Ad Widget

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹದ ನಿಟ್ಟಿನಲ್ಲಿ ಪುತ್ತೂರು ಮೂಲದ ಯುವಕನ ವಿಶ್ವ ಪರ್ಯಟನೆ

ಮರಳಿ ತಾಲ್ನಾಡಿಗೆ ಆಗಮನ, ಸುಳ್ಯ ಪರಿಸರದ ಅಭಿಮಾನಿಗಳಿಂದ ಸ್ವಾಗತ. ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪುತ್ತೂರು ಮೂಲದ ಸಿನಾನ್ ಎಂಬ ಯುವಕ ಕಳೆದ 2 ವರ್ಷಗಳಿಂದ ತನ್ನ ಸ್ಕೋರ್ಪಿಯೋ ವಾಹನದಲ್ಲಿ ವಿಶ್ವ ಪರಿಯಟನೆ ಮಾಡಿ ಡಿ 3 ರಂದು ತಾಯ್ಕಾಡು ಪುತ್ತೂರಿಗೆ ಮರಳಿದ್ದಾರೆ. ಡಿ 3 ರಂದು ಸಂಜೆ ಸುಳ್ಯ ಮಾರ್ಗವಾಗಿ ಪುತ್ತೂರಿಗೆ ತೆರಳುವ ಮಾಹಿತಿ...

ಸುಳ್ಯ: ಸ್ಕೂಟಿ ಮತ್ತು. ಟ್ಯಾಂಕರ್ ಡಿಕ್ಕಿ -ಸವಾರರಿಬ್ಬರಿಗೂ ಗಾಯ

ಪೈಚಾರು ಆರ್ತಾಜೆ ಸಮೀಪದಲ್ಲಿ ಸುಳ್ಯದಿಂದ ಬೆಳ್ಳಾರೆ ಕಡೆ ಸಂಚರಿಸುತ್ತಿದ್ದ ದ್ವಿಚಕ್ರ ವಾಹನ KA21-Y1937 ಮತ್ತು ಟ್ಯಾಂಕರ್ KA05-AF5616 ಡಿಕ್ಕಿ ಹೊಡೆದಿದ್ದು ದ್ವಿಚಕ್ರ ಸವಾರರಿಬ್ಬರು ಗಾಯಗೊಂಡಿರುತ್ತಾರೆ.ಗಾಯಾಳುಗಳು ಸುಳ್ಯದ ಕೆವಿಜಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಹೆಚ್ಚಿನ ಮಾಹಿತಿ. ಲಭ್ಯವಾಗಬೇಕಿದೆ
Ad Widget

ಸುಳ್ಯ : ಕೆಪಿಸಿಸಿ ಕಾರ್ಯಧ್ಯಕ್ಷ, ಶಾಸಕ ಮಂಜುನಾಥ್ ಭಂಡಾರಿ ನೇತೃತ್ವದಲ್ಲಿ ಡಿ.04 ರಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಸಭೆ

ಕೆಪಿಸಿಸಿ ಕಾರ್ಯಧ್ಯಕ್ಷರು, ವಿಧಾನ ಪರಿಷತ್ ಶಾಸಕರಾದ ಮಂಜುನಾಥ ಭಂಡಾರಿ ಯವರ ಉಪಸ್ಥಿತಿಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯು ಡಿ.04 ರಂದು ನಡೆಯಲಿದೆ. ಅಂದು ಅಪರಾಹ್ನ 3:00 ಗಂಟೆಗೆ ಯುವಜನ ಸಂಯುಕ್ತ ಮಂಡಳಿ ಸಭಾಂಗಣದಲ್ಲಿ ಸಭೆ ನಡೆಯಲಿದೆ.‌ ಈ ಸಭೆಗೆ ಪಕ್ಷದ ಹಿರಿಯ ಕಿರಿಯ ನಾಯಕರು, ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಎಲ್ಲಾ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು,...

ಪೆರಾಜೆಯಲ್ಲಿ ಗಾಳಿ ಮಳೆ ಆಟೋ ನಿಲ್ದಾಣಕ್ಕೆ ಹಾನಿ

ನಿನ್ನೆ ಸಂಜೆ ಸುರಿದ ಗಾಳಿ ಮಳೆಗೆ ಪೆರಾಜೆಯ ಜಂಕ್ಷನ್ ನಲ್ಲಿ ಕಳೆದ ವರ್ಷ ನಿರ್ಮಿಸಿದ ಆಟೋ ನಿಲ್ದಾಣಕ್ಕೆ ಹಾನಿಯಾಗಿದೆ. ಇದರಿಂದ ಆಟೋ ನಿಲ್ದಾಣದಲ್ಲಿ ನಿಲ್ಲಿಸಬೇಕಾದ ರಿಕ್ಷಾಗಳನ್ನು ರಸ್ತೆ ಬದಿಯಲ್ಲಿ ಪಾರ್ಕಿಂಗ್ ಮಾಡುವಂತಾಗಿದೆ. ಕಳೆದ ವರ್ಷ ಪಂಚಾಯತ್‌ ವತಿಯಿಂದ ಅಂದಾಜು ಸುಮಾರು 80 ಸಾವಿರ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ನಿಲ್ದಾಣ ಒಂದು ವರ್ಷಕ್ಕೆ ಮುರಿದು ಹೋಗಿರುವುದರಿಂದ ಆಟೋ...

ಐವರ್ನಾಡು : ನೇಸರ  ಸ್ವಸಹಾಯ ಸಂಘ ಉದ್ಘಾಟನೆ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಸುಳ್ಯ ತಾಲೂಕು ಬೆಳ್ಳಾರೆ ವಲಯದ 350 ನೇ ಸ್ವಸಹಾಯ ಸಂಘವನ್ನು ಐವರ್ನಾಡಿನಲ್ಲಿ ರಚನೆ ಮಾಡಲಾಯಿತು.  ನೂತನವಾಗಿ ರಚನೆಯಾದ ನೇಸರ  ಸ್ವಸಹಾಯ ಸಂಘವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ಚಂದ್ರಲಿಂಗಂ ಬೇಂಗಮಲೆ ಅವರು ಉದ್ಘಾಟಿಸಿದರು. ಯೋಜನಾಧಿಕಾರಿ ಅವರು ಸ್ವಸಹಾಯ ಸಂಘದ ನಿಯಮವಳಿಗಳ ಬಗ್ಗೆ ಸಂಕ್ಷಿಪ್ತ ವಾಗಿ ಮಾಹಿತಿ ನೀಡಿ ದಾಖಲಾತಿ...

ಡಿ.3 ಮತ್ತು 4ರಂದು ಮಂಗಳೂರಿನ ‘ಬಹುಸಂಸ್ಕೃತಿ ಉತ್ಸವ’ ಮುಂದೂಡಿಕೆ

ಸುವರ್ಣ ಕರ್ನಾಟಕ ಸಂಭ್ರಮದ ಭಾಗವಾಗಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿ, ಕರ್ನಾಟಕ ಅರೆ ಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ, ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಹಾಗೂ ಕರ್ನಾಟಕ ಯಕ್ಷಗಾನ ಅಕಾಡಮಿಗಳು ದಕ್ಷಿಣ ಕನ್ನಡ, ಉಡುಪಿ ಮತ್ತು ಕೊಡಗು ಜಿಲ್ಲಾಡಳಿತ ಹಾಗೂ ಮಂಗಳೂರು ಮಹಾನಗರ...

ಸು-ಯೋಗ ನಿಸರ್ಗ ಚಿತ್ರ ಕಲಾ ಶಿಬಿರ ಉದ್ಘಾಟನೆ

ಕನಕಮಜಲು: ಕನಕಮಜಲು ಯುವಕ‌ ಮಂಡಲ, ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು(ಕಾವಾ) ಮೈಸೂರು ಇದರ ಆಶ್ರಯದಲ್ಲಿ ಸು-ಯೋಗ 2024 ನಿಸರ್ಗ ಚಿತ್ರ ಕಲಾ ಶಿಬಿರ ಕನಕಮಜಲಿನ ಮೂರ್ಜೆ ಶ್ರೀ ಬಾಲ ನಿಲಯದಲ್ಲಿ ಆರಂಭಗೊಂಡಿತು. ಡಿ.2ರಿಂದ 8ರ ತನಕ ಚಿತ್ರ ಕಲಾ ಶಿಬಿರ ನಡೆಯಲಿದ್ದು 15ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಭಾಗವಹಿಸುತ್ತಿದ್ದಾರೆ‌. ಡಿ.2ರಂದು ನಡೆದ ಸಮಾರಂಭದಲ್ಲಿ ಚಿತ್ರ ಕಲಾವಿದರಾದ...

ಸೋನ ಅಡ್ಕಾರ್ ಗೆ ಚಿನ್ನದ ಪದಕ

ಮೈಸೂರಿನ ಜಗನ್ಮೋಹನ್ ಪ್ಯಾಲೇಸ್ ನಲ್ಲಿ ಡಿ.1 ರಂದು ನಡೆದ ನಡೆದ ಎ.ವಿ.ಎಸ್ ಕ್ರಿಯೇಷನ್ಸ್ ನ್ಯಾಚುರಲ್ ವ್ಯಾಲ್ಯೂಬಲ್ ಸಪೋರ್ಟ್ ಮೈಸೂರು ಇಲ್ಲಿ 9ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ರಾಜ್ಯಮಟ್ಟದ ಜೂನಿಯರ್ ವಿಭಾಗದ ಡಾನ್ಸ್ ಸ್ಪರ್ಧೆಯಲ್ಲಿ ಸೋನ ಅಡ್ಕಾರ್ ಚಾಂಪಿಯನ್ ಆಗಿ ಚಿನ್ನದ ಪದಕ ಪಡೆದಿರುತ್ತಾರೆ. ಈಕೆ ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್...

ಎಣ್ಮೂರು : ಎಸ್. ಜಿ.ಪ್ರಂಡ್ಸ್ ಕ್ಲಬ್ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ಬಾಲಕೃಷ್ಣ ರೈ – ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಗೌಡ ಪಟ್ಟೆ

ಎಣ್ಮೂರು ಎಸ್. ಜಿ.ಪ್ರಂಡ್ಸ್ ಕ್ಲಬ್ ಇದರ ನೂತನ ಸಮಿತಿ ಇತ್ತೀಚೆಗೆ ರಚನೆಗೊಂಡಿದೆ. ಗೌರವಾಧ್ಯಕ್ಷರಾಗಿ ಸುಜೀತ್ ರೈ ಪಟ್ಟೆ, ಅಧ್ಯಕ್ಷರಾಗಿ ಬಾಲಕೃಷ್ಣ ರೈ, ಉಪಾಧ್ಯಕ್ಷರಾಗಿ ಪ್ರಮೋದ್ ಕುಮಾರ್ ಕಲ್ಲೇರಿ, ಪ್ರಧಾನ ಕಾರ್ಯದರ್ಶಿಯಾಗಿ ಸಚಿನ್ ಗೌಡ ಪಟ್ಟೆ, ಕೋಶಾಧಿಕಾರಿಯಾಗಿ ಮುಸ್ತಫಾ ಕಜೆ, ಜೊತೆ ಕಾರ್ಯದರ್ಶಿಯಾಗಿ ಮಹಮ್ಮದ್ ಸೆಲಿತ್, ಜೊತೆ ಕೋಶಾಧಿಕಾರಿಯಾಗಿ ಚಿದಾನಂದ ಕಾಪಡ್ಕ ಆಯ್ಕೆಯಾದರು.

ವಿಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ

ರಾಜ್ಯ ಕರುನಾಡ ಹಣತೆ ಕವಿಬಳಗ ಮತ್ತು ಸಾಂಸ್ಕೃತಿಕ ಕಲಾ ತಂಡ (ರಿ) ಚಿತ್ರದುರ್ಗ ಕವಿನುಡಿ ಪ್ರೇರಣಾ ನುಡಿಗಳ ವೀಡಿಯೋ ವಾಚನ ಸ್ಪರ್ಧೆಯಲ್ಲಿ ಅಕ್ಷತಾ ನಾಗನಕಜೆ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.ವಿಜೇತರಿಗೆ ಡಿಸೆಂಬರ್ 9ಕ್ಕೆ ಚಿತ್ರದುರ್ಗದಲ್ಲಿ ನಡೆಯುವ ಜಾನಪದ ಸಾಹಿತ್ಯೋತ್ಸವ ಕಾರ್ಯಕ್ರಮದಲ್ಲಿ ಸನ್ಮಾನ ಹಾಗೂ ಪ್ರಶಸ್ತಿ ದೊರೆಯಲಿದೆ.ಹಾಗೂ "ಕರ್ನಾಟಕ ಅಚೀವರ್ಸ್ ಬುಕ್ ಆಪ್ ರೆಕಾರ್ಡ್” ಕವಿಗಳಿಂದ ಸ್ಥಳದಲ್ಲಿಯೇ  ದಾಖಲೆ...
Loading posts...

All posts loaded

No more posts

error: Content is protected !!