Ad Widget

ಸುಳ್ಯ ಕುಡಿಯುವ ನೀರಿನ ಯೋಜನೆ ಪೈಪ್ ಲೈನ್ ಕಾಮಗಾರಿಯ ಧೂಳಿನಿಂದ ಅಡಕತ್ತಿರಿಗೆ ಸಿಲುಕಿದ ನ.ಪಂ , ಧೂಳುಮಯವಾದ ರಥಬೀದಿ ವ್ಯಾಪಾರಸ್ಥರಿಂದ ರಸ್ತೆ ತಡೆಗೆ ಚಿಂತನೆ ?

ಸುಳ್ಯ : ಸುಳ್ಯ ನಗರದ ಕುಡಿಯುವ ನೀರಿನ ಪೈಪು ಲೈನ್ ಕಾಮಗಾರಿ ನಡೆಯುತ್ತಿದ್ದು ನಿತ್ಯವು ಧೂಳುಮಯವಾದ ರಸ್ತೆಯ ಕುರಿತು ದೂರು ಅರ್ಜಿಗಳು ಬರುತ್ತಿದ್ದರು ನಗರ ಪಂಚಾಯತ್ ಮಾತ್ರ ಮೂಕ ಪ್ರೇಕ್ಷಕನಾಗಿ ನಿಲ್ಲುವಂತೆ ಮಾಡಿದ್ದು ಇದರ ವಿರುದ್ದ ಇದೀಗ ಈ ರಸ್ತೆಯಲ್ಲಿನ ಅಂಗಡಿ ಮುಂಗಟ್ಟಿನ ವರ್ತಕರು ರಸ್ತೆ ತಡೆ ನಡೆಸುವ ಚಿಂತನೆ ನಡೆಸಿರುವುದು ಉನ್ನತ ಮೂಲಗಳಿಂದ ತಿಳಿದುಬಂದಿದೆ....

ಸೂರಿಕುಮೇರಿನಲ್ಲಿ ಬೈಕ್‌ ಮತ್ತು ಟೆಂಪೊ ನಡುವೆ ಅಪಘಾತ ಹಿಂದು ಪರ ಸಂಘಟನೆಯ ಕಾರ್ಯಕರ್ತ ಮೃತ್ಯು

ಅಮರಮುನ್ನೂರು ಗ್ರಾಮದ ಮರ್ಗಿಲಡ್ಕ ನಿವಾಸಿ ಪುನೀತ್( 30) ರವರು ಸೂರಿಕುಮೇರು ಎಂಬಲ್ಲಿ ನಿನ್ನೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟಿರುತ್ತಾರೆ. ಮಂಗಳೂರಿನಲ್ಲಿ ಕೋಸ್ಟಲ್ ಕೋಳಿ ಫಾರ್ಮ್ ನಲ್ಲಿ ಚಾಲಕರಾಗಿದ್ದ ಅವರು ಕೆಲಸ ಮುಗಿಸಿ ಮನೆಗೆ ಹಿಂತಿರುಗುವ ವೇಳೆಯಲ್ಲಿ ಸೂರಿಕುಮೇರು ರಾಜ್ಯ ಹೆದ್ದಾರಿಯಲ್ಲಿ ಟೆಂಪೊ ಮತ್ತು ಬೈಕ್‌ ನಡುವೆ ಸಂಭವಿಸಿದ ಅಪಘಾತದಲ್ಲಿ ಮೃತ ಪಟ್ಟಿರುವುದಾಗಿ ತಿಳಿದು ಬಂದಿದೆ....
Ad Widget

ಕಲ್ಲುಗುಂಡಿ : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ, ಕಾರು ಜಖಂ

ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಪಲ್ಟಿಯಾದ ಘಟನೆ ಕಲ್ಲುಗುಂಡಿಯ ಮೇಲಿನ ಪೇಟೆಯಲ್ಲಿ ಡಿ 19 ರಂದು ನಡೆದಿದೆ. ಸುಳ್ಯದಿಂದ ಮಡಿಕೇರಿ ಕಡೆ ಹೋಗುತ್ತಿದ್ದ KA -6 d 9844 ಟ್ಯಾಕ್ಸಿ ಕಾರು ಚಾಲಕನ ನಿಯಂತ್ರಣ ತಪ್ಪಿ ಕಲ್ಲುಗುಂಡಿಯ ಮೇಲಿನ ಪೇಟೆಯ ಎಣ್ಣೆ ಮಿಲ್ಲಿನ ಸಮೀಪದ ಮರಕ್ಕೆ ಗುದ್ದಿದೆ.ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಾರಿನ...

ಅರಂತೋಡು : ಅಟೋ ರಿಕ್ಷಾ ಪಲ್ಟಿ – ಪ್ರಯಾಣಿಕರಿಗೆ ಗಾಯ

ಅರಂತೋಡಿನ‌ ಅಡಿಮಾರಡ್ಕ ಎಂಬಲ್ಲಿ ಅಟೋ ರಿಕ್ಷಾ ಪಲ್ಟಿಯಾದ ಘಟನೆ ಇಂದು ಸಂಜೆ ನಡೆದಿದೆ. ರಿಕ್ಷಾ ಚಾಲಕ ವಿಶ್ವನಾಥ ಗೌಡ ಉಕ್ರಾಜೆ ( ಕರ್ಕುಂಜ) ಅಪಾಯದಿಂದ ಪಾರಾಗಿದ್ದಾರೆ.‌ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ತೆರಳಿದ್ದಾರೆ ಎಂದು ತಿಳಿದುಬಂದಿದೆ.

ಕಾರ್ಮಿಕ ಮುಖಂಡ ಕೆ.ಪಿ. ಜಾನಿಯವರಿಗೆ ಪತ್ನಿ ವಿಯೋಗ

ಕಾರ್ಮಿಕ ಮುಖಂಡ ಕೆ. ಪಿ. ಜಾನಿ ಅವರ ಪತ್ನಿ ಶ್ರೀಮತಿ ಸಿನಿ ಜಾನ್ ರವರು ಮಂಗಳೂರಿನ ಆಸ್ಪತ್ರೆಯಲ್ಲಿ ಇಂದು ನಿಧನರಾದರು. ಅವರಿಗೆ 40 ವರ್ಷ ವಯಸ್ಸಾಗಿತ್ತು. ಮೃತರು ಇಬ್ಬರು ಪುತ್ರಿಯರು, ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಆರಿಕೋಡಿ ಚಾಮುಂಡೇಶ್ವರಿ ಧರ್ಮದರ್ಶಿಗೆ ನೂತನ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದ ಅಕ್ಷಯ್ ಕೆ. ಸಿ

ಆರಿಕೋಡಿ ಚಾಮುಂಡೇಶ್ವರಿ ಧರ್ಮದರ್ಶಿಗೂ ನೂತನ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ, ಭಕ್ತಿಯಿಂದ ಆಮಂತ್ರಣವಿತ್ತು ಆಶೀರ್ವಾದ ಬೇಡಿದ ಎಒಎಲ್ಇ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿಯವರು ಆಶೀರ್ವಾದ ಪಡೆದರು. ಸುಳ್ಯ ತಾಲೂಕಿನ ಇತಿಹಾಸ ಪ್ರಸಿದ್ಧ ಭಕ್ತಿ ಕೇಂದ್ರವಾಗಿರುವ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಡಾ. ಕೆ.ವಿ ಚಿದಾನಂದ ಮತ್ತು ಮನೆಯವರು ನೂತನ ಬ್ರಹ್ಮರಥ ಮತ್ತು ಪಲ್ಲಕ್ಕಿಯನ್ನು ಸಮರ್ಪಿಸಲಿದ್ದಾರೆ. ಡಿ.25ರಂದು ಸುಳ್ಯದಲ್ಲಿ...

ಸುಳ್ಯ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟ

ಸುಳ್ಯ ಸೈಂಟ್ ಜೋಸೆಫ್ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ವಾರ್ಷಿಕ ಕ್ರೀಡಾಕೂಟವು ಡಿ. 17 ರಂದು ನಡೆಯಿತು. ಉದ್ಘಾಟನಾ ಸಮಾರಂಭದ ಸಭಾಧ್ಯಕ್ಷತೆ ಹಾಗೂ ಶಾಲಾ ಧ್ವಜಾರೋಹಣವನ್ನು ಸಂಸ್ಥೆಯ ಸಂಚಾಲಕರಾದ ರೆ. ಫಾ. ವಿಕ್ಟರ್ ಡಿ'ಸೋಜ ನೆರವೇರಿಸಿ ಕ್ರೀಡಾಕೂಟಕ್ಕೆ ಶುಭ ಹಾರೈಸಿದರು. ಕ್ರೀಡಾಕೂಟದ ಉದ್ಘಾಟನೆಯನ್ನು ಬಿ.ಕೆ ಮಾಧವ,ಕಬಡ್ಡಿ ಹಾಗೂ ಖೋ ಖೋ ಎನ್. ಐ. ಎಸ್ ತರಬೇತಿದಾರರು, ಕ್ರೀಡಾ...

31-12-2024 ರಂದು ಮುಕ್ತಾಯಗೊಳ್ಳುವ ಆಯುಧ ಪರವಾನಿಗೆದಾರರು 2024 ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸಲು ಸೂಚನೆ

ಆಯುಧ ಪರವಾನಿಗೆ ನವೀಕರಣ ದಿನಾಂಕ 31-12-2024 ರಂದು ಮುಕ್ತಾಯಗೊಳ್ಳುವ ಪರವಾನಿಗೆದಾರರು 2024 ಡಿಸೆಂಬರ್ 31 ರೊಳಗಾಗಿ ಅರ್ಜಿ ಸಲ್ಲಿಸುವಂತೆ ತಾಲೂಕು ದಂಢನಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸುಳ್ಯ ತಾಲೂಕು ವ್ಯಾಪ್ತಿಯಲ್ಲಿ ಆಯುಧ ಪರವಾನಿಗೆಯನ್ನು ಹೊಂದಿರುವ ಪರವಾನಿಗೆದಾರರು ದಿನಾಂಕ : 31.12.2024 ರಂದು ನವೀಕರಣ ಮುಕ್ತಾಯಗೊಳ್ಳುವವರು ದಿನಾಂಕ : 31-12-2024 ರ ಒಳಗಾಗಿ ಅರ್ಜಿಯನ್ನು ಸಲ್ಲಿಸಬೇಕಾಗಿದ್ದು, ದಿನಾಂಕ :...

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ- ಮಾಹಿತಿ ಕಾರ್ಯಕ್ರಮ

ಜಾಲ್ಸೂರು ಪಯಸ್ವಿನಿ ಪ್ರೌಢಶಾಲೆಯಲ್ಲಿ ಸುಳ್ಯ ಪೋಲಿಸ್ ಠಾಣಾ ವತಿಯಿಂದ ಅಪರಾಧ ತಡೆ ಮಾಸಾಚರಣೆ ಪ್ರಯುಕ್ತ ಸೈಬರ್ ಕ್ರೈಂ ಜಾಗೃತಿ ಮತ್ತು ವಾಹನ ಚಾಲನೆ ಕುರಿತು ಜಾಗೃತಿ ಕಾರ್ಯಕ್ರಮ ಬುಧವಾರ ನಡೆಯಿತು. ಸೈಬರ್ ಕ್ರೈ೦ ಜಾಗೃತಿ ಕುರಿತು ಎ.ಎಸ್ ಐಉದಯಕುಮಾರ್ ಮಾಹಿತಿ ನೀಡಿದರು. ವಾಹನ ಚಾಲನೆ ಜಾಗೃತಿ ಕುರಿತು ಎ.ಎಸ್.ಐ ಸುರೇಶ್ ಮಾಹಿತಿ ನೀಡಿದರು.ವೇದಿಕೆಯಲ್ಲಿ ಶಿಕ್ಷಕ ಶಿವಪ್ರಕಾಶ...

ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಗೆ ಶ್ರೀಚೆನ್ನಕೇಶವ ದೇವಸ್ಥಾನದ ನೂತನ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದ ಪಡೆದುಕೊಂಡ ಕುರುಂಜಿ ಕುಟುಂಬ

ಸುಳ್ಯ: ಡಾ. ಕೆ.ವಿ ಚಿದಾನಂದ ಮತ್ತು ಮನೆಯವರಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆಗೆ ಶ್ರೀಚೆನ್ನಕೇಶವ ದೇವಸ್ಥಾನದ ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮದ ಆಹ್ವಾನ, ಆಮಂತ್ರಣ ಪತ್ರಿಕೆ ನೀಡಿ ಆಶೀರ್ವಾದವನ್ನು ಕುರುಂಜಿ ಕುಟುಂಬವು ಪಡೆದುಕೊಂಡರು . ಸುಳ್ಯದ ಇತಿಹಾಸ ಪ್ರಸಿದ್ಧ ದೇವಸ್ಥಾನವಾಗಿರುವ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ (ರಿ) ಸುಳ್ಯ ಇದರ...
Loading posts...

All posts loaded

No more posts

error: Content is protected !!