ಪಂಜ ಆಟೋ ರಿಕ್ಷಾ ಚಾಲಕರ ಸಂಘದ ಸದಸ್ಯ, ಬಳ್ಪ ಗ್ರಾಮದ ಕಾಂಜಿ ವಾಸುದೇವ ಗೌಡ ಮತ್ತು ಶ್ರೀಮತಿ ದೇವಕಿ ದಂಪತಿಗಳ ಪುತ್ರ ಮನೋಜ್ ಕುಮಾರ್ (32) ಅಲ್ಪ ಕಾಲದ ಅಸೌಖ್ಯದಿಂದ ಸುಳ್ಯದ ಆಸ್ಪತ್ರೆಯಲ್ಲಿ ಡಿ.25 ರಾತ್ರಿ ನಿಧನರಾದರು.. ಪಂಜದಲ್ಲಿ ಅನೇಕ ವರ್ಷಗಳಿಂದ ಆಟೋ ರಿಕ್ಷಾ ಬಾಡಿಗೆ ನಡೆಸುತ್ತಿದ್ದ ಅವರು ಕೆಲವು ವರ್ಷಗಳಿಂದ ಪಂಜದಲ್ಲಿ ಗೂಡ್ಸ್ ರಿಕ್ಷಾ ಬಾಡಿಗೆ ನಡೆಸುತ್ತಿದ್ದರು. ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ
.