Ad Widget

ಸಂಪಾಜೆ: ದಲಿತ ಸಂಘರ್ಷ ಸಮಿತಿ ವತಿಯಿಂದ ಅನಿರ್ದಿಷ್ಟಾವಧಿ ಪ್ರತಿಭಟನೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ) ಕೊಡಗು ಜಿಲ್ಲಾ ಘಟಕ, ಮಡಿಕೇರಿ ತಾಲೂಕು ಘಟಕ, ಸಂಪಾಜೆ ಹೋಬಳಿ ಘಟಕಗಳ ಸಂಯುಕ್ತಾಶ್ರಯದಲ್ಲಿ ದಿನಾಂಕ 30/12/2024 ರಂದು ಪೂ.10.30ಕ್ಕೆ ಸಂಪಾಜೆ ನಾಡಕಚೇರಿ ಮುಂದೆ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಯಲಿದೆ. ಹಲವು ವರ್ಷಗಳಿಂದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನಕ್ಕೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಕಂದಾಯ ಇಲಾಖೆ ಇದುವರೆಗೂ ಸೂಕ್ತ ಜಾಗ ನೀಡದೆ ವಂಚಿಸುತ್ತಿತ್ತು....

ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ವಿಜೇತ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದ್ರಾಜೆ ಅವರಿಗೆ ಸನ್ಮಾನ

ಮಂಗಳೂರು: ನವದೆಹಲಿಯ ಪಬ್ಲಿಕ್ ರಿಲೇಶನ್ ಕೌನ್ಸಿಲ್ ಆಫ್ ಇಂಡಿಯಾ ವತಿಯಿಂದ ನೀಡಲಾಗುವ ಚಾಣಕ್ಯ ರಾಷ್ಟ್ರೀಯ ಪ್ರಶಸ್ತಿ ಪಡೆದ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದ್ರಾಜೆ ಅವರಿಗೆ ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಹಿರಿಯ ಪತ್ರಕರ್ತರಾದ ಗಂಗಾಧರ ಮಟ್ಟಿ, ಕೃಷ್ಣ ಬೆಟ್ಟ, ದುರ್ಗಾಕುಮಾರ್ ನಾಯರ್‌ಕೆರೆ...
Ad Widget

ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯಲ್ಲಿ ಸುಳ್ಯದ ಐ ಆರ್ ಸಿ ಎಂ ಡಿ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಮಿಥಾಲಿ ಯು.ಎಲ್. ಗೆ ಪ್ರಶಸ್ತಿ

ಬೆಂಗಳೂರಿನ ಟಿ.ಆರ್.ಎಸ್ ಶಿಕ್ಷಣ ಸಂಸ್ಥೆ ಮತ್ತು ಪುತ್ತೂರಿನ ಐ ಆರ್ ಸಿ ಎಮ್ ಡಿ ಶಿಕ್ಷಣ ಸಂಸ್ಥೆ ಜಂಟಿಯಾಗಿ ಕರ್ನಾಟಕ ರಾಜ್ಯಮಟ್ಟದ ಅಬಾಕಸ್ ಸ್ಪರ್ಧೆಯನ್ನು ಡಿಸೆಂಬರ್ 8 2024 ರಂದು ಪುತ್ತೂರಿನಲ್ಲಿ ನಡೆಸಲಾಯಿತು. ಈ ಸ್ಪರ್ಧೆಯಲ್ಲಿ 250 ಕ್ಕೂ ಮಿಕ್ಕಿ ಪ್ರತಿಭಾವಂತ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಅಬಾಕಸ್  ಸ್ಪರ್ಧೆಯಲ್ಲಿ ಭಾಗವಹಿಸುವವರ ವೇಗ ನಿಖರತೆ ಮತ್ತು ಮಾನಸಿಕ ಚುರುಕುತನವನ್ನು...

ಡಿ .29 ರಂದು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ

ಸುಬ್ರಹ್ಮಣ್ಯ : ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ತುಮಕೂರು ಹಾಗೂ ನೇತ್ರಾವತಿ ವಲಯ ಮಂಗಳೂರು ವತಿಯಿಂದ ಡಿಸೆಂಬರ್ 29ರಂದು ಕುಕ್ಕೆ ಶ್ರೀ ಸುಬ್ರಹ್ಮಣ್ಯ ಕ್ಷೇತ್ರದ ರಥ ಬೀದಿಯಲ್ಲಿ ರಾಜ್ಯಮಟ್ಟದ ಸಾಮೂಹಿಕ ಯೋಗ ಷಣ್ಮುಖ ನಮಸ್ಕಾರ ನಡೆಯಲಿರುವುದು. ಈ ಯೋಗ ಶಿಬಿರದಲ್ಲಿ ರಾಜ್ಯಾದ್ಯಂತ ಸುಮಾರು 3000 ಯೋಗಾಸಕ್ತರು ಭಾಗವಹಿಸಲಿರುವರೆಂದು ಸಂಘಟಕರು ತಿಳಿಸಿರುತ್ತಾರೆ.

ಬಿಳಿನೆಲೆ ಕೈಕಂಬ ಶಾಲಾ ಮಕ್ಕಳಿಗೆ ಅನುಭವ ಮಂಟಪದ ಪಾಠ ಮಾಡಿದ ಸಿ.ಎಂ

ಸುಬ್ರಹ್ಮಣ್ಯ, ಡಿ.16: ಶಾಲಾ ಪ್ರವಾಸದ ಅಂಗವಾಗಿ ಬೆಳಗಾವಿ ಸುವರ್ಣಸೌಧಕ್ಕೆ ಭೇಟಿ ನೀಡಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಬಿಳಿನೆಲೆ ಕೈಕಂಬ ಸರಕಾರಿ ಪ್ರಾಥಮಿಕ ಶಾಲೆಯ ಸಹಿತ ಇತರೆ ವಿದ್ಯಾರ್ಥಿಗಳಿಗೆ ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಭವ ಮಂಟಪದ ಬಗ್ಗೆ ಪಾಠ ಮಾಡಿದರು.ಬಿಳಿನೆಲೆ ಕೈಕಂಬ ಶಾಲೆಯಿಂದ ಶಾಲೆಯ ಸುಮಾರು 33 ಮಕ್ಕಳು ಶಾಲಾ...

ಅರಂತೋಡು : ಮುರಿದು ಬೀಳುವ ಸ್ಥಿತಿಯಲ್ಲಿ ಗ್ರಾಮ ಆಡಳಿತಾಧಿಕಾರಿಗಳ ಕಛೇರಿ

ಅರಂತೋಡು ಗ್ರಾಮ ಆಡಳಿತಾಧಿಕಾರಿಗಳ ಕಛೇರಿ ಮುರಿದು ಬೀಳುವ ಹಂತಕ್ಕೆ ತಲುಪಿದೆ. ಕಟ್ಟಡ ಸಂಪೂರ್ಣ ಶಿಥಿಲಗೊಂಡಿದ್ದು, ಸಾರ್ವಜನಿಕರು ಹಾಗೂ ಸಿಬ್ಬಂದಿಗಳ ಮೇಲೆ ಮುರಿದು ಬೀಳುವ ಮುನ್ನ ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತು ಈ ಬಗ್ಗೆ ಗಮನ ಹರಿಸುವಂತೆ ಜನತೆ ಒತ್ತಾಯಿಸಿದ್ದಾರೆ.

ಜಾನುವಾರು ಗಣತಿ ಹಿನ್ನಲೆ : ಪಶು ಸಂಗೋಪನೆ ಇಲಾಖೆ ಸೇವೆಯಲ್ಲಿ ವ್ಯತ್ಯಯ : ಸಾರ್ವಜನಿಕರು ಸಹಕರಿಸಲು ಪಶು ವೈದ್ಯಾಧಿಕಾರಿ ಮನವಿ

ತಾಲೂಕಿನಲ್ಲಿ ಫೆಬ್ರವರಿ 2025ರ ಅಂತ್ಯದವರೆಗೆ ರಾಷ್ಟ್ರೀಯ ಕಾರ್ಯಕ್ರಮವಾದ ಜಾನುವಾರು ಗಣತಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಶು ಆಸ್ಪತ್ರೆಯ ಸುಳ್ಯ ದಲ್ಲಿ ನಾಯಿ, ಬೆಕ್ಕು ಮತ್ತು ಮುದ್ದು ಪ್ರಾಣಿಗಳ ಚಿಕಿತ್ಸಾ ಸೇವೆಯನ್ನು ಬೆಳಗ್ಗೆ 9 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಒದಗಿಸಲಾಗುವುದು. ಮಧ್ಯಾಹ್ನದ ನಂತರ ತಾಲೂಕಿನ ಎಲ್ಲಾ ಸಿಬ್ಬಂದಿಗಳು ಜಾನುವಾರು ಗಣತಿ ಕಾರ್ಯಕ್ರಮ ದಲ್ಲಿ ಕ್ಷೇತ್ರ ಭೇಟಿ...

ಸೌಜನ್ಯ ನ್ಯಾಯಪರ ಹೋರಾಟಕ್ಕೆ ಒಂದು ವರ್ಷ ತುಂಬಿದ ಹಿನ್ನಲೆ, ಗುತ್ತಿಗಾರಿನಲ್ಲಿ ಹೋರಾಟಗಾರರಿಂದ ಸೌಜನ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮೂಲಕ ನ್ಯಾಯಕ್ಕಾಗಿ ಪ್ರಾರ್ಥನೆ…

ಒಂದು ವರ್ಷದ ಹಿಂದೆ ಅಂದರೆ ದಿ.16/12/2023ರ ಇದೇ ದಿನದಂದು ಗುತ್ತಿಗಾರಿನಲ್ಲಿ ಕು.ಸೌಜನ್ಯ ನ್ಯಾಯಪರ ಹೋರಾಟ ನಡೆದು ನ್ಯಾಯಕ್ಕಾಗಿ ಆಗ್ರಹಿಸಲಾಗಿತ್ತು. ಇಂದಿಗೆ ಒಂದು ವರ್ಷ ತುಂಬಿದ ಹಿನ್ನಲೆಯಲ್ಲಿ ಸೌಜನ್ಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸುವುದರ ಮೂಲಕ ಸೌಜನ್ಯ ನ್ಯಾಯಕ್ಕಾಗಿ ಪ್ರಾರ್ಥಿಸಲಾಯಿತು. ಕು.ಸೌಜನ್ಯ ನ್ಯಾಯ ಪರ ಹೋರಾಟ ಸಮಿತಿ ಗುತ್ತಿಗಾರು ಇದರ ಎಲ್ಲಾ ಪದಾಧಿಕಾರಿಗಳು , ವಾಹನಗಳ ಚಾಲಕ-ಮಾಲಕರು ಭಾಗವಹಿಸಿದರು....

ದೇವಚಳ್ಳ :- ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಸರಕಾರಿ ಶಾಲೆಗಳಿಗೆ ಬೆಂಚು ಡೆಸ್ಕ್ ಗಳ ವಿತರಣಾ ಕಾರ್ಯಕ್ರಮ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ವತಿಯಿಂದ ದೇವಚಳ್ಳ ಗ್ರಾಮದ ಎಲಿಮಲೆಯ ಸರಕಾರಿ ಪ್ರೌಢ ಶಾಲೆಗೆ, ದೇವಚಳ್ಳ ದ. ಕ. ಜಿ. ಪ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಗುತ್ತಿಗಾರು ಗ್ರಾಮದ ವಳಲಂಬೆಯ ದ. ಕ. ಜಿ. ಪ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ, ಗುತ್ತಿಗಾರು ಗ್ರಾಮದ ಪಿ. ಎಂ....

ಕಲ್ಮಕಾರು : ಆನೆ ದಾಳಿ – ಅಯ್ಯಪ್ಪ ವೃತಧಾರಿ ಗಂಭೀರ ಗಾಯ

https://youtu.be/UYtw3YlNooQ?si=tT4DW13rOx-pUCr2 ಕಲ್ಮಕಾರು ಗ್ರಾಮದಲ್ಲಿ ಕಾಡಾನೆ ದಾಳಿಗೆ ಅಯ್ಯಪ್ಪ ವೃತಧಾರಿ‌ ಗಂಭೀರವಾಗಿ ಗಾಯಗೊಂಡ‌ ಘಟನೆ ಡಿ. 17ರ ಮುಂಜಾನೆ ನಡೆದಿದೆ. ಗಾಯಗೊಂಡ ವ್ಯಕ್ತಿಯನ್ನು ಕಲ್ಮಕಾರು ಗ್ರಾಮದ ಚರಿತ್ ಎಂದು ಗುರುತಿಸಲಾಗಿದ್ದು, ಇಂದು ಮುಂಜಾನೆ ಹೊಳೆಯಲ್ಲಿ ಬಟ್ಟೆ ತೊಳೆಯುತ್ತಿದ್ದಾಗ ಆನೆ ದಾಳಿ ನಡೆದಿರುವುದಾಗಿ ತಿಳಿದುಬಂದಿದೆ. ಅಯ್ಯಪ್ಪ ವೃತಧಾರಿ ಚರಿತ್ ಗೆ ಗಂಭೀರ ಗಾಯಗಳಾಗಿದ್ದು, ಸುಳ್ಯದ ಆಸ್ಪತ್ರೆಗೆ ದಾಖಲಾಗಿ, ಬಳಿಕ...
Loading posts...

All posts loaded

No more posts

error: Content is protected !!