ಸುಳ್ಯ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದೆ. ಅಧ್ಯಕ್ಷತೆ,ಉಪಾಧ್ಯಕ್ಷತೆ, ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎ.ಟಿ. ಕುಸುಮಾಧರ, ಉಪಾಧ್ಯಕ್ಷರಾಗಿ ಕರುಣಾಕರ ಅಡ್ಪಂಗಾಯ, ಪ್ರ.ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಯಾಗಿ ನವೀನ್ ಕೆ.ಬಿ., ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ವೇಳೆ ಕೃಷಿಕ ಸಮಾಜದ ನಿರ್ದೇಶಕರಾದ ಕೆ.ಸುಧಾಕರ ಪ್ರಭು, ಹರಿಪ್ರಸಾದ್, ಎ.ಶರತ್ ಕುಮಾರ್, ಎಸ್.ಎನ್. ಮನ್ಮಥ, ಎ.ಉಮನಾಥ, ನಾರಾಯಣ ಗೌಡ, ರುಕ್ಷ್ಮಯ್ಯ ಗೌಡ, ಕುಮಾರಸ್ವಾಮಿ, ಅಣ್ಣಾಜೀ ಗೌಡ, ಕೆ.ಎಸ್.ಮಹೇಶ್ ಕುಮಾರ್ ಉಪಸ್ಥಿತರಿದ್ದರು. ಸುಳ್ಯ ಸಹಾಯಕ ಕೃಷಿ ನಿರ್ದೇಶಕರು ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.