನಡೆಯಲಿದೆ ಪ್ರಸಿದ್ಧ ಪದ್ಮಭೂಷಣ ಪಂಡಿತ್ ವಿಶ್ವ ಮೋಹನ್ ಭಟ್ ರವರ ಪುತ್ರ...

ಕರ್ನಾಟಕ ಅರೆಬಾಷೆ ಸಂಸ್ಕೃತಿ ಸಾಹಿತ್ಯ ಅಕಾಡೆಮಿ ನೇತೃತ್ವದಲ್ಲಿ ಮಂಡೆಕೋಲು ಗ್ರಾಮ ಗೌಡ ಸಮಿತಿ ಇವರ ಸಹಕಾರದಲ್ಲಿ ಅರೆಭಾಷೆ ಗಡಿನಾಡ ಉತ್ಸವಕ್ಕೆ ಇಂದು ಮಂಡೆಕೋಲು ಸಾಕ್ಷಿಯಾಗಿದೆ. ಮಂಡೆಕೋಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 'ಅಮೃತ ಸಭಾಭವನದಲ್ಲಿ ಅದ್ದೂರಿ ಸಮಾರಂಭಕ್ಕೆ ಚಾಲನೆ ನೀಡಲಾಯಿತು. ಗೌಡರ ಯುವ ಸೇವಾ ಸಂಘದ ಪೂರ್ವಾಧ್ಯಕ್ಷ ಜಾಕೆ ಸದಾನಂದ ಗೌಡ ಕಾರ್ಯಕ್ರಮ ಉದ್ಘಾಟಿಸಿದರು....

All posts loaded
No more posts