ಆಧುನಿಕ ಸುಳ್ಯದ ನಿರ್ಮಾತೃ ಶಿಕ್ಷಣ ಬ್ರಹ್ಮ ಕೆವಿಜಿ ಸಮೂಹ ಸಂಸ್ಥೆಗಳ ಸ್ಥಾಪಕ ಅಧ್ಯಕ್ಷರಾದ ದಿ. ಕುರುಂಜಿ ವೆಂಕಟರಮಣ ಗೌಡರ 96 ನೇ ವರ್ಷದ ಜನ್ಮ ದಿನಾಚರಣೆ ಮತ್ತು ಪುಷ್ಪ ನಮನ ಕಾರ್ಯಕ್ರಮ ಡಿಸೆಂಬರ್ 26 ರಂದು ಕೆವಿಜಿ ಮಾತೃಸಂಸ್ಥೆ ಎನ್ನೆಂಸಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಡಾ. ರುದ್ರಕುಮಾರ್ ಎಂ ಎಂ ದೀಪ ಬೆಳಗಿ ಡಾ. ಕೆವಿಜಿ ಸಾಧನೆ ಹಾಗೂ ಅವರ ತತ್ವ ಆದರ್ಶಗಳ ಬಗ್ಗೆ ವಿವರಿಸಿದರು. ಎನ್ನೆಂಪಿಯುಸಿ ಪ್ರಾಂಶುಪಾಲರಾದ ಮಿಥಾಲಿ. ಪಿ. ರೈ, ಪದವಿ ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನ ಅಧಿಕಾರಿ ರತ್ನಾವತಿ ಡಿ, ಐಕ್ಯೂಎಸಿ ಸಂಯೋಜಕರಾದ ಡಾ. ಮಮತಾ ಕೆ ಮತ್ತು ಎಲ್ಲಾ ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಪುಷ್ಪ ನಮನ ಸಲ್ಲಿಸಿದರು. ಕನ್ನಡ ಉಪನ್ಯಾಸಕಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು
- Wednesday
- January 8th, 2025