ಸುಳ್ಯದ ಆಕಾಡೆಮಿ ಆಫ್ ಲಿಬರಲ್ ಎಜ್ಯುಕೇಷನ್ ಅಧ್ಯಕ್ಷರಾದ ಡಾ. ಕೆ.ವಿ ಚಿದಾನಂದ ರವರು ಸುಳ್ಯ ಚೆನ್ನಕೇಶವ ದೇವರಿಗೆ ನೂತನ ಬ್ರಹ್ಮರಥವನ್ನು ಕೊಡುಗೆಯಾಗಿ ನೀಡುತ್ತಿದ್ದು, ರಥವು ಇಂದು(ಡಿ.25) ಸುಳ್ಯಕ್ಕೆ ತಲುಪಲಿದ್ದು, ಡಿ.31 ರಂದು ಡಾ| ಕೆ.ವಿ ಚಿದಾನಂದ ಹಾಗೂ ಮನೆಯವರಿಂದ ದೇವಳದ ತಂತ್ರಿವರ್ಯರ ಸಮಕ್ಷಮದಲ್ಲಿ “ಬ್ರಹ್ಮರಥ ಸಮರ್ಪಣಾ ಕಾರ್ಯಕ್ರಮ” ನಡೆಯಲಿದೆ.
ಈ ಬ್ರಹ್ಮರಥದ ನಿರ್ಮಾಣ ಕಾರ್ಯವು ಬ್ರಹ್ಮರಥ ಶಿಲ್ಪಿ ಶ್ರೀ ರಾಜಗೋಪಾಲ ಆಚಾರ್ಯರ ಕೋಟೇಶ್ವರ ಶಿಲ್ಪಕಲಾ ಕೇಂದ್ರದಲ್ಲಿ ನಡೆದಿದ್ದು, ಈ ಬ್ರಹ್ಮರಥದ ನಿರ್ಮಾಣ ಕಾರ್ಯದಲ್ಲಿ ಸುಳ್ಯ ತಾಲೂಕಿನ ಮೂವರು ಯುವಕರು ಪಾಲ್ಗೊಂಡಿದ್ದು, ಬಾಳುಗೋಡು ಗ್ರಾಮದ ಕೀರ್ತನ್, ಗುತ್ತಿಗಾರು ಗ್ರಾಮದ ಪುನೀತ್ ತುಪ್ಪದಮನೆ ಹಾಗೂ ಮುಪ್ಪೇರ್ಯ ಗ್ರಾಮದ ಸಂದೇಶ್ ಕಾಯರಮನೆ ಬ್ರಹ್ಮರಥದ ನಿರ್ಮಾಣ ಕಾರ್ಯದಲ್ಲಿ ಪಾಲ್ಗೊಂಡವರು.(ವರದಿ : ಉಲ್ಲಾಸ್ ಕಜ್ಜೋಡಿ)
- Wednesday
- January 8th, 2025