Ad Widget

ಕಲ್ಲುಗುಂಡಿ : ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿಯ ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ

ಶ್ರೀ ಅಮ್ಮನ್ ಕ್ರೆಡಿಟ್ ಸೊಸೈಟಿ, ಕಲ್ಲುಗುಂಡಿ ಇದರ ಹೊಸವಷ೯ದ ಕ್ಯಾಲೆಂಡರ್ ಬಿಡುಗಡೆ ಕಛೇರಿ ಯಲ್ಲಿ ನಡೆಯಿತು.ಕಾಯ೯ಕ್ರಮದ ಮುಖ್ಯ ಅಥಿತಿಗಳಾಗಿ ಸುನಿಲ್ ಕುಮಾರ್, ಗಣೇಶ್, ಸುಳ್ಯ ಆಗಮಿಸಿದ್ದರು. ಸಂಘದ ವ್ಯವಸ್ದಾಪಕ ಶಿವಪೆರುಮಾಲ್ ನೂತನ ಕ್ಯಾಲೆಂಡರ್ ವಿತರಿಸಿ ಶುಭಾಶಯ ಹೇಳಿದರು. ಸಂಘದ ಸದಸ್ಯರಾಗದ ಅನಿಲ್ ಕುಮಾರ್, ಮಂಜು, ಗೀತ ನಿಡ್ಯಮಲೆ ಉಪಸ್ಥಿತರಿದ್ದರು.

ಜಾಲ್ಸೂರು : ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ

ರೋಟರಿ ಕ್ಲಬ್ ಸುಳ್ಯಇವರ ನೇತೃತ್ವದಲ್ಲಿ ವಿಜಯ ಗ್ರಾಮಾಭಿವೃದ್ಧಿ ಸಮಿತಿ ಜಾಲ್ಸೂರುಹಾಗೂ ಇನ್ನಿತರ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಕಣ್ಣಿನ ಉಚಿತ ತಪಾಸಣಾ ಹಾಗೂ ಚಿಕಿತ್ಸಾ ಶಿಬಿರ ಡಿ.29ರಂದು ಜಾಲ್ಸೂರಿನ ಪಯಸ್ವಿನಿ ಪ್ರೌಢಶಾಲೆಯಲ್ಲಿನಡೆಯಿತು. ಸುಳ್ಯ ರೋಟರಿ ಕ್ಲಬ್ ಪೂರ್ವಾಧ್ಯಕ್ಷ, ಸಹಕಾರಿ ರತ್ನ ಸವಣೂರು ಸೀತಾರಾಮ ರೈಯವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, "ಬಾಲ್ಯದಲ್ಲಿಯೇ ಕಣ್ಣಿನ ತಪಾಸಣೆ ಮಾಡುವುದರಿಂದ ಮುಂದಕ್ಕೆ ಬರುವ...
Ad Widget

ಐವರ್ನಾಡು : ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌.ಎನ್.ಮನ್ಮಥ ಮೂರನೇ ಬಾರಿಗೆ ಆಯ್ಕೆ – ಉಪಾಧ್ಯಕ್ಷರಾಗಿ ಮಹೇಶ್‌ ಜಬಳೆ

ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರಾಗಿ ಎಸ್‌.ಎನ್.ಮನ್ಮಥ ಮೂರನೇ ಬಾರಿಗೆ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಮಹೇಶ್‌ ಜಬಳೆ ಅವಿರೋಧವಾಗಿ ಆಯ್ಕೆಯಾದರು.ಸಂಘದ ನಿರ್ದೇಶಕರಾದ ಸತೀಶ್ ಎಡಮಲೆ,ಚಂದ್ರಶೇಖರ ಎಸ್,ರವಿನಾಥ ಮಡ್ತಿಲ,ಮಧುಕರ ನಿಡುಬೆ,ಅನಂತಕುಮಾ‌ರ್ ಖಂಡಿಗೆಮೂಲೆ,ಪುರಂದರ ಶಾಂತಿಮೂಲೆ,ಭವಾನಿ ಎಂ.ಸಿ ದಿವ್ಯಾರಮೇಶ್‌ ಮಿತ್ತಮೂಲೆ,ನಟರಾಜ್ ಸಿ.ಕೂಪ್,ಸುಳ್ಯ ನಗರ ಪಂಚಾಯತ್‌ ಮಾಜಿ ಅಧ್ಯಕ್ಷ ಎನ್‌.ಎ.ರಾಮಚಂದ್ರ, ಗ್ರಾ.ಪಂ ಅಧ್ಯಕ್ಷೆ ಶ್ರೀಮತಿ ಲೀಲಾವತಿ ಕುತ್ಯಾಡಿ ಉಪಸ್ಥಿತರಿದ್ದರು.

ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್‌ ರೈ ಕೆಡೆಂಜಿ ಅವಿರೋಧ ಆಯ್ಕೆ

ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್‌ ರೈ ಕೆಡೆಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್ ಕೋಶಾಧಿಕಾರಿಯಾಗಿ ಜಯರಾಮ್ ಭಟ್, ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್ ಕೆ. ಸವಣೂರು ಅವಿರೋಧವಾಗಿ ಆಯ್ಕೆಯಾದರು. ನಿರ್ದೇಶಕರುಗಳಾಗಿ ಡಾ ಸುರೇಶ್ ಕುಮಾ‌ರ್ ಕುಡೂರು, ಬಾಳಪ್ಪ ಪೂಜಾರಿ, ಉದಯ ರೈ ಮಾದೋಡಿ, ಇ.ಎಸ್ ವಾಸುದೇವ ಇಡ್ಯಾಡಿ, ತಾರಾನಾಥ ಕಾಯರ್ಗ, ರಾಜಾರಾಮ...

ಜನವರಿ 03 : ಸುಳ್ಯದಲ್ಲಿ ವಿದ್ಯುತ್ ವ್ಯತ್ಯಯ

33ಕೆ.ವಿ. ಕಾವು- ಸುಳ್ಯ ಏಕಪಥ ಮಾರ್ಗವನ್ನು ಕೌಡಿಚ್ಯಾರಿನಿಂದ ಕಾವು ಜಂಕ್ಷನ್ ವರೆಗೆ ದ್ವಿಪಥ ಮಾರ್ಗವಾಗಿ ಬದಲಾಯಿಸುವ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ದಿನಾಂಕ: 03-01-2025 (ಶುಕ್ರವಾರ) ರ ಪೂರ್ವಾಹ್ನ 09:30 ರಿಂದ ಸಾಯಂಕಾಲ 05:00 ಗಂಟೆಯವರೆಗೆ 33ಕೆ.ವಿ. ಕಾವು - ಸುಳ್ಯ ವಿದ್ಯುತ್ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು. ಆದ್ದರಿಂದ 33/11ಕೆ.ವಿ. ಕಾವು ಹಾಗೂ ಸುಳ್ಯ ವಿದ್ಯುತ್ ಉಪಕೇಂದ್ರದಿಂದ...

ಚೆನ್ನಕೇಶವ ದೇವಸ್ಥಾನಕ್ಕೆ ಬ್ರಹ್ಮರಥ ಸಮರ್ಪಣೆ

ಸುಳ್ಯ ಚೆನ್ನಕೇಶವ ದೇವಸ್ಥಾನಕ್ಕೆ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ.ಕೆ.ವಿ.ಚಿದಾನಂದಹಾಗೂ ಮನೆಯವರು ನೀಡುತ್ತಿರುವ ಬ್ರಹ್ಮರಥದ ಸಮರ್ಪಣಾ ಕಾರ್ಯಕ್ರಮ ಇಂದು ಬೆಳಗ್ಗೆ ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ಆರೋತ್ ಪದ್ಮನಾಭ ತಂತ್ರಿಗಳ ಮರ್ಗದರ್ಶನದಲ್ಲಿ ವೈದಿಕ ಕಾರ್ಯಕ್ರಮಗಳು ನೆರವೇರಿದ ಬಳಿಕ ಡಾ|ಕೆ.ವಿ.ಚಿದಾನಂದ, ಶ್ರೀಮತಿ ಶೋಭಾ ಚಿದಾನಂದ, ಅಕ್ಷಯ್ ಕೆ.ಸಿ. ಡಾ.ಐಶ್ವರ್ಯ ಕೆ.ಸಿ., ಡಾ.ಗೌತಮ್ ಹಾಗೂ ಕುರುಂಜಿ ಮನೆಯವರಿದ್ದು ದೇವಸ್ಥಾನಕ್ಕೆ...

ಡಿ.31: ವಳಲಂಬೆಯಲ್ಲಿ ಪಾರಿಜಾತ ಅಕ್ಷಯಾಂಬರ ಕುಶ – ಲವ ಯಕ್ಷಗಾನ

ಯಕ್ಷಗಾನ ಕಲಾಭಿಮಾನಿ ಮಿತ್ರರು ಎಲಿಮಲೆ - ಗುತ್ತಿಗಾರು ಇವರ ಸಂಯೋಜನೆಯಲ್ಲಿ ಹನುಮಗಿರಿ ಮೇಳದ "ಪಾರಿಜಾತ ಅಕ್ಷಯಾಂಬರ ಕುಶ-ಲವ" ಯಕ್ಷಗಾನ ಪ್ರದರ್ಶನ ಡಿ.31 ರ ಸಂಜೆ 6.30 ರಿಂದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ನಡೆಯಲಿದೆ.

ಕುಕ್ಕೆ ಸುಬ್ರಹ್ಮಣ್ಯ : ಜ.02 ರಿಂದ 05 ರವರೆಗೆ ಕಿರುಷಷ್ಠಿ ಮಹೋತ್ಸವ

ರಾಜ್ಯದ ಪ್ರಸಿದ್ಧ ಪುಣ್ಯಕ್ಷೇತ್ರ, ನಾಗಾರಾಧನೆಯ ಪುಣ್ಯ ತಾಣ ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ 2025ರ ಜ.02 ರಿಂದ 05 ರವರೆಗೆ ಕಿರುಷಷ್ಠಿ ಮಹೋತ್ಸವವು ನಡೆಯಲಿದ್ದು, ಜ.02 ಗುರುವಾರದಂದು ಸಂಜೆ 5:00 ರಿಂದ 6:30 ರವರೆಗೆ ಕಿರುಷಷ್ಠಿ ಸಾಂಸ್ಕೃತಿಕ ವೇದಿಕೆಯಲ್ಲಿ ಧರ್ಮ ಸಮ್ಮೇಳನ ಹಾಗೂ ಸಭಾ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಕರ್ನಾಟಕ ಸರ್ಕಾರದ ಆರೋಗ್ಯ...

ಚಿನ್ನಪ್ಪ ಗೌಡ ಹೆರ್ಕಜೆ ನಿಧನ

ದೇವಚಳ್ಳ ಗ್ರಾಮದ ಹೆರ್ಕಜೆ ಚಿನ್ನಪ್ಪ ಗೌಡ ಎಂಬುವವರು ಅಲ್ಪಕಾಲದ ಅಸೌಖ್ಯದಿಂದ ಇಂದು(ಡಿ.30) ಬೆಳಗ್ಗಿನ ಜಾವ 3:30ರ ಸುಮಾರಿಗೆ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನರಾದರು. ಮೃತರಿಗೆ 70 ವರ್ಷ ವಯಸ್ಸಾಗಿದ್ದು, ಮೃತರು ಪತ್ನಿ, ಮಕ್ಕಳು, ಅಳಿಯಂದಿರು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.ಮೃತರ ಅಂತ್ಯಸಂಸ್ಕಾರವು ಇಂದು ಮದ್ಯಾಹ್ನದ ನಂತರ ಮೃತರ ಸ್ವಗೃಹದಲ್ಲಿ ನೆರವೇರಲಿದೆ ಎಂದು ಆಪ್ತರು ತಿಳಿಸಿದ್ದಾರೆ.

ಸುಳ್ಯ ಕೃಷಿಕ ಸಮಾಜದ ಪದಾಧಿಕಾರಿಗಳ ಅವಿರೋಧ ಆಯ್ಕೆ – ಅಧ್ಯಕ್ಷರಾಗಿ ಎ.ಟಿ. ಕುಸುಮಾಧರ, ಉಪಾಧ್ಯಕ್ಷರಾಗಿ ಕರುಣಾಕರ ಅಡ್ಪಂಗಾಯ, ಪ್ರ.ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಯಾಗಿ ನವೀನ್ ಕೆ.ಬಿ

ಸುಳ್ಯ ಕೃಷಿಕ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಇಂದು ನಡೆದಿದೆ.  ಅಧ್ಯಕ್ಷತೆ,ಉಪಾಧ್ಯಕ್ಷತೆ, ಕಾರ್ಯದರ್ಶಿ, ಕೋಶಾಧಿಕಾರಿ ಹುದ್ದೆಗೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ  ಅವಿರೋಧ ಆಯ್ಕೆ ನಡೆದಿದೆ. ಅಧ್ಯಕ್ಷರಾಗಿ ಎ.ಟಿ. ಕುಸುಮಾಧರ, ಉಪಾಧ್ಯಕ್ಷರಾಗಿ ಕರುಣಾಕರ ಅಡ್ಪಂಗಾಯ, ಪ್ರ.ಕಾರ್ಯದರ್ಶಿಯಾಗಿ ಶ್ಯಾಮ್ ಪ್ರಸಾದ್, ಕೋಶಾಧಿಕಾರಿಯಾಗಿ ನವೀನ್ ಕೆ.ಬಿ., ಹಾಗೂ ಜಿಲ್ಲಾ ಪ್ರತಿನಿಧಿಯಾಗಿ ಚಂದ್ರ ಕೋಲ್ಚಾರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ವೇಳೆ ಕೃಷಿಕ...
Loading posts...

All posts loaded

No more posts

error: Content is protected !!