ಸುಳ್ಯ: ಸುಳ್ಯವನ್ನು ಶಿಕ್ಷಣ ಕಾಶಿಯಾಗಿ ಕಟ್ಟಿ ಸುಳ್ಯದ ಬೆಳಕಾಗಿ ಕಂಗೊಳಿಸಿದ ಕೆ ವಿ ಜಿ ಯವರ ಹಿರಿಯ ಪುತ್ರ ಚೆನ್ನಕೇಶವ ದೇವಾಲಯದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಕೆ ವಿ ಚಿದಾನಂದ ಮತ್ತು ಮನೆಯವರು ಸುಮಾರು 1.10 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸಿದ ನೂತನ ಭ್ರಹ್ಮರಥವು ದಿ. 24 ರಂದು ಹೊರಟು ಇಂದು ಚೆನ್ನಕೇಶವನ ಪುಣ್ಯ ಭೂಮಿಯಾದ ಸುಳ್ಯವನ್ನು ಪ್ರವೇಶಿಸಿತು . ಈ ಸಂದರ್ಭದಲ್ಲಿ ಸುಳ್ಯದ ಜನತೆ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಭವ್ಯವಾದ ರಥಕ್ಕೆ ಹೂ ಮಳೆ ಸುರಿಸಿ ಅದ್ದೂರಿಯಾಗಿ ಸ್ವಾಗತಿಸಿದರು . ಭವ್ಯವಾದ ಮೆರವಣಿಗೆಯಲ್ಲಿ ಭಜನಾ ತಂಡ ನಾಸಿಕ್, ಬ್ಯಾಂಡ್ ಚೆಂಡೆ ವಾದನಗಳ ಜೊತೆಗೆ ಬೊಂಬೆ ಕುಣಿತಗಳು ನೋಡುವರ ಮನಸೂರೆ ಗೊಳಿಸಿದವು .
ಡಿ.31 ರಂದು ಡಾ. ಕೆ ವಿ ಚಿದಾನಂದ ಮತ್ತು ಕುಟುಂಬಸ್ಥರು ಶ್ರೀ ಚೆನ್ನಕೇಶವ ದೇವರಿಗೆ ಬ್ರಹ್ಮ ಸಮರ್ಪಣೆ ಮಾಡಲಿದ್ದಾರೆ.