ಗುತ್ತಿಗಾರಿನ ದೇವಿಸಿಟಿ ಕಾಂಪ್ಲೆಕ್ಸ್ ನಲ್ಲಿ ಡಿ.20,21 ಮತ್ತು 22 ರಂದು ನಡೆದ ಕಬಡ್ಡಿ ಪಂದ್ಯಾಟದಲ್ಲಿ ಭಾಗವಹಿಸಲು ಬಂದಿದ್ದ ಅರಂತೋಡಿನ ಉಳುವಾರು ಪ್ರಪುಲ್ ಎಂಬ ಕಬಡ್ಡಿ ಆಟಗಾರನ ಸುಮಾರು ಎರಡೂವರೆ ಪವನ್ ನ ಸುಮಾರು ಅಂದಾಜು ಒಂದುವರೆ ಲಕ್ಷ ಮೌಲ್ಯದ ಚಿನ್ನದ ಸರ ಬಿದ್ದು ಹೋಗಿತ್ತು. ಆ ಚಿನ್ನದ ಸರ ಅದೇ ದಿನ ದೇವಿ ಸಿಟಿ ಕಾಂಪ್ಲೆಕ್ಸ್ ಮಾಲಕ ದೇವಿಪ್ರಸಾದ್ ಚಿಕ್ಮುಳಿ ಇವರ ತಂದೆ ದೊಡ್ಡಣ್ಣ ಗೌಡ ಚಿಕ್ಮುಳಿ ಇವರಿಗೆ ಬಿದ್ದು ಸಿಕ್ಕಿದ್ದು, ಅವರು ತಕ್ಷಣವೇ ಅದನ್ನು ಪ್ರಾಮಾಣಿಕತೆಯಿಂದ ಪಂದ್ಯಾಟದಲ್ಲಿ ಆಡಲು ಬಂದಿದ್ದ ಪ್ರಪುಲ್ ಇವರಿಗೆ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಇವರ ಪ್ರಾಮಾಣಿಕತೆಗೆ ಪ್ರಶಂಸೆ ವ್ಯಕ್ತವಾಗಿದೆ.
- Wednesday
- January 8th, 2025