ನಿಸರ್ಗ ಯುವಕ ಮಂಡಲ ಐನೆಕಿದು ಇದರ ಬೆಳ್ಳಿಹಬ್ಬ ಸಂಭ್ರಮದ ಪ್ರಯುಕ್ತ ಐನೆಕಿದು ಮೈದಾನದಲ್ಲಿ ನಡೆಯಬೇಕಿದ್ದ ಎಲ್ಲಾ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದು, ಡಿ.22 ರಂದು ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ, ಡಿ.28 ರಂದು ಹಗ್ಗಜಗ್ಗಾಟ, ಡಿ.29 ರಂದು ವಾಲಿಬಾಲ್ ಹಾಗೂ ಎರಡೂ ದಿನ ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಡ್ಯಾನ್ಸ್ & ಬೀಟ್ಸ್, ಕುಮಾರ ವೈಭವ ಹಾಗೂ ತುಳು ಪೌರಾಣಿಕ ಭಕ್ತಿ ಪ್ರಧಾನ ನಾಟಕ “ಕಲ್ಜಿಗದ ಮಾಯ್ಕಾರೆ ಪಂಜುರ್ಲಿ” ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿದ್ದು, ಮುಂದಿನ ದಿನಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗುವುದು. ಸಾರ್ವಜನಿಕರು ಸಹಕರಿಸುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- January 8th, 2025