- ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘ ಇದರ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರ ಮತ ಎಣಿಕೆ ಪೂರ್ತಿಯಾಗಿದ್ದು 7 ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು 5 ಸ್ಥಾನಗಳಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು ಕಂಡಿದ್ದಾರೆ.
ಮಡಪ್ಪಾಡಿ ಕೃಷಿ ಪತ್ತಿನ ಸಹಕಾರಿ ಸಂಘದ 12 ನಿರ್ದೇಶಕ ಸ್ಥಾನಕ್ಕೆ ಚುನಾವಣೆ ನಡೆದಿದ್ದು ಇದರಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯ 7 ಅಭ್ಯರ್ಥಿಗಳು ಹಾಗೂ ಕಾಂಗ್ರೆಸ್ ಬೆಂಬಲಿತ 5 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಈ ಮೂಲಕ 30 ವರ್ಷಗಳ ಕಾಂಗ್ರೆಸ್ ಅಧಿಕಾರ ಅಂತ್ಯಗೊಂಡಿದೆ.
ಸಾಮಾನ್ಯ ಸ್ಥಾನದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾದ ವಿನಯ ಕುಮಾರ್ ಮುಳುಗಾಡು, ಹಾಗೂ ಕರುಣಾಕರ ಪಾರೆಪ್ಪಾಡಿ, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾದ ಪಿ.ಸಿ.ಜಯರಾಮ್, ಮಿತ್ರದೇವ ಮಡಪ್ಪಾಡಿ, ಸೋಮಶೇಖರ ಕೇವಳ, ಚಂದ್ರಶೇಖರ ಗುಡ್ಡೆ.
ಮಹಿಳಾ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳಾಗಿ ಶಕುಂತಲಾ ಕೇವಳ. ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಾಗಿ ಪ್ರವೀಣಾ ಪಾಲ್ತಾಡು
ಹಿಂದುಳಿದ ‘ಬಿ’ ವರ್ಗದಿಂದ ಸಚಿನ್ ಬಳ್ಳಡ್ಕ,
ಹಿಂದುಳಿದ ‘ಎ’ ವರ್ಗದಿಂದ ಬಿಜೆಪಿ ಬೆಂಬಲಿತ ಬಿಜೆಪಿ ಶಿವರಾಮ ಆಚಾರಿ ಚಿರೆಕಲ್ಲು,
ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿ ಆನಂದ ಶೆಟ್ಟಿಮಜಲು,
ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ಪ್ರದೀಪ್ ಕುಮಾರ್.ಪಿ.ಬಿ ಇವರು ಗೆಲುವನ್ನು ಪಡೆದಿರುತ್ತಾರೆ.