ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ತುಳುನಾಡಿನ ಮಣ್ಣಿನ ಸೊಗಡನ್ನು ಪಸರಿಸುತ್ತಿರುವ ದೆಹಲಿ ತುಳುಸಿರಿಯ ಅಧ್ಯಕ್ಷರಾಗಿ ದೆಹಲಿ ಕರ್ನಾಟಕ ಸಂಘ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಮಾಜಿ ಅಧ್ಯಕ್ಷರು ಹಾಗೂ ಸಾಂಸ್ಕೃತಿಕ ಸಂಘಟಕರು, ನಾಯಕರಾಗಿರುವ ಶ್ರೀ ವಸಂತ ಶೆಟ್ಟಿ ಬೆಳ್ಳಾರೆ ಅವರು ಪುನರಾಯ್ಕೆ ಆಗಿದ್ದಾರೆ.
ಉಪಾಧ್ಯಕ್ಷರುಗಳಾಗಿ ಬಿ. ಪ್ರದೀಪ್, ಶ್ರೀಮತಿ ಮಾಲಿನಿ ಪ್ರಹ್ಲಾದ್, ಕಾರ್ಯದರ್ಶಿಯಾಗಿ ಅರವಿಂದ ಬಿಜೈ, ಜೊತೆ ಕಾರ್ಯದರ್ಶಿಗಳಾಗಿ ಪ್ರಕಾಶ್ ಶೆಟ್ಟಿ ಉಳೆಪಾಡಿ, ಕೃಷ್ಣರಾಜ್ ಕೆ. ಎನ್., ಖಜಾಂಚಿಯಾಗಿ ವಿಖ್ಯಾತ್ ಸಿ. ಶೆಟ್ಟಿ, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ಲಕ್ಷ್ಮಣ್ ನಾಯ್ಕ, ಶ್ರೀಮತಿ ಡ್ಯಾರೆಲ್ ಜೆಸ್ಸಿಕಾ ಫೆನಾಂಡಿಸ್, ಹರ್ಷಿತಾ ಎಸ್. ಕೆ., ಪ್ರಶಾಂತ್ ಕುಮಾರ್, ಮೆಲ್ವಿನ್ ಗ್ಯಾಬ್ರೆಲ್ ಲೋಬೊ, ಕಾರ್ತಿಕ್ ರೈ, ರವಿ, ಯು. ಎ. ಶರೀಫ್, ರಾಘವೇಂದ್ರ ನಾಯ್ಕ, ಶ್ರೀಮತಿ ಶುಭಾ ದೇವಿಪ್ರಸಾದ್, ಶ್ರೀಮತಿ ನಿರ್ಮಲಾ ನಾಗೇಶ್, ಶ್ರೀಮತಿ ಅಶ್ವಿತಾ ಮಿಥೇಶ್ ಶೆಟ್ಟಿ ಅವರು ಆಯ್ಕೆಯಾಗಿರುತ್ತಾರೆ.