Ad Widget

ಶ್ರೀ ಶಾರದಾ ವಿದ್ಯಾಸಂಸ್ಥೆ ಸುಳ್ಯ ಇದರ ವಾರ್ಷಿಕೋತ್ಸವ , ಸನ್ಮಾನ

“ವಿದ್ಯಾರ್ಥಿಗಳು ತಮ್ಮ ಆಸಕ್ತಿಯ ಕ್ಷೇತ್ರದಲ್ಲೇ ನಿಷ್ಠೆಯಿಂದ ತೊಡಗಿಸಿಕೊಳ್ಳಿ. ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಿ ಬೆಳೆಯುತ್ತೀರಿ” ಎಂದು ಮಡಿಕೇರಿ ಆಕಾಶವಾಣಿ ಹಿರಿಯ ಉದ್ಘೋಷಕರಾದ ಸುಬ್ರಾಯ ಸಂಪಾಜೆ ಹೇಳಿದರು. ಡಿ.9ರಂದು ಸುಳ್ಯ ಶ್ರೀ ಶಾರದಾ ಪ್ರೌಢಶಾಲೆ ಹಾಗೂ ಶ್ರೀ ಶಾರದಾ ಪದವಿ ಪೂರ್ವ ಕಾಲೇಜಿನ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿದ ಅವರು ಮುಖ್ಯ ಭಾಷಣಗೈದರು. “ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಕರು, ಮನೆಯಲ್ಲಿ ಪೋಷಕರು...

ಸುಳ್ಯದ ರಿಕ್ಷಾ ಚಾಲಕ ನೇಣು ಬಿಗಿದು ಆತ್ಮಹತ್ಯೆ

ಸುಳ್ಯ ಜೂನಿಯ‌ರ್ ಕಾಲೇಜು ರಸ್ತೆಯ ರಿಕ್ಷಾ ಪಾರ್ಕಿಂಗ್ ನ ರಿಕ್ಷಾ ಚಾಲಕ, ತೊಡಿಕಾನ ನಿವಾಸಿ ಅಡ್ಯಡ್ಕ ಕೋಣಗುಂಡಿ ದಿ.ಹೊನ್ನಪ್ಪ ಗೌಡರ ಪುತ್ರ ಜಗನ್ನಾಥ (50) ಎಂಬವರು ಸುಳ್ಯದ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅವರು ರಿಕ್ಷಾ ಪಾರ್ಕಿಂಗ್ ಗೆ ಬಂದಿರಲಿಲ್ಲ. ಮಧ್ಯಾಹ್ನ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿದುಬಂದಿದ್ದು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಈ...
Ad Widget

ಜಾಲ್ಸೂರು: ಮಾವಿನಕಟ್ಟೆ -ಅಡ್ಕಾರು ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಸಂಪರ್ಕ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯ ಗುದ್ದಲಿಪೂಜೆ

ಜಾಲ್ಸೂರು ಗ್ರಾಮದ ಅಡ್ಕಾರು ಮಾವಿನಕಟ್ಟೆಯಿಂದ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಿ.9ರಂದು ಬೆಳಿಗ್ಗೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಗುದ್ದಲಿಪೂಜೆ ನೆರವೇರಿಸಿದರು. ಶಾಸಕರ ಅನುದಾನ ರೂ. ಹತ್ತು ಲಕ್ಷದಲ್ಲಿ ನಿರ್ಮಾಣಗೊಳ್ಳಲಿರುವ ಈ ರಸ್ತೆ ಮಾವಿನಕಟ್ಟೆಯಿಂದ ಅಡ್ಕಾರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಸಂಪರ್ಕ ಕಲ್ಪಿಸುತ್ತದೆ. ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ...

ಬೆಳ್ಳಾರೆ – ದರ್ಖಾಸ್ತು ರಸ್ತೆ – ಅಗಲೀಕರಣ ಮತ್ತು ಡಾಮರೀಕರಣಕ್ಕೆ ಗುದ್ದಲಿ ಪೂಜೆ

ಬೆಳ್ಳಾರೆ – ದರ್ಖಾಸ್ತು ರಸ್ತೆ ಅಗಲೀಕರಣ ಮತ್ತು ಡಾಮರೀಕರಣಕ್ಕೆ ಗುದ್ದಲಿ ಪೂಜೆಯು ಡಿ.09 ರಂದು ಬೆಳ್ಳಾರೆಯಲ್ಲಿ ನಡೆಯಿತು. ಶಾಸಕಿ ಭಾಗೀರಥಿ ಮುರುಳ್ಯರವರು ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ ಆದಷ್ಟು ಬೇಗ ರಸ್ತೆ ಕಾಮಗಾರಿ ಮುಗಿಯುವಂತೆ ಮತ್ತು ರಸ್ತೆ ಬದಿಯ ಮನೆಯವರು ರಸ್ತೆ ಅಗಲೀಕರಣ ಸಂದರ್ಭದಲ್ಲಿ ಸಹಕಾರ ನೀಡಬೇಕು ಎಂದು ಹೇಳಿದರು. ಬೆಂಗಳೂರು ರಾಜ್ಯ ಹೆದ್ದಾರಿ ಅಭಿವೃದ್ಧಿ...

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ವಾರ್ಷಿಕ ಕ್ರೀಡಾಕೂಟ – ಅಖಾಡ 2024

ಕೆವಿಜಿ ಆಯುರ್ವೇದ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆ ಸುಳ್ಯ ಇಲ್ಲಿ ವಾರ್ಷಿಕ ಕ್ರೀಡಾಕೂಟ 'ಅಖಾಡ -2024' ದಿನಾಂಕ 6.12.2024 ರಿಂದ 10.12.2024 ರ ವರೆಗೆ ನಡೆಯಲ್ಲಿದ್ದು, ಕ್ರೀಡಾಕೂಟದ ಉದ್ಘಾಟನೆಯನ್ನು ದಿನಾಂಕ 09.12.2014ರಂದು ಅಕಾಡಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ.) ಸುಳ್ಯ ಇದರ ಅಧ್ಯಕ್ಷರಾದ ಡಾ. ಕೆ. ವಿ. ಚಿದಾನಂದ ಇವರು ಕ್ರೀಡಾಜ್ಯೋತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿ,...

ಕುಮಾರಧಾರದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವರ ಅವಭೃತೋತ್ಸವ

ಸುಬ್ರಹ್ಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ಅಂಗವಾಗಿ ಮಾರ್ಗಶಿರ ಶುದ್ಧ ಸಪ್ತಮಿಯ ದಿನವಾದ ಆದಿತ್ಯವಾರದಂದು ಬೆಳಿಗ್ಗೆ ಪುಣ್ಯ ನದಿ ಕುಮಾರಧಾರದಲ್ಲಿ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರ ನೌಕಾವಿಹಾರ ಮತ್ತು ಅವಭೃತೋತ್ಸವ ನಡೆಯಿತು. ಶ್ರೀ ದೇವಳದ ಪ್ರಧಾನ ಅರ್ಚಕರಾದ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯರು ಅವಭೃತೋತ್ಸವದ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿದರು. ಸಹಸ್ರಾರು ಭಕ್ತಾದಿಗಳು...

ಕುಕ್ಕೆ : ಷಷ್ಠಿ ಮಹೋತ್ಸವದ ಸೇವಾ ಕಾರ್ಯದಲ್ಲಿ ಬಾಳುಗೋಡಿನ ವಿಶ್ವ ಯುವಕ ಮಂಡಲ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನ.27 ರಿಂದ ಚಂಪಾಷಷ್ಠಿ ಮಹೋತ್ಸವವು ನಡೆಯುತ್ತಿದ್ದು, ಈ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಹಲವಾರು ಸಂಘಸಂಸ್ಥೆಗಳು ಸೇರಿದಂತೆ ಸಾರ್ವಜನಿಕರು ವಿವಿಧ ರೀತಿಯ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದು, ಡಿ.07 ರಂದು ಬಾಳುಗೋಡಿನ ವಿಶ್ವ ಯುವಕ ಮಂಡಲದ ಸುಮಾರು 53 ಸದಸ್ಯರು ಶ್ರೀ ದೇವರ ಅನ್ನ ಪ್ರಸಾದ ವಿತರಣೆಯ...

ಪೆರುಮಾಳ್ ಲಕ್ಷ್ಮಣ ಐವರ್ನಾಡು ರಚನೆಯ ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆ ಧ್ವನಿ ಸುರುಳಿ ಬಿಡುಗಡೆ

ಅಡ್ಪಂಗಾಯದ ಮಂದಿರದಲ್ಲಿ  ಅಯ್ಯಪ್ಪ ಸ್ವಾಮಿಯ ಭಕ್ತಿ ಗೀತೆ ಬಿಡುಗಡೆ ಇಂದು ನಡೆಯಿತು. ಹಿರಿಯ ಗುರುಸ್ವಾಮಿಗಳಾದ ಶಿವಪ್ರಕಾಶ್ ಗುರುಸ್ವಾಮಿ ಅಡ್ಪಂಗಾಯ ಇವರು ಅಯ್ಯಪ್ಪ ಸ್ವಾಮಿಯ ಭಕ್ತಿಗೀತೆ ಬಿಡುಗಡೆಗೊಳಿಸಿದರು.ಪೆರುಮಾಳ್ ಲಕ್ಷ್ಮಣ ಇವರು ಸಾಹಿತ್ಯ ಬರೆದು ಬಾಲಚಂದ್ರ ಬಿ ಕಾಸರಗೋಡು ಹಾಗೂ ಪುಷ್ಪಾವತಿ ಡಿ ಇವರು ಹಾಡಿದನೀನು ಹರಸದೆ ನನಗೆ ಬಾಳು ಎಲ್ಲಿದೆ ಹಾಗೂ ಸ್ವಾಮಿಯ ನೋಡಲು ಚಂದ ಎಂಬ...

ಅರಂತೋಡು : ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ರಚನೆ – ಅಧ್ಯಕ್ಷ ರಾಗಿ ಪ್ರದೀಪ್ ಕೆ., ಕಾರ್ಯದರ್ಶಿಯಾಗಿ ಚೇತನ್ ಅರಂತೋಡು, ಕೋಶಾಧಿಕಾರಿಯಾಗಿ ಅಭಿಷೇಕ್ ಕುಲ್ಚಾರು

ಶ್ರೀ ತಂಬುರಾಟಿ ಭಗವತಿ ಪ್ರಾದೇಶಿಕ ಸಮಿತಿ ಅರಂತೋಡು ಇದರ ವಾರ್ಷಿಕ ಮಹಾಸಭೆ ಮತ್ತು ನೂತನ ಸಮಿತಿ ರಚನೆಯು ದಿನಾಂಕ 08 ರಂದು ಸಮಿತಿಯ ಅಧ್ಯಕ್ಷ ರಾದ ಶ್ರೀಜಿತ್ ಅರಂತೋಡು ರವರ ಅಧ್ಯಕ್ಷತೆ ಯಲ್ಲಿ ರಬ್ಬರ್ ಉತ್ಪಾದಕರ ಸಂಘ ದ ಸಭಾಭವನ ಅರಂತೋಡಿನಲ್ಲಿ ನಡೆಯಿತು ಹಿರಿಯ ರಾದ ಜನಾರ್ಧನ. ಎ. ಎಂ, ಗೋವಿಂದ ಎ. ಕೆ ಮತ್ತು...

ಗೂನಡ್ಕ : ಬೈಕ್ ಸ್ಕಿಡ್ – ಸವಾರನಿಗೆ ಗಾಯ

ಗೂನಡ್ಕ : ಬೈಕ್ ಸ್ಕಿಡ್ ಆಗಿ ಸವಾರನೋರ್ವ ಗಾಯಗೊಂಡ  ಘಟನೆ ಇದೀಗ ಗೂನಡ್ಕದಲ್ಲಿ ಸಂಭವಿಸಿದೆ. ಗೂನಡ್ಕ ಶಾಲೆಯ ಎದುರುಗಡೆ ಬೈಕ್ ಸ್ಕಿಡ್ ಆಗಿ ಬಿದ್ದು ಸವಾರ ಗಾಯಗೊಂಡಿದ್ದು, ಆತನನ್ನು ಸುಳ್ಯ ಸರಕಾರಿ ಆಸ್ಪತ್ರೆಗೆ ಕರೆತರಲಾಗಿದ್ದು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ ಎನ್ನಲಾಗಿದೆ.
Loading posts...

All posts loaded

No more posts

error: Content is protected !!