ಅಜ್ಜಾವರ ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ನೇತೃತ್ವದಲ್ಲಿ ಅಜ್ಜಾವರ ಗ್ರಾ.ಪಂ ವ್ಯಾಪ್ತಿಯಲ್ಲಿ ಸೌಲಭ್ಯ ವಂಚಿತರ ಅರ್ಜಿ ವಿಲೇವಾರಿ ಶಿಬಿರವು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಿತು.ಸಭೆಯ ಅಧ್ಯಕ್ಷತೆಯನ್ನು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷಾರದ ಶಾಹುಲ್ ಹಮೀದ್ ಕುತ್ತಮೊಟ್ಟೆ ವಹಿಸಿದ್ದರು ಸಭೆಯಲ್ಲಿ , ಜಿಲ್ಲಾ ಸಮಿತಿ ಸದಸ್ಯ ರಂಜಿತ್ ರೈ ಮೇನಾಲ , ತಾ.ಪಂ ಇ ಒ ರಾಜಣ್ಣ , ಸಿಡಿಪಿಒ ಶೈಲಜಾ , ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ಅಬ್ಬಾಸ್ ಅಡ್ಪಂಗಾಯ , ಶೇಖರ ಮಣಿಯಾಣಿ , ಧನುಷ್ ಕುಕ್ಕೇಟಿ , ಲತೀಫ್ ಅಡ್ಕಾರ್, ಗ್ರಾ.ಪಂ ಸದಸ್ಯ ಅಬ್ದುಲ್ಲ ಎ , ಗ್ರಾ.ಮ ಆಡಳಿತಾಧಿಕಾರಿ ಶ್ರೀಕಲಾ , ಮಾಜಿ ಉಪಾಧ್ಯಕ್ಷೆ ಲೀಲಾ ಮನಮೋಹನ್ , ಸುಜಾತ , ಮಾಜಿ ಅಧ್ಯಕ್ಷರು ಹಾಲಿ ಸದಸ್ಯರಾದ ಪ್ರಸಾದ್ ರೈ ಮೇನಾಲ ಸೇರಿದಂತೆ ನಾನಾ ಇಲಾಖೆಗಳ ಸಿಬ್ಬಂದಿಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸರಕಾರಿ ಬಸ್ಸುಗಳ ಸಮಸ್ಯೆಗಳ ಕುರಿತು ಅಬ್ಬಾಸ್ ರವರು ಸಭೆಯಲ್ಲಿ ತಿಳಿಸಿದಾಗ ಇ ಒ ರಾಜಣ್ಣ ಮಾತನಾಡಿ ಇದನ್ನು ಎಂ ಡಿಯ ಮೂಲಕ ಬಗೆಹರಿಸುವ ಪ್ರಯತ್ನ ಮಾಡುತ್ತೇವೆ. ಈ ಬಗ್ಗೆ ಅರ್ಜಿಯನ್ನು ತಾಲೂಕು ಸಮಿತಿಗೆ ಸಲ್ಲಿಸಿದಲ್ಲಿ ಅದನ್ನು ಅಧ್ಯಕ್ಷರ ಮೂಲಕ ಜಿಲ್ಲೆಗೆ ಕಳುಹಿಸಿ ಕೊಟ್ಟು ಬಸ್ಸಿನ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು. ಪಡಿತರ ಚೀಟಿ ಆಗದೇ ಹಲವಾರು ಜನ ಸಮಸ್ಯೆಗೆ ಒಳಗಾಗಿದ್ದು ಅವುಗಳನ್ನು ಸರಕಾರದ ಮಟ್ಟದಲ್ಲಿ ಮಾತುಕತೆ ನಡೆಯುತ್ತಿದೆ. ಕಾನೂನು ತೊಡಕುಗಳಿದ್ದು ಶೀಘ್ರ ಅವುಗಳ ವ್ಯವಸ್ಥೆ ಕೂಡ ಆಗಲಿದೆ ಎಂದು ಹೇಳಿದರು.
ಗೃಹ ಲಕ್ಷ್ಮಿ ಹಣ ಖಾತೆಗೆ ಬಾರದೇ ಇರುವ ಬಗ್ಗೆ ಚರ್ಚೆ ಸಭೆಯಲ್ಲಿ ಪ್ರಸ್ತಾಪವಾಯಿತು. ಜಿಎಸ್ ಟಿ ಪಾವತಿಸುವವರಿಗೆ ಹಾಗೂ ಆದಾಯ ತೆರಿಗೆ ಇಲಾಖೆಯು ಪ್ಯಾನ್ ಕಾರ್ಡ್ ಗಳಿಗೆ ಒಂದು ಸಾವಿರ ಫೈನ್ ಹಾಕಲಾಗಿದ್ದರ ಪರಿಣಾಮವಾಗಿ ಇದೀಗ ಕೆಲವರಿಗೆ ಬರುತ್ತಿಲ್ಲ. ಈ ಬಗ್ಗೆ ಸರಕಾರವು ಸೂಕ್ತವಾಗಿ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಮಾಹಿತಿ ನೀಡಿದರು. ಅಲ್ಲದೇ ಗ್ಯಾರಂಟಿ ಸೌಲಭ್ಯ ಸಿಗದೇ ಇರುವವರ ಆಗಮಿಸಿ ತಮ್ಮ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಪರಿಶೀಲನೆ ನಡೆಸಿದರು. ಲೀಲಾ ಮನಮೋಹನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ , ಜಯಮಾಲ ಎ ಕೆ ವಂದಿಸಿದರು.