ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಭರ್ಜರಿ ಗೆಲುವು ದಾಖಲಿಸಿದೆ. ಎಲ್ಲಾ 12 ನಿರ್ದೇಶಕ ಸ್ಥಾನಗಳಲ್ಲಿಯೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ದಯಾನಂದ ಕುರುಂಜಿ, ಸಂತೋಷ್ ಕುತ್ತಮೊಟ್ಟೆ, ಚಂದ್ರಶೇಖರ ಚೋಡಿಪಣೆ, ಶಿವಾನಂದ ಕುಕ್ಕುಂಬಳ, ಉದಯಕುಮಾರ್ ಉಳುವಾರು. ಮಹಿಳಾ ಕ್ಷೇತ್ರದಿಂದ ಶ್ರೀಲತಾ ದೇರಾಜೆ, ಲೋಚನ ಕೊಳಲುಮೂಲೆ, ಹಿಂದುಳಿದ ವರ್ಗ ಎ ಸ್ಥಾನದಿಂದ ಚಂದ್ರಶೇಖರ ಎ.ಎಸ್, ಹಿಂದುಳಿದ ವರ್ಗ ಬಿ ಸ್ಥಾನಕ್ಕೆ ಡಾ.ಲಕ್ಷ್ಮೀಶ ಕಲ್ಲುಮುಟ್ಲು, ಪರಿಶಿಷ್ಟ ಪಂಗಡ ಮೀಸಲು ಕ್ಷೇತ್ರದಿಂದ ದಿನೇಶ್ ಅರಮನೆಗಯ, ಪರಿಶಿಷ್ಟ ಜಾತಿ ಕ್ಷೇತ್ರದಿಂದ ಪದ್ಮಯ್ಯ ಅಡ್ಯಡ್ಕ ಹಾಗೂ ಸಾಲಗಾರರಲ್ಲದ ಕ್ಷೇತ್ರದಿಂದ ಪ್ರಶಾಂತ ಕಾಪಿಲ ಗೆಲುವು ಸಾಧಿಸಿದ್ದಾರೆ.